ಕರ್ನಾಟಕ

karnataka

ETV Bharat / bharat

ಒಬಾಮ ವಿರುದ್ಧ ಎಫ್​ಐಆರ್ ದಾಖಲಿಸಿ: ಕೋರ್ಟ್ ಮೆಟ್ಟಿಲೇರಿದ ಪ್ರತಾಪಗಢ ವಕೀಲ - ಬರಾಕ್ ಒಬಾಮ ವಿರುದ್ಧ ಎಫ್​ಐಆರ್

ಒಬಾಮ ತಮ್ಮ ಪುಸ್ತಕದಲ್ಲಿ ರಾಹುಲ್ ಗಾಂಧಿ ಮತ್ತು ಡಾ.ಮನಮೋಹನ್ ಸಿಂಗ್ ಬಗ್ಗೆ ಉಲ್ಲೇಖಿಸಿದ್ದಾರೆ. ಇದು ಭಾರತದ ಪ್ರಜಾಪ್ರಭುತ್ವ ಮತ್ತು ಸಾರ್ವಭೌಮ ರಾಷ್ಟ್ರದ ಆಂತರಿಕ ರಾಜಕೀಯ ವಿಷಯದಲ್ಲಿ ಹಸ್ತಕ್ಷೇಪ ಮಾಡಿದಂತಾಗಿದ್ದು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಭಾರತೀಯರಿಗೆ ನೋವುಂಟು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

complaint-against-former-us-president-barack-obama-in-pratapgarh-court
ಬರಾಕ್ ಒಬಾಮ ವಿರುದ್ಧ ಎಫ್​ಐಆರ್

By

Published : Nov 19, 2020, 1:15 PM IST

ಪ್ರತಾಪ್​ಗಢ (ಉ.ಪ್ರ): ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ತಮ್ಮ ಆತ್ಮ ಚರಿತ್ರೆಯಲ್ಲಿ ಭಾರತೀಯ ನಾಯಕರ ಹೆಸರು ಪ್ರಸ್ತಾಪ ಕುರಿತಂತೆ ಭಾರತದಲ್ಲಿ ಅಪಸ್ವರ ಕೇಳಿ ಬಂದಿದೆ. ಇದೀಗ ಒಬಾಮ ವಿರುದ್ಧ ಎಫ್​ಐಆರ್​​​ ದಾಖಲಿಸುವಂತೆ ಕೋರಿ ಸಿವಿಲ್​ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

ಪ್ರತಾಪ್​ಗಢ ಜಿಲ್ಲೆಯ ಲಾಲ್​​ಗಂಜ್​ ಸಿವಿಲ್ ಕೋರ್ಟ್​ನಲ್ಲಿ ಆಲ್​​ ಇಂಡಿಯಾ ರೂರಲ್ ಬಾರ್ ಅಸೋಸಿಯೇಷನ್‌ನ ರಾಷ್ಟ್ರೀಯ ಅಧ್ಯಕ್ಷ ಜ್ಞಾನ ಪ್ರಕಾಶ್ ಶುಕ್ಲಾ ಅವರು ಒಬಾಮ ವಿರುದ್ಧ ಎಫ್​ಐಆರ್ ದಾಖಲಿಸುವಂತೆ ನಿರ್ದೇಶನ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇನ್ನು ಈ ಅರ್ಜಿ ಸಂಬಂಧ ಡಿಸೆಂಬರ್ 1ರಂದು ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಲಾಲ್​​​​​​​ಗಂಜ್ ಸಿವಿಲ್ ಕೋರ್ಟ್ ತಿಳಿಸಿದೆ.

ಒಬಾಮ ತಮ್ಮ ಪುಸ್ತಕದಲ್ಲಿ ರಾಹುಲ್ ಗಾಂಧಿ ಮತ್ತು ಡಾ.ಮನಮೋಹನ್ ಸಿಂಗ್ ಬಗ್ಗೆ ಉಲ್ಲೇಖಿಸಿದ್ದಾರೆ. ಅವರ ಹೇಳಿಕೆಗಳು ಭಾರತದ ಪ್ರಜಾಪ್ರಭುತ್ವ ಮತ್ತು ಸಾರ್ವಭೌಮ ರಾಷ್ಟ್ರದ ಆಂತರಿಕ ರಾಜಕೀಯ ವಿಷಯದಲ್ಲಿ ಹಸ್ತಕ್ಷೇಪ ಮಾಡಿದ ಅಪರಾಧವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅಲ್ಲದೇ ಒಬಾಮ ಹೇಳಿಕೆಯಿಂದಾಗಿ ಕಾಂಗ್ರೆಸ್ ಅನುಯಾಯಿಗಳ ಹಾಗೂ ಭಾರತೀಯರಿಗೆ ನೋವುಂಟಾಗಿದೆ. ಹೀಗಾಗಿ ಅವರ ವಿರುದ್ಧ ಎಫ್​ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಇಷ್ಟೇ ಅಲ್ಲದೆ ಒಬಾಮ ವಿರುದ್ಧ ಎಫ್​​ಐಆರ್​​​ ದಾಖಲಿಸದಿದ್ದರೆ ದೆಹಲಿಯ ಯುಎಸ್ ರಾಯಭಾರ ಕಚೇರಿಯ ಮುಂಭಾಗ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಎಚ್ಚರಿಸಿದ್ದಾರೆ.

ABOUT THE AUTHOR

...view details