ವಾರಣಾಸಿ(ಉತ್ತರ ಪ್ರದೇಶ):ಗ್ಯಾನವಾಪಿ- ಶೃಂಗಾರ್ ಗೌರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶದ ಮೇರೆಗೆ ನಡೆದ ಮಸೀದಿ ಸರ್ವೇ ಕಾರ್ಯದ ವಿಡಿಯೋ ಲಭ್ಯವಾಗಿದೆ. ಮಸೀದಿಯ ಕೊಳದಲ್ಲಿ ಶಿವಲಿಂಗ ಪತ್ತೆಯಾದ ಜಾಗದಲ್ಲಿ ಸರ್ವೇ ನಡೆಸುವ ವೇಳೆ ಚಿತ್ರೀಕರಿಸಲಾದ ವಿಡಿಯೋ ಇದಾಗಿದೆ. ಇದನ್ನು ಸರ್ಕಾರಿ ನೇಮಿತ ಛಾಯಾಗ್ರಾಕರೇ ವಿಡಿಯೋ ಮಾಡಿದ್ದು, ಅದು ಸೋರಿಕೆಯಾಗಿದೆ.
ವಿಡಿಯೋದಲ್ಲಿ ದೊಡ್ಡ ಕಲ್ಲಿನಂತಿರುವ ಶಿವಲಿಂಗ ಮಾದರಿಯನ್ನು ಸಹ ಕಾಣಬಹುದಾಗಿದೆ. ಈ ಬಗ್ಗೆ ಕೋರ್ಟ್ನಲ್ಲಿ ವಿವಾದವಿದೆ. ಗ್ಯಾನವಾಪಿ ಮಸೀದಿಯಲ್ಲಿ ಪತ್ತೆಯಾದ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಕೋರಿ ಹಿಂದು ಮಹಿಳೆಯರು ಅರ್ಜಿ ಸಲ್ಲಿಸಿದ್ದು, ಈ ಬಗ್ಗೆ ಕೋರ್ಟ್ ವಿಚಾರಣೆ ನಡೆಸುತ್ತಿದೆ.