ಶ್ರೀನಗರ: ಕಳೆದ ಕೆಲವು ತಿಂಗಳುಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಸಂಘಟನೆಗಳ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಶ್ರೀನಗರದಾದ್ಯಂತ ಭದ್ರತಾ ಪಡೆಗಳ ನಿಯೋಜನೆಯನ್ನು ಗಣನೀಯವಾಗಿ ಹೆಚ್ಚಿಸಿದೆ.
ಮದುವೆ ಮಂಟಪ ಸೇರಿದಂತೆ ವಿವಿಧ ಸಮುದಾಯ ಕೇಂದ್ರಗಳಲ್ಲಿಯೂ ಸಿಆರ್ಪಿಎಫ್ ಪಡೆಗಳನ್ನು ಇರಿಸಲಾಗಿದೆ. ಇನ್ನು ಎಷ್ಟು ದಿನಗಳ ಕಾಲ ಅವರನ್ನು ಇಂಥಹ ಸಮುದಾಯ ಕೇಂದ್ರಗಳ ಇಡಲಾಗುತ್ತದೆ ಎಂಬ ಮಾಹಿತಿ ಇನ್ನೂ ಸಿಕ್ಕಿಲ್ಲ. ಆದರೆ ನಗರದ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈಗ ಕೆಲವೇ ಕೆಲವು ಸಮುದಾಯ ಕೇಂದ್ರಗಳಲ್ಲಿ ಭದ್ರತಾ ಪಡೆಗಳನ್ನು ಇರಿಸಲಾಗಿದೆ. ಮುಂದಿನ ದಿನಗಳಲ್ಲಿ ಸೂಕ್ತ ಸ್ಥಳಗಳಿಗೆ ಭದ್ರತಾ ಪಡೆಗಳನ್ನು ಸ್ಥಳಾಂತರ ಮಾಡಲು ಮನವಿ ಮಾಡಲಾಗಿದೆ ಎಂದು ಅಧಿಕಾರಿ ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.