ಕರ್ನಾಟಕ

karnataka

ETV Bharat / bharat

ತಿಳಿದೋ..ತಿಳಿಯದೆಯೋ ಮಾಡುವ ಈ ತಪ್ಪುಗಳು ಮಹಿಳೆಯರ ಆರೋಗ್ಯಕ್ಕೆ ಹಾನಿಕಾರಕ.! - ಮಹಿಳೆಯರ ಸರಿಯಾದ ನೈರ್ಮಲ್ಯ ಪದ್ಧತಿ

ಮಧ್ಯಪ್ರದೇಶದ ದೇವಾಸ್ ಮೂಲದ ಸ್ತ್ರೀರೋಗ ತಜ್ಞೆ ಡಾ.ಪ್ರಾಚಿ ಮಹೇಶ್ವರಿ, ನಮ್ಮ ದೇಶದಲ್ಲಿ ಕೇವಲ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರವಲ್ಲ, ನಗರ ಪ್ರದೇಶಗಳ ಮಹಿಳೆಯರಿಗೂ ಸರಿಯಾದ ಸ್ತ್ರೀ ನೈರ್ಮಲ್ಯದ ಅಭ್ಯಾಸಗಳ ಬಗ್ಗೆ ಹೆಚ್ಚು ತಿಳಿದಿಲ್ಲ ಎಂದು ಉಲ್ಲೇಖಿಸಿದ್ದಾರೆ. ಇದು ಅವರ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರಬಹುದು ಎಂದಿದ್ದಾರೆ. ಮಹಿಳೆಯರ ಆರೋಗ್ಯದ ಮೇಲೆ ಪರಿಣಾಮ ಬೀರುವ ಕೆಲವು ಸಾಮಾನ್ಯ ತಪ್ಪುಗಳು ಇಲ್ಲಿವೆ.

ಈ ತಪ್ಪುಗಳು ಮಹಿಳೆಯರ ಆರೋಗ್ಯಕ್ಕೆ ಹಾನಿಕಾರಕ
ಈ ತಪ್ಪುಗಳು ಮಹಿಳೆಯರ ಆರೋಗ್ಯಕ್ಕೆ ಹಾನಿಕಾರಕ

By

Published : Oct 16, 2021, 12:45 PM IST

ಅನೇಕ ಬಾರಿ, ತಿಳಿದೋ ತಿಳಿಯದೆಯೋ, ಮಹಿಳೆಯರು ಸರಿಯಾದ ನೈರ್ಮಲ್ಯ ಪದ್ಧತಿಗಳನ್ನು ಅನುಸರಿಸುವುದಿಲ್ಲ. ಇದು ಜನನಾಂಗಗಳಲ್ಲಿನ ಹಲವಾರು ಸೋಂಕುಗಳಿಂದ ಮತ್ತು ಇತರ ಇಂತಹ ಪರಿಸ್ಥಿತಿಗಳಿಂದ ಅವರನ್ನು ಹೆಚ್ಚು ದುರ್ಬಲಗೊಳಿಸುತ್ತದೆ.

ಮಧ್ಯಪ್ರದೇಶದ ದೇವಾಸ್ ಮೂಲದ ಸ್ತ್ರೀರೋಗ ತಜ್ಞೆ ಡಾ.ಪ್ರಾಚಿ ಮಹೇಶ್ವರಿ, ನಮ್ಮ ದೇಶದಲ್ಲಿ ಕೇವಲ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರವಲ್ಲ, ನಗರ ಪ್ರದೇಶಗಳ ಮಹಿಳೆಯರಿಗೂ ಸರಿಯಾದ ಸ್ತ್ರೀ ನೈರ್ಮಲ್ಯದ ಅಭ್ಯಾಸಗಳ ಬಗ್ಗೆ ಹೆಚ್ಚು ತಿಳಿದಿಲ್ಲ ಎಂದು ಉಲ್ಲೇಖಿಸಿದ್ದಾರೆ. ಇದು ಅವರ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರಬಹುದು ಎಂದಿದ್ದಾರೆ. ಮಹಿಳೆಯರ ಆರೋಗ್ಯದ ಮೇಲೆ ಪರಿಣಾಮ ಬೀರುವ ಕೆಲವು ಸಾಮಾನ್ಯ ತಪ್ಪುಗಳು ಇಲ್ಲಿವೆ.

