ಕರ್ನಾಟಕ

karnataka

ETV Bharat / bharat

ಶಾಲಾ ಮಕ್ಕಳ ಓದುವಿಕೆಯ ಸಾಮರ್ಥ್ಯ ಮಟ್ಟದಲ್ಲಿ ಕುಸಿತ: ಅಧ್ಯಯನ ವರದಿ - ಶಿಕ್ಷಣದ ವಾರ್ಷಿಕ ಸ್ಥಿತಿ ವರದಿ

ಸರ್ಕಾರಿ ಮತ್ತು ಖಾಸಗಿ ಶಾಲಾ ಮಕ್ಕಳಲ್ಲಿ ಕನಿಷ್ಠ ಓದುವಿಕೆ ಸಾಮರ್ಥ್ಯ ಹಾಗೂ ಗಣಿತದ ಕೌಶಲ್ಯದಲ್ಲಿ ಇಳಿಕೆ ಕಂಡಿದೆ ಎಂದು ಎಎಸ್​ಇಆರ್(ASER)​ ಅಧ್ಯಯನ ವರದಿ ತಿಳಿಸಿದೆ.

2012ರ ಪೂರ್ವಕ್ಕೆ ಹೋಲಿಸಿದರೆ, ಈಗಿನ ಮಕ್ಕಳ ಓದುವಿಕೆ ಸಾಮರ್ಥ್ಯ ಮಟ್ಟದಲ್ಲಿ ಕುಸಿತ; ಅಧ್ಯಯನ
compared-to-pre-2012-current-childrens-reading-ability-levels-have-declined-study

By

Published : Jan 19, 2023, 1:09 PM IST

ನವದೆಹಲಿ:2012ರ ಹಿಂದಿನ ಮಟ್ಟಕ್ಕೆ ಹೋಲಿಕೆ ಮಾಡಿದಾಗ ಶಾಲಾ ಮಕ್ಕಳಲ್ಲಿ ಕನಿಷ್ಠ ಪ್ರಮಾಣದ ಓದುವಿಕೆಯ ಸಾಮರ್ಥ್ಯ ಕುಸಿತಗೊಂಡಿದೆ. 2018ರ ಮಟ್ಟದಲ್ಲಿ ಮಕ್ಕಳ ಗಣಿತದ ಕೌಶಲ್ಯ ಕೂಡ ಇಳಿಕೆಯಾಗಿದೆ ಎಂದು ಶಿಕ್ಷಣದ ವಾರ್ಷಿಕ ಸ್ಥಿತಿ ವರದಿ- 2022 (ಎಎಸ್​ಇಆರ್​) ತಿಳಿಸಿದೆ. ಬಾಲಕ ಮತ್ತು ಬಾಲಕಿಯರು ಸೇರಿದಂತೆ ಖಾಸಗಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಈ ಇಳಿಕೆಯನ್ನು ಕಾಣಬಹುದು.

ಕೇರಳ, ಹಿಮಾಚಲ ಪ್ರದೇಶ ಮತ್ತು ಹರಿಯಾಣದ ಮಕ್ಕಳಲ್ಲಿ ಅತಿ ಹೆಚ್ಚು ಓದುವ ಸಾಮರ್ಥ್ಯವು ಕುಂಠಿತವಾಗಿದೆ. ತಮಿಳುನಾಡು, ಮಿಜೋರಾಂ ಮತ್ತು ಹರಿಯಾಣದಲ್ಲಿ ಮಕ್ಕಳಲ್ಲಿನ ಗಣಿತದ ಕೌಶಲ್ಯ ಕುಗ್ಗಿದೆ. ಭಾರತದ ಗ್ರಾಮೀಣ ಶಾಲಾ ಮಕ್ಕಳ ಕಲಿಕೆಯ ಕುರಿತು ದೇಶಾದ್ಯಂತ ಮನೆ ಮನೆಗಳಲ್ಲಿ ಎಸ್​ಇಆರ್​ ಸಮೀಕ್ಷೆ ನಡೆಸುತ್ತದೆ. 2005ರಿಂದ ಎಸ್​ಇಆರ್​ ಈ ಸಮೀಕ್ಷೆ ನಡೆಸುತ್ತಿದೆ.

