ಕರ್ನಾಟಕ

karnataka

ETV Bharat / bharat

ಕೋವಿಡ್-19 ಲಸಿಕೆ ಕುರಿತು ಕೆಲ ಸಾಮಾನ್ಯ ವದಂತಿ ಹಾಗೂ ನಿಜಾಂಶಗಳು.. - ಭಾರತದಲ್ಲಿ ವ್ಯಾಕ್ಸಿನೇಷನ್ ಡ್ರೈವ್

ಕೆಲವರು ಕೋವಿಡ್-19 ಲಸಿಕೆಯ ಸಂಭವನೀಯ ಪ್ರತಿಕ್ರಿಯೆಗಳು ಮತ್ತು ಅವರು ಎದುರಿಸಬೇಕಾದ ಕೆಲವು ಪರಿಣಾಮಗಳ ಕುರಿತು ಭಯಪಡುತ್ತಿದ್ದಾರೆ. ಇವುಗಳಲ್ಲಿ ಕೆಲವು ನಿಜವಾಗಿದ್ದು, ಇನ್ನೂ ಕೆಲ ವದಂತಿಗಳು ಹರಿದಾಡುತ್ತಿವೆ..

vaccine
vaccine

By

Published : Jan 20, 2021, 6:32 PM IST

ಹೈದರಾಬಾದ್ :ಸುಮಾರು ಒಂದು ವರ್ಷ ಸುದೀರ್ಘವಾಗಿ ಕಾದ ಬಳಿಕ ಭಾರತದಲ್ಲಿ ವ್ಯಾಕ್ಸಿನೇಷನ್ ಡ್ರೈವ್ ಪ್ರಾರಂಭವಾಗಿದೆ. ದೇಶದಲ್ಲಿ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳನ್ನು ತುರ್ತು ಬಳಕೆಗಾಗಿ ಆರೋಗ್ಯ ಸಚಿವಾಲಯ ಅಂಗೀಕರಿಸಿದೆ.

ಇದೀಗ ಎಲ್ಲರೂ ಲಸಿಕೆ ಪಡೆಯಲು ಮತ್ತು ತಮ್ಮ ಸಾಮಾನ್ಯ ಜೀವನಕ್ಕೆ ಮರಳಲು ಕಾತುರದಿಂದ ಕಾಯುತ್ತಿದ್ದು, ಯಾವುದೇ ಭಯವಿಲ್ಲದೆ ಬದುಕುತ್ತಿದ್ದಾರೆ. ಆದರೂ ಕೆಲವರು ಅದರ ಸಂಭವನೀಯ ಪ್ರತಿಕ್ರಿಯೆಗಳು ಮತ್ತು ಅವರು ಎದುರಿಸಬೇಕಾದ ಕೆಲವು ಪರಿಣಾಮಗಳ ಕುರಿತು ಭಯಪಡುತ್ತಿದ್ದಾರೆ. ಕೆಲವು ನಿಜವಾಗಿದ್ದು, ಇನ್ನೂ ಕೆಲವು ವದಂತಿ ಹರಿದಾಡುತ್ತಿವೆ.

ಆದ್ದರಿಂದ, ಭಾರತದಲ್ಲಿ ವ್ಯಾಕ್ಸಿನೇಷನ್ ಪ್ರಕ್ರಿಯೆ ಮತ್ತು ಅನುಮೋದಿತ ಲಸಿಕೆಗಳಿಗೆ ಸಂಬಂಧಿಸಿದ ಕೆಲವು ಸಾಮಾನ್ಯ ವದಂತಿಗಳನ್ನು ನಿವಾರಿಸಲು, ಈಟಿವಿ ಭಾರತ ಸುಖೀಭವ ತಂಡವು ಯಶೋಧಾ ಆಸ್ಪತ್ರೆಯ ಸಾಮಾನ್ಯ ವೈದ್ಯ ಡಾ.ಎಂ ವಿ ರಾವ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಅವರು ಕೆಲ ಮಾಹಿತಿ ನೀಡಿದ್ದಾರೆ.

