ನವದೆಹಲಿ:ಬಾಲಿವುಡ್ ನಟ ಸಲ್ಮಾನ್ ಖಾನ್ ಸೇರಿ 38 ಪ್ರಮುಖ ತಾರೆಯರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೆಹಲಿಯ ತೀಸ್ ಹಜಾರಿ ಕೋರ್ಟ್ನ ವಕೀಲರೊಬ್ಬರು ದೂರು ದಾಖಲು ಮಾಡಿದ್ದಾರೆ. ಇದರಲ್ಲಿ ಪ್ರಸಿದ್ದ ನಟ-ನಟಿಯರು, ಕ್ರಿಕೆಟರ್ಸ್ ಹಾಗೂ ನಿರ್ದೇಶಕರು ಇದ್ದಾರೆ.
2019ರಲ್ಲಿ ಹೈದರಾಬಾದ್ನಲ್ಲಿ ನಡೆದ ಯುವತಿಯ ಅತ್ಯಾಚಾರ-ಕೊನೆ ಪ್ರಕರಣದ ವಿಚಾರವಾಗಿ ಈ ದೂರು ದಾಖಲಾಗಿದೆ. ಅತ್ಯಾಚಾರ ಸಂತ್ರಸ್ತೆಯ ಗುರುತು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿರುವ ಆರೋಪ ಇವರ ಮೇಲಿದ್ದು, ತೀಸ್ ಹಜಾರಿ ಕೋರ್ಟ್ನ ವಕೀಲರು ಇದೀಗ ದೂರು ದಾಖಲು ಮಾಡಿದ್ದಾರೆ. ವಕೀಲ ಗೌರವ್ ಗುಲಾಟಿ ಕೋರ್ಟ್ನಲ್ಲಿ ದೂರು ದಾಖಲು ಮಾಡಿದ್ದು,ಸಂತ್ರಸ್ತೆ ಗುರುತು ಬಹಿರಂಗಪಡಿಸಿದ್ದರಿಂದ ಆಕೆಯ ಗೌರವಕ್ಕೆ ಧಕ್ಕೆ ತಂದಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿರಿ: ಎಸ್ಪಿ ಹೆಸರಿನಲ್ಲಿ ನಕಲಿ ಪೊಲೀಸ್ ಆದೇಶ ಪ್ರತಿ ಸಿದ್ಧಪಡಿಸಿ ವಂಚನೆ... ಮೋಸ ಹೋಗದಂತೆ ಮನವಿ
ಸಂತ್ರಸ್ತೆಯ ಗುರುತು ಬಹಿರಂಗಪಡಿಸುವುದು ಕಾನೂನು ಪ್ರಕಾರ ಅಪರಾಧವಾಗಿದ್ದು, ಎಲ್ಲರ ವಿರುದ್ಧ ವಾರಂಟ್ ಜಾರಿ ಮಾಡುವ ಜೊತೆಗೆ ಬಂಧನ ಮಾಡುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಬ್ಜಿ ಮಂಡಿ ಠಾಣೆ ಪೊಲೀಸರು ಪ್ರಕರಣ ಸಹ ದಾಖಲು ಮಾಡಿಕೊಂಡಿದ್ದಾರೆ. ಇವರ ದೂರಿನಲ್ಲಿ ಪ್ರಮುಖವಾಗಿ ಎಲ್ಲ ಸೆಲೆಬ್ರಿಟಿಗಳ ಟ್ವೀಟ್ಗಳ ಉಲ್ಲೇಖ ಮಾಡಲಾಗಿದ್ದು, ಎಲ್ಲರೂ ಮಾಡಿದ್ದ ಟ್ವೀಟ್ಗಳು ಹೈದರಾಬಾದ್ ಅತ್ಯಾಚಾರ ಸಂತ್ರಸ್ತೆಯ ಗುರುತು ಬಹಿರಂಗಪಡಿಸಿವೆ. ಇದು ಸುಪ್ರೀಂಕೋರ್ಟ್ನ ಮಾರ್ಗಸೂಚಿಯ ಉಲ್ಲಂಘನೆ ಸಹ ಆಗಿದೆ.
ಯಾರೆಲ್ಲ ವಿರುದ್ಧ ದೂರು?:ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಅಜಯ್ ದೇವಗನ್, ಅಭಿಷೇಕ್ ಬಚ್ಚನ್, ಫರ್ಹಾನ್ ಅಖ್ತರ್, ಅನುಪಮ್ ಖೇರ್, ಅರ್ಮಾನ್ ಮಲಿಕ್, ಕರಮ್ವೀರ್ ವೋಹ್ರಾ, ಬಾಲಿವುಡ್ ನಿರ್ದೇಶಕ ಮಧುರ್ ಬಂಡಾರ್ಕರ್, ದಕ್ಷಿಣ ಭಾರತದ ನಟ ರವಿತೇಜ್, ಅಲ್ಲು ಸಿರೀಶ್, ಕ್ರಿಕೆಟಿಗರಾದ ಹರಭಜನ್ ಸಿಂಗ್, ಶಿಖರ್ ಧವನ್, ಸೈನಾ ನೆಹ್ವಾಲ್, ನಟಿ ಪರಿಣೀತಾ ಚೋಪ್ರಾ, ದಿಯಾ ಮಿರ್ಜಾ, ಸ್ವರಾ ಭಾಸ್ಕರ್, ರಕುಲ್ ಪ್ರೀತ್, ಜರೀನ್ ಖಾನ್, ಯಾಮಿ ಗೌತಮ್, ರಿಚಾ ಚಡ್ಡಾ, ಕಾಜಲ್ ಅಗರ್ವಾಲ್, ಶಬಾನಾ ಅಜ್ಮಿ, ಹನ್ಸಿಕಾ ಮೋಟ್ವಾನಿ, ಪ್ರಿಯಾ ಮಲಿಕ್, ಮೆಹರೀನ್ ಪಿರ್ಜಾಡಾ, ನಿಧಿ ಅಗರ್ವಾಲ್, ಚಾರ್ಮಿ ಕೌರ್, ಆಶಿಕಾ ರಂಗನಾಥ್ ಸಾಯಿ, ಗಾಯಕಿ ಸೋನಾ ಮೊಹಾಪಾತ್ರ, ನಟಿ ಕೀರ್ತಿ ಸುರೇಶ್, ದಿವ್ಯಾಂಶ್ ಕೌಶಿಕ್, ಮಾಡೆಲ್ ಲಾವಣ್ಯ, ನಿರ್ಮಾಪಕ ಅಲಂಕಿತ ಶ್ರೀವಾಸ್ತವ, ನಿರ್ದೇಶಕ ಸಂದೀಪ್ ರೆಡ್ಡಿ, ನಟಿ ಸಾಯಿ ಧರಂ ಸೇರಿದ್ದಾರೆ.