2012ರ ಪೂರ್ವ ಮಟ್ಟದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮಕ್ಕಳ ಕನಿಷ್ಟ ಓದುವಿಕೆ ಸಾಮರ್ಥ್ಯ ಕುಗ್ಗಿದೆ. ವರ್ಷದ ಮಧ್ಯಭಾಗದಲ್ಲಿ ಇದು ನಿಧಾನ ಬೆಳವಣಿಗೆ ಕಂಡಿದೆ. ಸರ್ಕಾರಿ ಮತ್ತು ಖಾಸಗಿ ಎರಡೂ ಶಾಲೆಗಳಲ್ಲಿ ಮಕ್ಕಳ ಈ ಸಾಮರ್ಥ್ಯದಲ್ಲಿ ಇಳಿಕೆ ಗೋಚರಿಸಿದೆ.

ಮಕ್ಕಳ ಓದಿನ ಮಟ್ಟದ ಪರೀಕ್ಷೆ: ಕ್ಲಾಸ್​ 1ರ ಮಟ್ಟದಲ್ಲಿ ಮಕ್ಕಳಿಗೆ ಅಕ್ಷರ, ಪದ ಮತ್ತು ಸರಳ ಪ್ಯಾರಾಗ್ರಾಫ್​ ಓದುವ ಪರೀಕ್ಷೆಯನ್ನು ಎಎಸ್​ಇಆರ್​ ನಡೆಸಿದ್ದು, ಇದರಲ್ಲಿ ಮಕ್ಕಳು ಕಷ್ಟ ಅನುಭವಿಸಿದ್ದಾರೆ. 5ರಿಂದ 16 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಒಂದೊಂದಾಗಿ ಪರೀಕ್ಷೆಯನ್ನು ನಡೆಸಲಾಯಿತು. ಪ್ರತಿ ಮಗುವಿನ ಸರಾಗ ಓದುವಿಕೆಯ ಸಾಮರ್ಥ್ಯವನ್ನು ಗಮನಿಸಲಾಗಿದೆ.

ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಶೇ 27.3ರಷ್ಟು ಮಕ್ಕಳು ಮೂರನೇ ತರಗತಿ ಮಕ್ಕಳು ಎರಡನೇ ತರಗತಿ ಮಟ್ಟದ ಓದುವಿಕೆ ಸಾಮರ್ಥ್ಯವನ್ನು ಹೊಂದಿದ್ದಾರೆ. ಪ್ರತಿ ರಾಜ್ಯದಲ್ಲಿ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಈ ಪ್ರಮಾಣ ಕಡಿಮೆ ಇದೆ. 2018ರಲ್ಲಿ ರಾಜ್ಯಗಳಲ್ಲಿ ಶೇ 10ರಷ್ಟು ಓದುವಿಕೆ ಸಾಮರ್ಥ್ಯ ಕಡಿಮೆಯಾಗಿರುವುದನ್ನು ಕಾಣಬಹುದಾಗಿದ್ದು, ಇದಕ್ಕಿಂತ ಮುನ್ನ ಇಲ್ಲಿ ಉತ್ತಮ ಓದುವಿಕೆ ಸಾಮರ್ಥ್ಯ ಇತ್ತು ಎಂಬುದನ್ನು ತಿಳಿಸಿದೆ. ಕೇರಳದಲ್ಲಿ 2018ರಲ್ಲಿ 52.2ರಷ್ಟಿದ್ದ ಈ ಸಂಖ್ಯೆ 2022ರಲ್ಲಿ 38.7ರಷ್ಟಾಗಿದೆ. ಹಿಮಾಚಲ ಪ್ರದೇಶದಲ್ಲಿ 47.7ರಿಂದ 28.4ಕ್ಕೆ ಕುಸಿದಿದೆ. ಹರಿಯಾಣದಲ್ಲಿ 46.4 ರಿಂದ 31.5ಕ್ಕೆ ಇಳಿದಿದೆ.