ಕೋವಿಡ್-19 ವ್ಯಾಕ್ಸಿನೇಷನ್ ಎಲ್ಲರಿಗೂ ಕಡ್ಡಾಯವೇ?

ಕೋವಿಡ್-19 ವ್ಯಾಕ್ಸಿನೇಷನ್ ಎಲ್ಲರಿಗೂ ಕಡ್ಡಾಯವಲ್ಲ. ಜನರು ಸ್ವಯಂಪ್ರೇರಣೆಯಿಂದ ಲಸಿಕೆ ಪಡೆಯಬಹುದು. ಕೊರೊನಾ ವೈರಸನ್ನು ಸಂಕುಚಿತಗೊಳಿಸಲು ಜನರು ವೈರಸ್ ವಿರುದ್ಧ ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸಬಹುದಾಗಿದ್ದು, ಇದು ಕೆಲವು ತಿಂಗಳುಗಳವರೆಗೆ ಮತ್ತೆ ಸೋಂಕಿಗೆ ಒಳಗಾಗುವುದನ್ನು ತಡೆಯುತ್ತದೆ. ಆದರೆ, ಶಾಶ್ವತವಾಗಿ ಅಲ್ಲ. ಆದ್ದರಿಂದ, ಲಸಿಕೆಗಳು ವೈರಸ್ ವಿರುದ್ಧ ಅತ್ಯುತ್ತಮ ರಕ್ಷಣೆ ನೀಡಲಿವೆ.

ಲಸಿಕೆ ತೆಗೆದುಕೊಳ್ಳದಿದ್ದರೆ ಅದರ ಪರಿಣಾಮಗಳೇನು?

ವೈರಸ್ ರೂಪಾಂತರಗೊಳ್ಳುತ್ತದೆ ಮತ್ತು ಹೇಳಲಾಗದ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಡಾ. ರಾವ್ ವಿವರಿಸುತ್ತಾರೆ. ವಿಶೇಷವಾಗಿ ವಯಸ್ಸಾದವರು ಮತ್ತು ಅಧಿಕ ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್ ಮುಂತಾದ ಕಾಯಿಲೆಗಳಿಂದ ಬಳಲುತ್ತಿರುವವರು, ಕೋವಿಡ್-19ಗೆ ಇನ್ನೂ ಸರಿಯಾದ ಚಿಕಿತ್ಸೆ ಇಲ್ಲದಿರುವುದರಿಂದ, ವ್ಯಾಕ್ಸಿನೇಷನ್​ಗೆ ಒಳಗಾಗುವುದನ್ನು ಶಿಫಾರಸು ಮಾಡಲಾಗಿದೆ.

ಪ್ರಸ್ತುತ ಕೋವಿಡ್-19ನಿಂದ ಬಳಲುತ್ತಿರುವ ವ್ಯಕ್ತಿಗೆ ಲಸಿಕೆ ನೀಡಬಹುದೇ?

ಇಲ್ಲ. ಲಸಿಕೆ ಪಡೆಯುವ ಮೊದಲು ಕೋವಿಡ್-19ನ ಸಂಭವನೀಯ ರೋಗಲಕ್ಷಣಗಳನ್ನು ಹುಡುಕುವುದು ಮುಖ್ಯ. ರೋಗಲಕ್ಷಣಗಳು ಕಡಿಮೆಯಾದ ನಂತರವೇ ಲಸಿಕೆ ಹಾಕಬೇಕು. ಒಬ್ಬ ವ್ಯಕ್ತಿಯು ಕೊರೊನಾ ವೈರಸ್​ನಿಂದ ಬಳಲುತ್ತಿದ್ದರೆ, ಲಸಿಕೆ ಪಡೆಯಲು 4-8 ವಾರಗಳ ತನಕ ಕಾಯಬೇಕು, ಇಲ್ಲದಿದ್ದರೆ ತೊಡಕುಗಳು ಉಂಟಾಗಬಹುದು.

