ಪಿಂಪ್ರಿ-ಚಿಂಚ್ವಾಡ್ (ಮಹಾರಾಷ್ಟ್ರ): ಕೈಗಾರಿಕಾ ನಗರ ಎಂದೇ ಪ್ರಸಿದ್ಧಿ ಪಡೆದಿರುವ ಮಹಾರಾಷ್ಟ್ರದ ಪಿಂಪ್ರಿ-ಚಿಂಚ್ವಾಡ್ ನಗರದಲ್ಲಿ ಅಪರಾಧ ಪ್ರಕರಣಗಳ ಪ್ರಮಾಣ ಹೆಚ್ಚುತ್ತಿದೆ. ಹೀಗಾಗಿ ಜನರು ದಿನಕ್ಕೆ ನೂರಾರು ದೂರುಗಳನ್ನು ಹೊತ್ತು ಪೊಲೀಸ್ ಠಾಣೆಗಳ ಮೆಟ್ಟಿಲೇರುತ್ತಿದ್ದಾರೆ.
ಜನರ ಸಮಸ್ಯೆಗಳಿಗೆ ಆರಕ್ಷಕರು ಸ್ಪಂದಿಸುತ್ತಾರೆಯೇ ಎಂದು ಪೊಲೀಸರ ಕಾರ್ಯಪ್ರವೃತ್ತಿ ಗಮನಿಸುವ ಸಲುವಾಗಿ ಪಿಂಪ್ರಿ-ಚಿಂಚ್ವಾಡ್ ಪೊಲೀಸ್ ಆಯುಕ್ತ ಕೃಷ್ಣ ಪ್ರಕಾಶ್ ಅವರು ಬುಧವಾರ ಸಾಮಾನ್ಯ ವ್ಯಕ್ತಿಯಂತೆ ವೇಷ ಧರಿಸಿದ್ದರು. ಹಳದಿ ಸಲ್ವಾರ್, ತಲೆಯ ಮೇಲೆ ವಿಗ್ ಹಾಕಿ, ಅದರ ಮೇಲೆ ಬಿಳಿ ಟೋಪಿ ಹಾಕಿ, ಗಡ್ಡ ಅಂಟಿಸಿಕೊಂಡು ಮಟನ್ ಅಂಗಡಿಯ ಚಾಚಾನಂತೆ ರೆಡಿಯಾಗಿ, ನಗರದ ಮೂರು ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿದ್ದಾರೆ.