ಕರ್ನಾಟಕ

karnataka

ETV Bharat / bharat

2020ರಲ್ಲಿ ಕೋಮು ಗಲಭೆ ಪ್ರಕರಣಗಳು ದ್ವಿಗುಣ: NCRB ವರದಿ - ಎನ್​ಸಿಆರ್​ಬಿ

ಕೋವಿಡ್ ಪಿಡುಗಿನ ಹೊರತಾಗಿಯೂ 2019 ಕ್ಕೆ ಹೋಲಿಸಿದರೆ 2020 ರಲ್ಲಿ ಕೋಮುಗಲಭೆ ಪ್ರಕರಣಗಳು ದ್ವಿಗುಣಗೊಂಡಿವೆ ಎಂದು ಎನ್​ಸಿಆರ್​ಬಿ ವರದಿ ಮಾಡಿದೆ.

NCRB
NCRB

By

Published : Sep 17, 2021, 12:35 PM IST

ನವದೆಹಲಿ: 2019ಕ್ಕೆ ಹೋಲಿಸಿದರೆ, 2020 ರಲ್ಲಿ ದೇಶದಲ್ಲಿ ಅಪರಾಧ ಚಟುವಟಿಕೆಗಳು ದ್ವಿಗುಣಗೊಂಡಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಹೇಳಿದೆ. 2020 ರಲ್ಲಿ 857 ಧಾರ್ಮಿಕ ಗಲಭೆಗಳಾಗಿವೆ ಎಂದು ವರದಿಯಿಂದ ಬಹಿರಂಗಗೊಂಡಿದೆ.

2019ರಲ್ಲಿ ಒಟ್ಟು 438 ಪ್ರಕರಣಗಳು, 2018 ರಲ್ಲಿ 512 ಪ್ರಕರಣಗಳು ದಾಖಲಾಗಿದ್ದವು. 2020ರ ಮಾರ್ಚ್​​ 25 ರಿಂದ ಮೇ 31ರವರೆಗೆ ದೇಶದಲ್ಲಿ ಸಂಪೂರ್ಣ ಲಾಕ್​ಡೌನ್ ವಿಧಿಸಲಾಗಿತ್ತು. ಆದರೂ, ಅದೇ ವರ್ಷದಲ್ಲಿ 857 ಅಪರಾಧ ಪ್ರಕರಣಗಳು ದಾಖಲಾಗಿವೆ.

2020ರ ಜನವರಿ ಮತ್ತು ಫೆಬ್ರವರಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಕೋಮುಗಲಭೆಗಳ ಕುರಿತು ಹಲವಾರು ಪ್ರತಿಭಟನೆಗಳು ನಡೆದವು. ಮಾರ್ಚ್​ನಲ್ಲಿ ಕೋವಿಡ್​ ಕಾಣಿಸಿಕೊಂಡಿತ್ತು. 2020 ರಲ್ಲಿ 167 ಗುಂಪು ಸಂಘರ್ಷಗಳು ನಡೆದಿವೆ. 2019 ರಲ್ಲಿ 118 ಮತ್ತು 2018 ರಲ್ಲಿ 209 ಕೋಮುಗಲಭೆ ಪ್ರಕರಣಗಳು ದಾಖಲಾಗಿದ್ದವು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

NCRB ವರದಿಯು 2020 ರಲ್ಲಿ ದೇಶಾದ್ಯಂತ ಒಟ್ಟು 71,107 ಸಾರ್ವಜನಿಕ ನೆಮ್ಮದಿ ವಿರುದ್ಧ ಅಪರಾಧಗಳು ದಾಖಲಾಗಿದ್ದು, 2019 ಕ್ಕೆ ಹೋಲಿಸಿದರೆ ಶೇಕಡಾ 12.4 ರಷ್ಟು ಹೆಚ್ಚಳವಾಗಿದೆ.

ವಿವಿಧ ಐಪಿಸಿ ಸೆಕ್ಷನ್​ಗಳಡಿ ದಾಖಲಾಗಿರುವ ಪ್ರಕರಣಗಳ ಪೈಕಿ ಶೇಕಡಾ 76.2 ರಷ್ಟು ಸಾರ್ವಜನಿಕ ನೆಮ್ಮದಿ ವಿರುದ್ಧದ ಪ್ರಕರಣಗಳೇ ಆಗಿವೆ. ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರ ವಿರುದ್ಧದ ಅಪರಾಧಗಳು, ಕಳ್ಳತನ ಪ್ರಕರಣಗಳು ಕಡಿಮೆಯಾಗಿವೆ ಎಂದು ವರದಿಯಿಂದ ತಿಳಿದು ಬಂದಿದೆ.

ABOUT THE AUTHOR

...view details