ಒಂದೇ ಸ್ಯಾನಿಟರಿ ಪ್ಯಾಡ್ ಅನ್ನು ದೀರ್ಘಾವಧಿಯವರೆಗೆ ಬಳಸುವುದು ಒಳ್ಳೆಯದಲ್ಲ:

ಹೆಚ್ಚಿನ ಮಹಿಳೆಯರು ಈ ತಪ್ಪು ಮಾಡುತ್ತಾರೆ. ಬ್ಲೀಡಿಂಗ್ ಕಡಿಮೆಯಾಗಲಿ ಅಥವಾ ಹೆಚ್ಚಾಗಲಿ, ಕೆಲವು ಮಹಿಳೆಯರು ದಿನವಿಡೀ ಒಂದೇ ಪ್ಯಾಡ್ ಅನ್ನು ಬಳಸುತ್ತಾರೆ. ಇದು ಯೋನಿ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಪ್ರತಿ ಆರು ಗಂಟೆಗಳ ನಂತರ ಮುಟ್ಟಿನ ಸಮಯದಲ್ಲಿ ಪ್ಯಾಡ್ ಅನ್ನು ಬದಲಿಸುವುದು ಅಗತ್ಯ ಎಂದು ಡಾ. ಪ್ರಾಚಿ ವಿವರಿಸುತ್ತಾರೆ.

ಆದರೆ, ಭಾರೀ ರಕ್ತಸ್ರಾವವಾಗಿದ್ದರೆ, ಪ್ಯಾಡ್ ಅನ್ನು ಹೆಚ್ಚಾಗಿ ಬದಲಾಯಿಸಬೇಕು. ಮುಟ್ಟಿನ ಸಮಯದಲ್ಲಿ ಮಹಿಳೆಯರು ಶುಚಿತ್ವದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು ಎಂದು ಅವರು ಹೇಳುತ್ತಾರೆ. ಏಕೆಂದರೆ ಈ ಸಮಯದಲ್ಲಿ ಯೋನಿ ಅಥವಾ ಮೂತ್ರದ ಸೋಂಕುಗಳು (ಯುಟಿಐ) ಬರುವ ಸಾಧ್ಯತೆ ಹೆಚ್ಚು.

ಜನನಾಂಗದ ಪ್ರದೇಶವನ್ನು ಸಾಬೂನಿನಿಂದ ಸ್ವಚ್ಛಗೊಳಿಸುವುದು ಅವಶ್ಯ:

ಉತ್ತರಾಖಂಡ್ ಮೂಲದ ಹಿರಿಯ ಸ್ತ್ರೀರೋಗ ತಜ್ಞೆ ಡಾ.ವಿಜಯಲಕ್ಷ್ಮಿ, ಸ್ನಾನ ಮಾಡಲು ಬಳಸುವ ಅದೇ ಸಾಬೂನಿನಿಂದ ಮಹಿಳೆಯರು ಸಾಮಾನ್ಯವಾಗಿ ತಮ್ಮ ಖಾಸಗಿ ಪ್ರದೇಶಗಳನ್ನು ಸ್ವಚ್ಛಗೊಳಿಸುತ್ತಾರೆ. ಅಂತಹ ಸಾಬೂನುಗಳು ಕಠಿಣ ಮತ್ತು ಅನೇಕ ರಾಸಾಯನಿಕಗಳನ್ನು ಒಳಗೊಂಡಿರುತ್ತವೆ. ಅಲ್ಲದೇ, ಜನನಾಂಗಗಳ ಚರ್ಮವು ತುಂಬಾ ಸೂಕ್ಷ್ಮವಾಗಿರುವುದರಿಂದ, ಸಾಮಾನ್ಯ ಸಾಬೂನು ಬಳಸುವುದರಿಂದ ಆ ಪ್ರದೇಶದ ಸುತ್ತಲಿನ ಚರ್ಮದ pH ಸಮತೋಲನದ ಮೇಲೆ ಪರಿಣಾಮ ಬೀರಬಹುದು ಮತ್ತು ತುರಿಕೆ, ಶುಷ್ಕತೆ ಮತ್ತು ದದ್ದುಗಳಂತಹ ಸಮಸ್ಯೆಗಳು ಉಂಟಾಗಬಹುದು ಎಂದು ಹೇಳಿದ್ದಾರೆ.