ಆಂಧ್ರ ಪ್ರದೇಶದಲ್ಲಿ ಶೇ 22.6 ರಿಂದ 10.3ಕ್ಕೆ ಮತ್ತು ತೆಲಂಗಾಣ ಶೇ 18ರಿಂದ 5.2ಕ್ಕೆ ಭಾರಿ ಇಳಿಕೆ ಕಂಡು ಬಂದಿದೆ. 5ನೇ ತರಗತಿ ಮಕ್ಕಳು 2 ನೇ ತರಗತಿ ಮಟ್ಟವನ್ನು ಓದುವ ಸಾಮರ್ಥ್ಯವನ್ನು ಹೊಂದಿದ್ದು, ಈ ಸಾಮರ್ಥ್ಯ ಕೂಡ 2028ರಲ್ಲಿ 50.5ರಷ್ಟಿದ್ದರೆ, 2022ರಲ್ಲಿ 42.8ರಷ್ಟಾಗಿದೆ. ಬಿಹಾರ, ಒಡಿಶಾ, ಮಣಿಪುರ ಮತ್ತು ಜಾರ್ಖಂಡ್​ನಲ್ಲಿ ಓದುವಿಕೆ ಸಾಮರ್ಥ್ಯ ಕೊಂಚ ಮಟ್ಟದ ಏರಿಕೆ ಕಂಡಿದೆ ಎಂದು ಅಧ್ಯಯನ ವರದಿ ತಿಳಿಸಿದೆ.

ಇಳಿಕೆ ಕಂಡ ಓದುವಿಕೆ ಸಾಮರ್ಥ್ಯ: ಶೇ 15ಕ್ಕಿಂತ ಹೆಚ್ಚಿನ ಇಳಿಕೆಯನ್ನು ಆಂಧ್ರ ಪ್ರದೇಶ, ಗುಜರಾತ್​​, ಹಿಮಾಚಲ ಪ್ರದೇಶದಲ್ಲಿ ಕಾಣಬಹುದಾಗಿದೆ. ಉತ್ತರಾಖಂಡ್​, ರಾಜಸ್ಥಾನ್​, ಹರಿಯಾಣ, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಶೇ 10ರಷ್ಟು ಇಳಿಕೆ ಕಾಣಬಹುದಾಗಿದೆ. 8ನೇ ತರಗತಿ ಮಕ್ಕಳಲೂ ಕೂಡ ಕನಿಷ್ಠ ಓದುವಿಕೆ ಇಳಿಕೆ ಕಡಿಮೆಯಾಗಿರುವುದು ಗೊತ್ತಾಗಿದೆ. ಮೂರು ಮತ್ತು ಐದನೇ ತರಗತಿಗೆ ಹೋಲಿಕೆ ಮಾಡಿದರೆ ಇದರ ಸಂಖ್ಯೆ ಕಡಿಮೆಯಾಗಿದೆ. ದೇಶದಲ್ಲಿ 8ನೇ ತರಗತಿ ಶಾಲೆಗೆ ದಾಖಲಾಗುವ ಮಕ್ಕಳ ಸಂಖ್ಯೆ ಶೇ 69.6ರಷ್ಟಿದೆ. ಅವರು ಕನಿಷ್ಠ ತಮ್ಮ ಹಿಂದಿನ ತರಗತಿ ಪುಸ್ತಕವನ್ನು ಓದುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.

