ಚೆನ್ನೈ (ತಮಿಳುನಾಡು):ಕೇವಲ ರೀಲ್ನಲ್ಲಿ ಮಾತ್ರವಲ್ಲ, ನೈಜ ಜೀವನದಲ್ಲೂ ಹೀರೋ ಆಗಿರಬೇಕು ಎಂದು ನ್ಯಾಯಮೂರ್ತಿಗಳು ಹೇಳಿದ ಮಾತು ನನ್ನನ್ನು ನೋಯಿಸಿದೆ ಎಂದು ತಮಿಳು ನಟ ಇಳಯದಳಪತಿ ವಿಜಯ್ ಬೇಸರ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಆಮದು ಸುಂಕವನ್ನು ಕಟ್ಟಿದ್ದರೂ ಕೂಡ ಪ್ರವೇಶ ತೆರಿಗೆ ವಿಧಿಸಲಾಗುತ್ತಿದೆ. ಹೀಗಾಗಿ ಪ್ರವೇಶ ತೆರಿಗೆಯನ್ನು ವಿಧಿಸದಂತೆ ತಡೆಯಾಜ್ಞೆಯನ್ನು ಕೋರಿ ಮದ್ರಾಸ್ ಹೈಕೋರ್ಟ್ನಲ್ಲಿ ಕೆಲ ತಿಂಗಳ ಹಿಂದೆ ವಿಜಯ್ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ವಜಾಗೊಳಿಸಿದ್ದ ಜಡ್ಜ್ ಎಸ್.ಎಂ.ಸುಬ್ರಮಣ್ಯಂ ಅವರು ನಟರು ತಮ್ಮ ತೆರಿಗೆಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಬೇಕು. ಕೇವಲ ರೀಲ್ನಲ್ಲಿ ಮಾತ್ರವಲ್ಲ, ನೈಜ ಜೀವನದಲ್ಲೂ ಹೀರೋ ಆಗಿರಬೇಕು ಎಂದು ಸಲಹೆ ನೀಡಿ 1 ಲಕ್ಷ ರೂ. ದಂಡ ಪಾವತಿಸಲು ಸೂಚಿಸಿತ್ತು.
2012ರಲ್ಲಿ ಇಂಗ್ಲೆಂಡ್ನಲ್ಲಿ ಐಷಾರಾಮಿ ಕಾರೊಂದನ್ನು ಆಮದು ಮಾಡಿಕೊಂಡಿದ್ದಕ್ಕೆ ವಿಜಯ್ಗೆ ದಂಡ ವಿಧಿಸಲಾಗಿತ್ತು. ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರು. ಇಂದು ನ್ಯಾಯಮೂರ್ತಿಗಳಾದ ಪುಷ್ಪಾ ಸತ್ಯನಾರಾಯಣ ಮತ್ತು ಮೊಹಮ್ಮದ್ ಶಫೀಕ್ ಅವರ ನ್ಯಾಯಪೀಠ ಈ ಅರ್ಜಿಯ ವಿಚಾರಣೆ ನಡೆಸಿತು.