ತಿರುನೆಲ್ವೀಲಿ(ತಮಿಳುನಾಡು):ತಮಿಳುನಾಡಿನಲ್ಲಿ ವಿದ್ಯಾರ್ಥಿನಿಯರ ಸರಣಿ ಆತ್ಮಹತ್ಯೆ ಪ್ರಕರಣ ನಿಲ್ಲುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಈಗಾಗಲೇ ನಾಲ್ವರು ಬಾಲಕಿಯರು ಸಾವಿನ ಕದ ತಟ್ಟಿದ್ದು, ಇದರ ಬೆನ್ನಲ್ಲೇ ಇದೀಗ ಮತ್ತೊಂದು ಘಟನೆ ನಡೆದಿದೆ. ತಿರುನೆಲ್ವೀಲಿ ಜಿಲ್ಲೆಯ ಕಳಕಾಡು ಸಮೀಪದ ರಾಜಲಿಂಗಪುರದ ಕೂಲಿ ಕಾರ್ಮಿಕನ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಖಾಸಗಿ ಕಾಲೇಜ್ನಲ್ಲಿ ಬಿಎಸ್ಸಿ ವ್ಯಾಸಂಗ ಮಾಡ್ತಿದ್ದ 18 ವರ್ಷದ ವಿದ್ಯಾರ್ಥಿನಿ ಪೋಷಕರ ಆರ್ಥಿಕ ಸಂಕಷ್ಟ ನೋಡಿ ಮನನೊಂದು ಈ ನಿರ್ಧಾರ ಕೈಗೊಂಡಿದ್ದಾಳೆಂದು ವರದಿಯಾಗಿದೆ. ವಿದ್ಯಾರ್ಥಿನಿ ಕಾಲೇಜ್ ಶುಲ್ಕ 12 ಸಾವಿರ ರೂಪಾಯಿ ಎರಡು ಕಂತುಗಳಲ್ಲಿ ತಂದೆ ಮುತ್ತು ಕುಮಾರ್ ಪಾವತಿ ಮಾಡಿದ್ದರು. ಆದರೆ, ವೈಯಕ್ತಿಕ ಖರ್ಚಿಗೆ ಹಣ ನೀಡಿರಲಿಲ್ಲ. ಜೊತೆಗೆ ಇಡೀ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿತ್ತು. ಮಗಳನ್ನ ಓದಿಸಲು ಕುಟುಂಬಸ್ಥರು ಹೆಣಗಾಡುತ್ತಿರುವುದನ್ನ ಕಂಡ ವಿದ್ಯಾರ್ಥಿನಿ ಸಾವಿನ ಮನೆ ಸೇರಿದ್ದಾಳೆ.