ಯೋಗವನ್ನು ನಿಯಮಿತವಾಗಿ ಶಿಸ್ತುಬದ್ಧವಾಗಿ ಮತ್ತು ಸುರಕ್ಷತೆಯೊಂದಿಗೆ ಅಭ್ಯಾಸ ಮಾಡಿದಾಗ ಅದು ಮನಸ್ಸು ಮತ್ತು ದೇಹ ಎರಡಕ್ಕೂ ಪ್ರಯೋಜನವನ್ನು ನೀಡುತ್ತದೆ. ಆದರೆ, ಕೆಲವೊಮ್ಮೆ ಸಣ್ಣ ತಪ್ಪು ಕೂಡ ದೇಹಕ್ಕೆ ಹಾನಿ ಉಂಟುಮಾಡುತ್ತದೆ. ಆದ್ದರಿಂದ, ನೀವು ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಕೆಲವು ಸಂಗತಿಗಳು ಇಲ್ಲಿವೆ.
ಯೋಗವು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ, ಏಕೆಂದರೆ ಅದು ನಮ್ಮನ್ನು ಸದೃಢವಾಗಿರಿಸುತ್ತದೆ. ಮನಸ್ಸು ಮತ್ತು ದೇಹದ ನಡುವೆ ಸಮತೋಲನವನ್ನು ರೂಪಿಸುತ್ತದೆ. ಯೋಗದಲ್ಲಿ ಅನೇಕ ಭಂಗಿಗಳು ಅಥವಾ ಆಸನಗಳಿವೆ, ಅದು ನಮ್ಮ ದೇಹದ ವಿವಿಧ ಭಾಗಗಳಿಗೆ ಆಂತರಿಕವಾಗಿ ಮತ್ತು ಬಾಹ್ಯವಾಗಿ ಆರೋಗ್ಯಕಾರಿಯಾಗಿದೆ. ಆದರೆ ಯೋಗಾಭ್ಯಾಸ ಮಾಡುವಾಗ ಆಸನಗಳನ್ನು ಸರಿಯಾಗಿ ಮಾಡುವುದರ ಜೊತೆಗೆ, ಯೋಗದ ನಿಯಮಗಳನ್ನು ಪಾಲಿಸುವುದು ಸಹ ಮುಖ್ಯವಾಗಿದೆ ಎಂದು ಯೋಗ ತರಬೇತುದಾರರಾದ ಮೀನು ವರ್ಮಾ ಹೇಳುತ್ತಾರೆ.
ಯೋಗಾಭ್ಯಾಸ ಮಾಡುವಾಗ ವಿಭಿನ್ನ ಚಟುವಟಿಕೆಗಳು ನಡೆಯುತ್ತವೆ. ಇದರಿಂದಾಗಿ ನಮ್ಮ ಮೆದುಳು, ಮನಸ್ಸು ಮತ್ತು ದೇಹ, ಮೂರೂ ಒಂದೇ ಸಮಯದಲ್ಲಿ ಸಕ್ರಿಯವಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಯಾವುದೇ ಒಂದು ಸಮನ್ವಯದ ಕೊರತೆ ತಪ್ಪುಗಳನ್ನು ಉಂಟುಮಾಡಬಹುದು. ತಜ್ಞರ ಪ್ರಕಾರ ಯೋಗಾಭ್ಯಾಸ ಮಾಡುವಾಗ ಜನರು ಮಾಡುವ ಸಾಮಾನ್ಯ ತಪ್ಪುಗಳು ಈ ಕೆಳಕಂಡಂತಿವೆ.
1. ಸೂಕ್ತವಾದ ಬಟ್ಟೆಗಳನ್ನು ಧರಿಸುವುದಿಲ್ಲ
ಯೋಗಾಸನಗಳನ್ನು ಅಭ್ಯಾಸ ಮಾಡುವಾಗ ನಾವು ಧರಿಸುವ ಬಟ್ಟೆಗಳು ನಮಗೆ ಕಂಫರ್ಟಬಲ್ ಆಗಿರಬೇಕು. ತುಂಬಾ ಬಿಗಿಯಾದ ಅಥವಾ ತುಂಬಾ ಸಡಿಲವಾದ ಬಟ್ಟೆಗಳನ್ನು ಧರಿಸಬೇಡಿ. ಏಕೆಂದರೆ ಅವು ವ್ಯಾಯಾಮ, ಏಕಾಗ್ರತೆ ಮತ್ತು ಉಸಿರಾಟದಲ್ಲಿ ತೊಂದರೆ ಉಂಟುಮಾಡಬಹುದು. ಬೆವರು ಹೀರಿಕೊಳ್ಳಲು ಹಾಗೂ ದೇಹದ ಚಲನ-ವಲನಕ್ಕೆ ಸುಲಭವಾಗುವಂತಹ ಉಡುಪುಗಳನ್ನು ಧರಿಸಿ.
2. ಸರಿಯಾದ ಸ್ಥಳ ಮತ್ತು ಮ್ಯಾಟ್ ಆಯ್ಕೆ
ಯೋಗ ಮ್ಯಾಟ್‌ಗಳು ಮೊಣಕಾಲುಗಳು, ಸೊಂಟ, ಕೈಗಳು, ಅಂಗೈ ಮತ್ತು ಪಾದಗಳಿಗೆ ದಿಂಬಿನ ಪಾತ್ರವನ್ನು ವಹಿಸುತ್ತವೆ ಮತ್ತು ಆಸನಗಳನ್ನು ಮಾಡುವಾಗ ಜಾರಿಬೀಳುವ ಅಪಾಯವನ್ನು ಕಡಿಮೆ ಮಾಡುತ್ತದೆ. ಆದರೆ, ಯೋಗವನ್ನು ಪ್ರಾರಂಭಿಸುವ ಉತ್ಸಾಹದ ನಡುವೆ ಜನರು ಉತ್ತಮವಾಗಿದೆಯೇ ಎಂದು ಪರಿಶೀಲಿಸದೆ ಚಾಪೆಗಳನ್ನು ಖರೀದಿಸುತ್ತಾರೆ. ತುಂಬಾ ನಯವಾದ ಮತ್ತು ಜಾರು ಮ್ಯಾಟ್‌ಗಳು ಬೀಳುವಿಕೆಗೆ ಕಾರಣವಾಗಬಹುದು ಮತ್ತು ವ್ಯಕ್ತಿಯನ್ನು ನೋಯಿಸಬಹುದು. ಅಲ್ಲದೆ, ಕೆಲವೊಮ್ಮೆ ಜನರು ಸಾಕಷ್ಟು ಅಗಲವಿಲ್ಲದ ಚಾಪೆಗಳನ್ನು ಖರೀದಿಸುತ್ತಾರೆ, ಅದು ಸರಿಯಲ್ಲ.