ಗೋರಖ್ಪುರ(ಉತ್ತರ ಪ್ರದೇಶ): ಕಾಕೋರಿ ರೈಲು ದರೋಡೆಯಲ್ಲಿ ಹುತಾತ್ಮರಾದ ಯೋಧರ ಸ್ಮರಣಾರ್ಥ ರಾಮಗಢಲ್ ಬಳಿಯ ಮಹಂತ್ ದಿಗ್ವಿಜಯನಾಥ್ ಸ್ಮೃತಿ ಪಾರ್ಕ್‌ನಲ್ಲಿ ಇಂದು ಸಂಜೆ ಬೃಹತ್ ಡ್ರೋನ್ ಪ್ರದರ್ಶನವನ್ನು ಆಯೋಜಿಸಲಾಗಿದೆ. ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಸಂಸ್ಕೃತಿ ಮತ್ತು ವಿದೇಶಾಂಗ ಖಾತೆ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಮತ್ತು ರಾಜ್ಯ ಸರ್ಕಾರದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜೈವೀರ್ ಸಿಂಗ್ ಭಾಗಿಯಾಗಲಿದ್ದಾರೆ.
ಉತ್ತರ ಪ್ರದೇಶದಲ್ಲಿ ಅತಿದೊಡ್ಡ ಡ್ರೋನ್ ಪ್ರದರ್ಶನ ಕಾರ್ಯಕ್ರಮದಲ್ಲಿ ಸ್ವದೇಶಿ ತಂತ್ರಜ್ಞಾನದ ಮೂಲಕ ತಯಾರಿಸಲಾದ ಸುಮಾರು 750 ಡ್ರೋನ್‌ಗಳ ಪ್ರದರ್ಶನ ಇರಲಿದೆ. ಈ ವೇಳೆ ದೇಶಭಕ್ತಿ ಗೀತೆಯನ್ನು ಮೊಳಗಿಸುವ ಮೂಲಕ ಪ್ರೇಕ್ಷಕರ ಸೆಳೆಯಲಾಗುವುದು. ಡಿಸೆಂಬರ್ 15ರಿಂದ 19ರವರೆಗೆ ರಾಜ್ಯ ಸರ್ಕಾರ ಸ್ವಾತಂತ್ರ್ಯ ಚಳವಳಿಯ ಹೋರೋಗಳ ಗೌರವ ಸಲ್ಲಿಕೆ ಮಾಡುತ್ತಿದೆ.
ಈ ಡ್ರೋನ್ ಶೋನಲ್ಲಿ 1857ರ ಮೊದಲ ಸ್ವಾತಂತ್ರ್ಯ ಮಹಾಸಂಗ್ರಾಮದಿಂದ 1947ರವರೆಗಿನ ಭಾರತದ ಸ್ವಾತಂತ್ರ್ಯದ ಕುರಿತು ಹಲವು ಕ್ರಾಂತಿಕಾರಿಕ ಕಾರ್ಯಕ್ರಮಗಳು ನಡೆಯಲಿವೆ. 2021ರ ಡಿಸೆಂಬರ್ ನಲ್ಲಿ ಭಾರತೀಯ ವೀರ ಯೋಧರ ಬಲಿದಾನವನ್ನು ತಿಳಿಸಲು ಲಕ್ನೋದ ರೆಸಿಡೆನ್ಸಿಯಲ್ಲಿ 500 ಡ್ರೋನ್‌ಗಳ ಪ್ರದರ್ಶನವನ್ನು ಆಯೋಜಿಸಲಾಗಿತ್ತು.
ಇದನ್ನೂ ಓದಿ:ಪಠಾಣ್ ಪೋಸ್ಟರ್ನಲ್ಲಿ ಯೋಗಿ ಆದಿತ್ಯನಾಥ್ ಫೋಟೋ ಮಾರ್ಫ್: ಪ್ರಕರಣ ದಾಖಲು