ಎಷ್ಟು ಲಸಿಕೆ ಪ್ರಮಾಣಗಳು ಬೇಕಾಗುತ್ತವೆ?

28 ದಿನಗಳ ಮಧ್ಯಂತರದೊಂದಿಗೆ ಎರಡು ಸಮಾನ ಪ್ರಮಾಣಗಳು ಬೇಕಾಗುತ್ತವೆ. ಕೇವಲ ಒಂದು ಡೋಸ್ ನೀಡಿದರೆ ಕೋವಿಡ್ ವಿರುದ್ಧ ರೋಗನಿರೋಧಕ ಶಕ್ತಿ 60-80%ವರೆಗೆ ಇರುತ್ತದೆ. ಒಟ್ಟು ರಕ್ಷಣೆಗಾಗಿ ಎರಡು ಪ್ರಮಾಣದ ಕೋವಿಡ್-19 ಲಸಿಕೆಯನ್ನು ಶಿಫಾರಸು ಮಾಡಲಾಗುತ್ತದೆ. ಎರಡನೇ ಡೋಸ್ ವಿಳಂಬವಾದರೆ ಅದನ್ನು ಆದಷ್ಟು ಬೇಗ ನೀಡಬೇಕು.

ನಿಯಮಿತವಾಗಿ ಬಳಸುವ ಔಷಧಿಗಳೊಂದಿಗೆ ಬೆರೆತು ಲಸಿಕೆ ದುಷ್ಪರಿಣಾಮ ಬೀರಲು ಸಾಧ್ಯವೇ?

ಕೋವಿಡ್-19 ಲಸಿಕೆಯು ಬಳಕೆಯಲ್ಲಿರುವ ಸಾಮಾನ್ಯ ಔಷಧಿಗಳೊಂದಿಗೆ ಯಾವುದೇ ಸಂವಹನವನ್ನು ಹೊಂದುವುದಿಲ್ಲ ಹಾಗೂ ಅದರೊಂದಿಗೆ ಬೆರೆತು ದುಷ್ಪರಿಣಾಮ ಬೀರುವುದಿಲ್ಲ ಎಂದು ಡಾ. ರಾವ್ ವಿವರಿಸುತ್ತಾರೆ. ಆದರೆ, ಸ್ಟೀರಾಯ್ಡ್​ಗಳು ಅಥವಾ ಆ ರೀತಿಯ ಬೇರೆ ಔಷಧಿಗಳನ್ನು ಬಳಸುತ್ತಿದ್ದರೆ, ಲಸಿಕೆಗಳು ಸೂಕ್ತ ಸಂಖ್ಯೆಯ ಪ್ರತಿಕಾಯಗಳನ್ನು ಉತ್ಪಾದಿಸಲು ಸಾಧ್ಯವಾಗುವುದಿಲ್ಲ.

ಕಸಿ ಶಸ್ತ್ರಚಿಕಿತ್ಸೆಗೆ ಒಳಗಾದ ಜನರಿಗೆ ಲಸಿಕೆ ನೀಡಬಹುದೇ?

ಕಸಿ ಶಸ್ತ್ರಚಿಕಿತ್ಸೆಗೆ ಒಳಗಾದ ಜನರು ಕೋವಿಡ್-19 ವ್ಯಾಕ್ಸಿನೇಷನ್​ನಿಂದ ದೂರವಿರಬಹುದು. ಅವರು ತಮ್ಮ ವೈದ್ಯರ ಸಲಹೆ ಪಡೆಯಬಹುದು.

ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗೆ ಲಸಿಕೆ ನೀಡಬಹುದೇ?