ಇದರ ಜೊತೆಯಲ್ಲಿ, ಬಲವಾದ ರಾಸಾಯನಿಕಗಳು ಉತ್ತಮ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತವೆ. ಇದು ಯೋನಿಯನ್ನು ಸೋಂಕುಗಳಿಂದ ಮುಕ್ತಗೊಳಿಸುತ್ತದೆ. ಬ್ಯಾಕ್ಟೀರಿಯಾದ ಯೋನಿನೋಸಿಸ್ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಜನನಾಂಗಗಳನ್ನು ಸ್ವಚ್ಛಗೊಳಿಸಲು ರಾಸಾಯನಿಕ ರಹಿತ ಸೋಪ್, ಯೋನಿ ವಾಶ್ ಅಥವಾ ನೀರನ್ನು ಬಳಸಬಹುದು. ಆದಾಗ್ಯೂ, ಈಗ ಮಾರುಕಟ್ಟೆಯಲ್ಲಿ ಯೋನಿ ವಾಶ್ ಸುಲಭವಾಗಿ ಲಭ್ಯವಿದೆ ಎಂಬುದನ್ನು ನೆನಪಿಡಿ. ಆದರೆ ಇದನ್ನು ನಿರಂತರವಾಗಿ ಬಳಸಬಾರದು.

ಬಲವಾದ ರಾಸಾಯನಿಕಗಳನ್ನು ಹೊಂದಿರುವ ಡಿಟರ್ಜೆಂಟ್‌ಗಳಲ್ಲಿ ಒಳ ಉಡುಪುಗಳನ್ನು ತೊಳೆಯುವುದು:

ಲಾಂಡ್ರಿ ಡಿಟರ್ಜೆಂಟ್ ಪುಡಿಗಳಲ್ಲಿ ಹೆಚ್ಚಿನ ರಾಸಾಯನಿಕ ಅಂಶವಿದೆ. ಜೊತೆಗೆ ಬಲವಾದ ಸುವಾಸನೆಯನ್ನು ಹೊಂದಿರುತ್ತದೆ. ಅದೇ ಡಿಟರ್ಜೆಂಟ್‌ನಿಂದ ತೊಳೆದ ಒಳ ಉಡುಪುಗಳು ಜನನಾಂಗಗಳ ಚರ್ಮದ ಮೇಲೆ ಪರಿಣಾಮ ಬೀರಬಹುದು ಮತ್ತು ಯೋನಿಯ pH ಮಟ್ಟವನ್ನು ತೊಂದರೆಗೊಳಿಸಬಹುದು. ಆದ್ದರಿಂದ, ಒಳ ಉಡುಪುಗಳನ್ನು ಸೌಮ್ಯ ರಾಸಾಯನಿಕ ಮತ್ತು ಸುಗಂಧ ರಹಿತ ಡಿಟರ್ಜೆಂಟ್ ಪುಡಿಗಳಲ್ಲಿ ಅಥವಾ ಔಷಧೀಯ ಸಾಬೂನಿನಿಂದ ತೊಳೆಯಬೇಕು.

ಬ್ರಾ ಧರಿಸಿ ಮಲಗುವುದು ಸರಿಯಾದ ಕ್ರಮವಲ್ಲ:

