ಕರ್ನಾಟಕ

karnataka

ಕೊವ್ಯಾಕ್ಸಿನ್ + ಕೊವಿಶೀಲ್ಡ್ ಲಸಿಕೆಗಳ ಸಂಯೋಜನೆ ಉತ್ತಮ ಫಲಿತಾಂಶ ನೀಡುತ್ತದೆ: AIG ಅಧ್ಯಯನ

By

Published : Jan 3, 2022, 9:17 PM IST

ಕೊವ್ಯಾಕ್ಸಿನ್ ಮತ್ತು ಕೊವಿಶೀಲ್ಡ್ ಸಂಯೋಜನೆಯು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ ಎಂದು ಎಐಜಿ ಆಸ್ಪತ್ರೆಗಳ ಅಧ್ಯಯನದಿಂದ ತಿಳಿದುಬಂದಿದೆ.

Combination Of Covaxin And Covishiled Vaccines Yields Good Results: AIG Study
ಕೋವಾಕ್ಸಿನ್+ ಕೋವಿಶಿಲ್ಡ್ ಲಸಿಕೆಗಳ ಸಂಯೋಜನೆಯು ಉತ್ತಮ ಫಲಿತಾಂಶ ನೀಡುತ್ತದೆ

ಹೈದರಾಬಾದ್: ಕೊರೊನಾ ನಿಯಂತ್ರಣಕ್ಕೆ ಲಸಿಕೆ ರಾಮಬಾಣವಾಗಿದ್ದು, ಪ್ರತಿಯೊಬ್ಬರೂ ಎರಡೂ ಡೋಸ್​ ಪಡೆದುಕೊಳ್ಳಬೇಕು ಎಂದು ಸರ್ಕಾರ ಸೂಚಿಸಿದೆ.

ಪ್ರಸ್ತುತ ಕೊವ್ಯಾಕ್ಸಿನ್ ಮತ್ತು ಕೊವಿಶೀಲ್ಡ್ ಲಸಿಕೆಗಳನ್ನು ಹಾಕಲಾಗುತ್ತಿದ್ದು, ಮೊದಲು ಕೊವ್ಯಾಕ್ಸಿನ್ ಪಡೆದುಕೊಂಡರೆ ಎರಡನೇ ಡೋಸ್​ ಅನ್ನು ಸಹ ಕೊವ್ಯಾಕ್ಸಿನ್ ತೆಗೆದುಕೊಳ್ಳಬೇಕು ಎಂದು ಹೇಳಲಾಗುತ್ತಿತ್ತು. ಆದರೆ, ಈಗ ಕುತೂಹಲಕಾರಿ ಮಾಹಿತಿ ಹೊರಬಿದ್ದಿದೆ.

ಕೋವಿಡ್ ಲಸಿಕೆಗಳಾದ ಕೊವ್ಯಾಕ್ಸಿನ್ ಮತ್ತು ಕೊವಿಶೀಲ್ಡ್ ಸಂಯೋಜನೆಯು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ ಎಂದು ಎಐಜಿ ಆಸ್ಪತ್ರೆಗಳ ಅಧ್ಯಯನದಿಂದ ತಿಳಿದುಬಂದಿದೆ. ಈ ಲಸಿಕೆಗಳ ಸಂಯೋಜನೆಯು ಪ್ರತಿಕಾಯಗಳ ಪ್ರತಿಕ್ರಿಯೆಯನ್ನು ಹೆಚ್ಚಿಸುತ್ತದೆ. ಹಾಗೆಯೇ ಇದು ಸುರಕ್ಷಿತವಾಗಿದೆ ಎಂದು ಎಐಜಿ ಆಸ್ಪತ್ರೆಯ ಅಧ್ಯಕ್ಷ ಡಾ.ನಾಗೇಶ್ವರ್ ರೆಡ್ಡಿ ಹೇಳುತ್ತಾರೆ.

ಈ ಕೆಲಸಕ್ಕೆ 330 ಸ್ವಯಂಸೇವಕರನ್ನು ಬಳಕೆ ಮಾಡಿದ್ದು, ಅವರ ಮೇಲೆ ಅಧ್ಯಯನವನ್ನು ನಡೆಸಲಾಗಿದೆ. ನಾವು ಇದರ ಪ್ರತಿಕೂಲ ಪರಿಣಾಮಗಳನ್ನು ತಿಳಿಯಲು 60 ದಿನಗಳ ಕಾಲ ಪರಿವೀಕ್ಷಿಸಿದ್ದೇವೆ ಎಂದು ತಿಳಿಸಿದ್ದಾರೆ.

ಡಾ. ನಾಗೇಶ್ವರ ರೆಡ್ಡಿ

ಸ್ಪೈಕ್ ಪ್ರೊಟೀನ್ ಪ್ರತಿಕಾಯ ಪ್ರತಿಕ್ರಿಯೆಯು ಸ್ವಯಂಸೇವಕರಲ್ಲಿ 4 ಪಟ್ಟು ಹೆಚ್ಚಾಗಿದೆ. ಒಂದೇ ರೀತಿಯ ಲಸಿಕೆಗಳನ್ನು ತೆಗೆದುಕೊಳ್ಳುವುದಕ್ಕಿಂತ ಲಸಿಕೆಗಳ ಸಂಯೋಜನೆಯಲ್ಲಿ ಇದು ಸಾಧ್ಯ. ಕಾಂಬಿನೇಶನ್ ಲಸಿಕೆಗಳು ಒಮಿಕ್ರಾನ್ ರೂಪಾಂತರಿ ಎದುರಿಸುವಲ್ಲಿ ಉತ್ತಮ ಕಾರ್ಯಕ್ಷಮತೆ ತೋರಿಸಲಿವೆ. ಜನವರಿ 10 ರಿಂದ ಪ್ರಾರಂಭವಾಗುವ ಬೂಸ್ಟರ್ ಡೋಸ್‌ನಲ್ಲಿ ನೀವು ಲಸಿಕೆಗಳ ಸಂಯೋಜನೆಯನ್ನು ಸಲಹೆಯಾಗಿ ತೆಗೆದುಕೊಳ್ಳಬಹುದು.

ಡಾ. ನಾಗೇಶ್ವರ ರೆಡ್ಡಿ

ABOUT THE AUTHOR

...view details