ನವದೆಹಲಿ: ಗೂಗಲ್ ಸ್ಥಳೀಯ ಕಾನೂನುಗಳನ್ನು ಅನುಸರಿಸಲು ಬದ್ದವಾಗಿದೆ ಮತ್ತು ಸರ್ಕಾರದ ನಿಯಮಗಳನ್ನು ಅಳವಡಿಸಿಕೊಂಡು ವೇಗವಾಗಿ ಓಡುತ್ತಿರುವ ತಂತ್ರಜ್ಞಾನದೊಂದಿಗೆ ಒಗ್ಗಿಕೊಳ್ಳಲು ಪ್ರಯತ್ನಿಸುತ್ತದೆ ಎಂದು ಸಂಸ್ಥೆಯ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ.
ಏಷ್ಯಾ ಫೆಸಿಫಿಕ್ನ ಆಯ್ದ ವರದಿಗಾರರೊಂದಿಗಿನ ವರ್ಚುವಲ್ ಮೀಟ್ನಲ್ಲಿ ಮಾತನಾಡಿದ ಅವರು, ನಾವು ಯಾವುದೇ ದೇಶದ ಸ್ಥಳೀಯ ಕಾನೂನುಗಳನ್ನು ಗೌರವಿಸುತ್ತೇವೆ ಮತ್ತು ರಚನಾತ್ಮಕವಾಗಿ ಕೆಲಸ ಮಾಡುತ್ತೇವೆ. ನಮ್ಮ ಕೆಲಸದಲ್ಲಿ ಸ್ಪಷ್ಟತೆ ಮತ್ತು ಪಾರದರ್ಶಕತೆ ಇದೆ. ನಾವು ಸರ್ಕಾರದೊಂದಿಗೆ ವ್ಯವಹರಿಸುವಾಗ ಅದನ್ನು ಅನುಸರಿಸುತ್ತೇವೆ. ಉಚಿತ ಮತ್ತು ಮುಕ್ತ ಅಂತರ್ಜಾಲ ಅಡಿಪಾಯವಾಗಿದೆ. ಭಾರತ ಈ ವಿಷಯದಲ್ಲಿ ದೀರ್ಘ ಇತಿಹಾಸ ಹೊಂದಿದೆ ಎಂದು ತಿಳಿಸಿದ್ದಾರೆ.
ಒಂದು ಕಂಪನಿಯಾಗಿ ಉಚಿತ ಮತ್ತು ಮುಕ್ತ ಅಂತರ್ಜಾಲದ ಮಹತ್ವದ ಬಗ್ಗೆ ನಮಗೆ ಸ್ಪಷ್ಟತೆ ಇದೆ. ಇದನ್ನು ನಾವು ಸಮರ್ಥಿಸುತ್ತೇವೆ ಮತ್ತು ವಿಶ್ವದಾದ್ಯಂತ ಈ ವಿಷಯದಲ್ಲಿ ಸರ್ಕಾರಗಳೊಂದಿಗೆ ನಾವು ರಚನಾತ್ಮಕವಾಗಿ ವ್ಯವಹರಿಸುತ್ತೇವೆ. ಕಂಪನಿಯು ಶಾಸಕಾಂಗದ ನಿಯಮಗಳನ್ನು ಅನುಸರಿಸುತ್ತದೆ ಮತ್ತು ವಿರೋಧಿಸಬೇಕಾದಾಗ ವಿರೋಧಿಸುತ್ತದೆ. ನಾವು ವಿಶ್ವದಾದ್ಯಂತ ಜಗತ್ತಿನಾದ್ಯಂತ ಹಬ್ಬಿಕೊಂಡಿದ್ದೇವೆ ಎಂದು ಪಿಚೈ ಹೇಳಿದ್ದಾರೆ.