ರಾತ್ರಿ ಮಲಗುವಾಗ ಬ್ರಾ ಧರಿಸದಿದ್ದರೆ ಅವರ ಸ್ತನದ ಗಾತ್ರ ಕುಗ್ಗಬಹುದೆಂಬ ಸಾಮಾನ್ಯ ತಪ್ಪು ಕಲ್ಪನೆ ಮಹಿಳೆಯರಲ್ಲಿ ಇದೆ. ಆದರೆ ಬ್ರಾ ಧರಿಸಿ ಮಲಗುವುದು ಸ್ತನಗಳಲ್ಲಿ ರಕ್ತ ಪರಿಚಲನೆಯ ಮೇಲೆ ಪರಿಣಾಮ ಬೀರಬಹುದು. ಅಸ್ವಸ್ಥತೆಯಿಂದಾಗಿ ನಿದ್ರೆಗೆ ಅಡ್ಡಿಪಡಿಸುತ್ತದೆ. ಇದಷ್ಟೇ ಅಲ್ಲ, ಬಿಗಿಯಾದ ಬ್ರಾ ಧರಿಸಿ ದೀರ್ಘಕಾಲ ಮಲಗುವುದರಿಂದ ಸ್ತನಗಳಲ್ಲಿ ಗಡ್ಡೆಗಳು ಉಂಟಾಗಬಹುದು. ಇದು ಸ್ತನ ಕ್ಯಾನ್ಸರ್‌ಗೆ ಕಾರಣವಾಗಬಹುದು. ಆದ್ದರಿಂದ, ನಿಮ್ಮ ಬ್ರಾ ತೆಗೆದು, ಉತ್ತಮ ನಿದ್ರೆ ಮಾಡಲು ವೈದ್ಯರು ಸಲಹೆ ನೀಡುತ್ತಾರೆ.

ಶೇವಿಂಗ್​ ಪ್ಯುಬಿಕ್ ಹೇರ್:

ಉತ್ತಮ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು, ಅನೇಕ ಮಹಿಳೆಯರು ತಮ್ಮ ಪ್ಯುಬಿಕ್ ಕೂದಲನ್ನು ಶೇವ್ ಮಾಡುತ್ತಾರೆ. ಆದರೆ, ಅವರು ಅದನ್ನು ಸರಿಯಾಗಿ ಶೇವ್ ಮಾಡದಿದ್ದರೆ ಅಥವಾ ರೇಜರ್ ಸಾಕಷ್ಟು ತೀಕ್ಷ್ಣವಾಗಿಲ್ಲದಿದ್ದರೆ, ಕಡಿತ ಮತ್ತು ದದ್ದುಗಳನ್ನು ಅನುಭವಿಸಬಹುದು. ಇದು ಕಿರಿಕಿರಿಯನ್ನು ಉಂಟುಮಾಡಬಹುದು ಮತ್ತು ಸೋಂಕಿಗೆ ಕಾರಣವಾಗಬಹುದು.

ಇದರ ಹೊರತಾಗಿ, ರೇಜರ್ ಬ್ಲೇಡ್ ಅನ್ನು ನಿಯಮಿತವಾಗಿ ಬದಲಾಯಿಸದಿದ್ದರೆ ಅಥವಾ ಅದನ್ನು ಸೋಂಕು ರಹಿತಗೊಳಿಸದಿದ್ದರೆ, ಯೋನಿ ಸೋಂಕು ಮತ್ತು ಚರ್ಮದ ಸಮಸ್ಯೆಗಳ ಅಪಾಯವಿರಬಹುದು. ಆದ್ದರಿಂದ, ಆ ಪ್ರದೇಶದಲ್ಲಿ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಉತ್ತಮ ಮಾರ್ಗವೆಂದರೆ ಕತ್ತರಿ ಅಥವಾ ಟ್ರಿಮ್ಮರ್ ಸಹಾಯದಿಂದ ಪ್ಯುಬಿಕ್ ಕೂದಲನ್ನು ಟ್ರಿಮ್ ಮಾಡುವುದು.

ಅನೇಕ ಮಹಿಳೆಯರು ವ್ಯಾಕ್ಸಿಂಗ್ ಅನ್ನು ಆರಿಸಿಕೊಳ್ಳುತ್ತಾರೆ. ಇದು ನೋವಿನ ಪ್ರಕ್ರಿಯೆಯಾಗಿದೆ. ಅನೇಕ ಕೂದಲು ತೆಗೆಯುವ ಕ್ರೀಮ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಅವುಗಳಲ್ಲಿ ಹೆಚ್ಚಿನ ಪ್ರಮಾಣದ ರಾಸಾಯನಿಕಗಳು ಇರುವುದರಿಂದ ಅವುಗಳನ್ನು ಬಳಸುವುದನ್ನು ತಪ್ಪಿಸಬೇಕು. ಇದು ಸೋಂಕು ಮತ್ತು ಇತರ ಚರ್ಮದ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ABOUT THE AUTHOR

...view details