ವಡೋದರಾ( ಗುಜರಾತ್): ವಡೋದರಾದಲ್ಲಿ ದೀಪಾವಳಿ ರಾತ್ರಿ ಕೋಮು ಘರ್ಷಣೆಗಳು ನಡೆದಿರುವ ವರದಿಯಾಗಿದೆ. ಮಂಗಳವಾರ ಬೆಳಗಿನ ಜಾವದವರೆಗೆ ಪೊಲೀಸರು ಕನಿಷ್ಠ ಹನ್ನೆರಡು ಗಲಭೆಕೋರರನ್ನು ತಡೆದು ವಿಚಾರಣೆ ನಡೆಸಿದ್ದು, ಗಲಭೆಕೋರರನ್ನು ಗುರುತಿಸುವಲ್ಲಿ ನಿರತರಾಗಿದ್ದಾರೆ ಎಂದು ತಿಳಿದು ಬಂದಿದೆ.
ನಗರದ ಪಾಣಿಗೇಟ್ ಪ್ರದೇಶದಲ್ಲಿ ಸೋಮವಾರ ರಾತ್ರಿ ಘರ್ಷಣೆ ನಡೆದಿದೆ. ವಡೋದರಾ ಉಪ ಪೊಲೀಸ್ ಆಯುಕ್ತ ಯಸ್ಪಾಲ್ ಜಗನಿಯಾ ಘಟನೆ ಬಗ್ಗೆ ಮಾಹಿತಿ ನೀಡಿದ್ದು, ಹಿಂಸಾಚಾರಕ್ಕೆ ನಿಖರವಾದ ಕಾರಣ ಇನ್ನೂ ಗೊತ್ತಾಗಿಲ್ಲ ಎಂದಿದ್ದಾರೆ. ದೀಪಾವಳಿ ದಿನ ಎರಡು ಗುಂಪುಗಳ ನಡುವೆ ಸಂಘರ್ಷ ನಡೆಯುತ್ತಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, ನಗರದಾದ್ಯಂತ ಬಿಗಿ ಬಂದೋಬಸ್ತ್ ಮಾಡಿ ಪರಿಸ್ಥಿತಿಯನ್ನು ತರಲಾಯಿತು ಎಂದು ಹೇಳಿದ್ದಾರೆ.