ಗಣಿತ ಕೌಶಲ್ಯದಲ್ಲಿ ಅಲ್ಪ ಸುಧಾರಿಕೆ: ಓದುವಿಕೆಗೆ ಹೋಲಿಸಿದಾಗ ಗಣಿತ ಕೌಶಲ್ಯದ ಮಟ್ಟದಲ್ಲಿ ದೊಡ್ಡ ಇಳಿಕೆ ಕಂಡು ಬರುವುದಿಲ್ಲ. ಭಾರತದ ಒಟ್ಟಾರೆ ಅಂಕಿಅಂಶ ಗಮನಿಸಿದರೆ, ಮೂರನೇ ತರಗತಿ ವಿದ್ಯಾರ್ಥಿ ಲೆಕ್ಕವನ್ನು ಮಾಡುವ ಸಾಮರ್ಥ್ಯ 2018ರಲ್ಲಿ ಶೇ 28.2ರಷ್ಟಿದ್ದರೆ, 2022ರಲ್ಲಿ 25.9ರಷ್ಟಿದೆ. 2018ರ ಮಟ್ಟಕ್ಕೆ ಹೋಲಿಸಿದರೆ, ಜಮ್ಮು ಮತ್ತಯ ಕಾಶ್ಮೀರ, ಉತ್ತರ ಪ್ರದೇಶ, ಮಧ್ಯಪ್ರದೇಶದಲ್ಲಿ ಈ ಬೆಳವಣಿಗೆಯನ್ನು ಕೊಂಚ ಮಟ್ಟದಲ್ಲಿ ಕಾಣಬಹುದು. ತಮಿಳುನಾಡು, ಮಿಜೋರಾಂ, ಹರಿಯಾಣದಲ್ಲಿ ಈ ಸಾಮರ್ಥ್ಯ ಶೇ 10ರಷ್ಟು ಕುಸಿತಗೊಂಡಿದೆ.

ದೇಶಾದ್ಯಂತ ಐದನೇ ತರಗತಿ ಮಕ್ಕಳಲ್ಲಿ ಭಾಗಿಸುವ ಸಾಮರ್ಥ್ಯ ಕೂಡ ಸ್ವಲ್ಪ ಕಡಿಮೆಗೊಂಡಿದೆ. 2018ರಲ್ಲಿ 27. 9ರಷ್ಟಿದ್ದರೆ, 2022ರಲ್ಲಿ 25.6 ಆಗಿದೆ. ಬಿಹಾರ, ಜಾರ್ಖಂಡ್​ ಮತ್ತು ಸಿಕ್ಕಿಂ ರಾಜ್ಯದ ಮಕ್ಕಳಲ್ಲಿ ಈ ಸಾಮರ್ಥ್ಯ ಕೊಂಚ ಏರಿಕೆ ಕಂಡಿದೆ. ಇನ್ನು ಮಿಜೋರಾಂ, ಹಿಮಾಚಲ ಪ್ರದೇಶ, ಪಂಜಾಬ್​​ ಇನ್ನಿತರ ರಾಜ್ಯದಲ್ಲಿ ಶೇ 10ರಷ್ಟು ಸಾಮರ್ಥ್ಯ ಕುಗ್ಗಿದೆ.

8ನೇ ತರಗತಿಯ ಮಕ್ಕಳ ಗಣಿತ ಸಾಮರ್ಥ್ಯ ಹೆಚ್ಚಳಗೊಂಡಿದೆ. 2018ಕ್ಕೆ ಹೋಲಿಸಿದಾಗ 2022ರಲ್ಲಿ ಗಣಿತದ ಸಾಮರ್ಥ್ಯ ಸರ್ಕಾರಿ ಶಾಲೆ ಮಕ್ಕಳಲ್ಲಿ ಏರಿಕೆ ಕಂಡಿದೆ. ಉತ್ತರ ಪ್ರದೇಶದಲ್ಲಿ ಇದು 32ರಿಂದ 41.8ರಷ್ಟು ಹೆಚ್ಚಾಗಿದೆ. ಛತ್ತೀಸ್​ಗಢದಲ್ಲಿ 28ರಿಂದ 38.6ರಷ್ಟು ಆಗಿದೆ. ಆದರೆ ಪಂಜಾಬ್​ ನಲ್ಲಿ ಇದು ಚಿಂತೆಗೆ ಕಾರಣವಾಗಿದೆ. ಕಾರಣ ಇಲ್ಲಿ ಮಕ್ಕಳ ಲೆಕ್ಕದ ಸಾಮರ್ಥ್ಯ 58.4ರಿಂದ 44.5ಕ್ಕೆ ಕುಸಿದಿದೆ.

ಇದನ್ನೂ ಓದಿ: 2022ರಲ್ಲಿ ದಾಖಲೆ ಮಟ್ಟದಲ್ಲಿ ಶಾಲೆ ಪ್ರವೇಶ ಪಡೆದ ಮಕ್ಕಳು; ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಏರಿಕೆ

ABOUT THE AUTHOR

...view details