ಕೋವಿಡ್-19 ಲಸಿಕೆಯನ್ನು ವೈರಸ್‌ನ ಸತ್ತ ಕಣಗಳೊಂದಿಗೆ ಸಂಶ್ಲೇಷಿಸಲಾಗಿರುವುದರಿಂದ, ಸಂಶೋಧಕರು ಹೇಳುವಂತೆ ಯಾವುದೇ ಅನಪೇಕ್ಷಿತ ಪರಿಣಾಮಗಳು ಉಂಟಾಗುವುದಿಲ್ಲ. ಆದರೆ, ಈ ಕುರಿತು ಸಾಕಷ್ಟು ಸಂಶೋಧನೆಗಳು ನಡೆಯದ ಕಾರಣ, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು ವ್ಯಾಕ್ಸಿನ್ ತೆಗೆದಿಕೊಳ್ಳದೇ ಇರಲಿ ಎಂದು ಸೂಚಿಸಲಾಗಿದೆ. ವ್ಯಾಕ್ಸಿನೇಷನ್ ಮಾಡಿದ ಬಳಿಕ ಕನಿಷ್ಠ ಎರಡು ತಿಂಗಳವರೆಗೆ ಗರ್ಭಧಾರಣೆಯಾಗದಂತೆ ನೋಡಿಕೊಳ್ಳಿ ಎಂದು ಬ್ರಿಟಿಷ್ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದೆ.

ಮಧುಮೇಹಿಗಳು ವ್ಯಾಕ್ಸಿನ್ ಪಡೆಯಬಹುದೇ?

ಮಧುಮೇಹ ಮತ್ತು ಇತರ ಕೊಮೊರ್ಬಿಡ್ ಕಾಯಿಲೆಗಳಿಂದ ಬಳಲುತ್ತಿರುವ ಜನರು ಸೋಂಕಿಗೆ ತುತ್ತಾಗುವ ಹಾಗೂ ಗಂಭೀರ ಪರಿಣಾಮಗಳನ್ನು ಹೊಂದುವ ಅಪಾಯ ಹೆಚ್ಚಿರುವುದರಿಂದ, ಇವರು ಆರಂಭಿಕ ವ್ಯಾಕ್ಸಿನೇಷನ್ ತೆಗೆದುಕೊಳ್ಳಲು ಸೂಚಿಸಲಾಗುತ್ತದೆ.

ಮಕ್ಕಳಿಗೆ ವ್ಯಾಕ್ಸಿನೇಷನ್ ಶಿಫಾರಸ್ಸು ಮಾಡಲಾಗಿದೆಯೇ?

ಇದುವರೆಗಿನ ಸಂಶೋಧನೆಯು ನಿರ್ಣಾಯಕವಾಗಿಲ್ಲ, ಆದ್ದರಿಂದ 18 ವರ್ಷ ವಯಸ್ಸಿನ ಕೆಳಗಿನ ಮಕ್ಕಳಿಗೆ ವ್ಯಾಕ್ಸಿನೇಷನ್ ಶಿಫಾರಸ್ಸು ಮಾಡುವುದಿಲ್ಲ.

ಅನುಮೋದಿತ ಎರಡು ಲಸಿಕೆಗಳ ನಡುವೆ ಆಯ್ಕೆ ಮಾಡಬಹುದೇ?

ಇಲ್ಲ. ಅನುಮೋದಿತ ಎರಡು ಲಸಿಕೆಗಳ ನಡುವೆ ಯಾವುದೇ ಆಯ್ಕೆ ಇರುವುದಿಲ್ಲ ಮತ್ತು ಎರಡೂ ಸಮಾನವಾಗಿ ಪರಿಣಾಮಕಾರಿಯಾಗಿದೆ.

ಲಸಿಕೆ ಎಷ್ಟು ಸಮಯದ ನಂತರ ಪರಿಣಾಮಕಾರಿಯಾಗಿರುತ್ತದೆ?

ಎರಡನೇ ಡೋಸ್ ತೆಗೆದುಕೊಂಡ 2 ವಾರಗಳ ಬಳಿಕ ಲಸಿಕೆ ಪರಿಣಾಮಕಾರಿಯಾಗಿರುತ್ತದೆ. ರೋಗನಿರೋಧಕ ಪ್ರತಿಕ್ರಿಯೆಯು ರೋಗವನ್ನು ಸುಮಾರು 70%ರಷ್ಟು ಕಡಿಮೆಗೊಳಿಸುತ್ತದೆ, ಆಸ್ಪತ್ರೆಗೆ ಸೇರಿಸುವುದನ್ನು ತಡೆಯುತ್ತದೆ ಮತ್ತು ಮರಣ ಪ್ರಮಾಣವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

ವ್ಯಾಕ್ಸಿನೇಷನ್ ನಂತರ ಮಾಸ್ಕ್ ಧರಿಸಬೇಕೇ?

