ನವದೆಹಲಿ:17ನೇ ಲೋಕಸಭೆಯ 5ನೇ ಅಧಿವೇಶನವು ಜನವರಿ 29ರಿಂದ ಪ್ರಾರಂಭವಾಗಲಿದ್ದು, ಸರ್ಕಾರಿ ವ್ಯವಹಾರದ ಅಗತ್ಯತೆಗಳಿಗೆ ಒಳಪಟ್ಟು ಏಪ್ರಿಲ್ 8ಕ್ಕೆ ಮುಕ್ತಾಯಗೊಳ್ಳುವ ಸಾಧ್ಯತೆಯಿದೆ.
ಜನವರಿ 29ಕ್ಕೆ ಲೋಕಸಭೆ ಅಧಿವೇಶನ, ಫೆ.1ಕ್ಕೆ ಕೇಂದ್ರ ಬಜೆಟ್ ಮಂಡನೆ - ಫೆ.1ಕ್ಕೆ ಕೇಂದ್ರ ಬಜೆಟ್ ಮಂಡನೆ
ಲೋಕಸಭೆಯ 5ನೇ ಅಧಿವೇಶನವು ಜನವರಿ 29ರಿಂದ ಆರಂಭವಾಗಲಿದ್ದು, ಬೆಳಿಗ್ಗೆ 11ಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಜನವರಿ 29ಕ್ಕೆ ಲೋಕಸಭೆ ಅಧಿವೇಶನ
ಅಂದು ಬೆಳಿಗ್ಗೆ 11ಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಫೆ.1ರಂದು ಬೆಳಿಗ್ಗೆ 11ಕ್ಕೆ ಕೇಂದ್ರ ಸರ್ಕಾರ ಬಜೆಟ್ ಮಂಡಿಸಲಿದೆ.
ಸ್ಥಾಯಿ ಸಮಿತಿಗಳು, ಸಚಿವಾಲಯಗಳು/ಇಲಾಖೆಗಳ ಅನುದಾನದ ಬೇಡಿಕೆಗಳನ್ನು ಪರಿಗಣಿಸಲು ಮತ್ತು ಅವರ ವರದಿಗಳನ್ನು ಸಿದ್ಧಪಡಿಸಲು ಸದನವನ್ನು ಫೆ.15ಕ್ಕೆ ಮುಂದೂಡುವ ಸಾಧ್ಯತೆ ಇದೆ. ಮತ್ತು ಮಾ.8ರಂದು ಮತ್ತೆ ಸಭೆ ಸೇರುವ ಸಾಧ್ಯತೆ ಇದೆ.