ಲಸಿಕೆಯು ಕೊರೊನಾ ವೈರಸ್ ವಿರುದ್ಧ 100% ರಕ್ಷಣೆಯನ್ನು ಒದಗಿಸದ ಕಾರಣ ಮಾಸ್ಕ್, ಕೈ ಮತ್ತು ಉಸಿರಾಟದ ನೈರ್ಮಲ್ಯ, ನೈರ್ಮಲ್ಯೀಕರಣ, ಸಾಮಾಜಿಕ ಅಂತರ ಸೇರಿದಂತೆ ಇತ್ಯಾದಿ ಕ್ರಮಗಳನ್ನು ಅನುಸರಿಸಬೇಕೆಂದು ಶಿಫಾರಸ್ಸು ಮಾಡಲಾಗುತ್ತದೆ. ಅಲ್ಲದೇ ಲಸಿಕೆ ಪಡೆದ 2 ವಾರಗಳ ಅವಧಿ ಸಾಕಷ್ಟು ನಿರ್ಣಾಯಕವಾಗಿದೆ.

ಲಸಿಕೆ ಯಾವುದಾದರೂ ಅಡ್ಡಪರಿಣಾಮಗಳನ್ನು ಹೊಂದಿದೆಯೇ?

ಇತರ ಲಸಿಕೆಗಳಂತೆ ಕೊರೊನಾ ಲಸಿಕೆ ಪಡೆದ ಜನರಲ್ಲಿ ಅಲ್ಪ ಜ್ವರ ಮತ್ತು ಚುಚ್ಚುಮದ್ದನ್ನು ನೀಡಿದ ಜಾಗದಲ್ಲಿ ನೋವು ಮತ್ತು ಊತವನ್ನು ಅನುಭವಿಸುವ ಸಾಧ್ಯತೆ ಇದೆ.

ಲಸಿಕೆ ಎಷ್ಟು ದಿನ ಪರಿಣಾಮಕಾರಿಯಾಗಿರುತ್ತದೆ?

ಲಸಿಕೆಯ ಪರಿಣಾಮವು 6 ತಿಂಗಳಿಂದ 2 ವರ್ಷಗಳವರೆಗೆ ಬದಲಾಗಬಹುದು. ಆದರೆ, ಈವರೆಗೆ ಸಂಗ್ರಹಿಸಿದ ದತ್ತಾಂಶವು ನಿರ್ಣಾಯಕವಾಗಿಲ್ಲ. ಬೂಸ್ಟರ್ ಡೋಸ್ ಅಗತ್ಯವಿದೆಯೇ ಅಥವಾ ಇಲ್ಲವೇ ಎಂದು ಕೂಡ ನಿರ್ಣಯವಾಗಿಲ್ಲ. ಆದ್ದರಿಂದ, ಹಲವಾರು ದೇಶಗಳಲ್ಲಿ ವ್ಯಾಕ್ಸಿನೇಷನ್ ಡ್ರೈವ್ ಪ್ರಾರಂಭವಾಗಿದ್ದರೂ, ಸಂಶೋಧನೆಗಳು ಇನ್ನೂ ವಿವಿಧ ಪ್ರಶ್ನೆಗಳಿಗೆ ನಿರ್ಣಾಯಕ ಉತ್ತರಗಳನ್ನು ನೀಡಬೇಕಿದೆ. ಕೋವಿಡ್-19 ವ್ಯಾಕ್ಸಿನೇಷನ್ ಕಡ್ಡಾಯವಲ್ಲದಿದ್ದರೂ, ಅದು ಮುಖ್ಯವಾಗಿದೆ.

ABOUT THE AUTHOR

...view details