ಸುಂದರ್‌ಗಢ (ಒಡಿಶಾ):ಮನೆಯಲ್ಲಿ ಸೀಮೆಎಣ್ಣೆ ದೀಪ ಹಚ್ಚುವ ವೇಳೆ ದೀಪದ ಬೆಂಕಿ ಬಟ್ಟೆಗೆ ತಗುಲಿ ಕಾಲೇಜು ವಿದ್ಯಾರ್ಥಿನಿ ಸಜೀವ ದಹನವಾಗಿರುವ ಘಟನೆ ಒಡಿಶಾದ ಸುಂದರ್‌ಗಢದಲ್ಲಿ ಸಂಭವಿಸಿದೆ.
ಮೃತಳನ್ನು ಸುಂದರ್‌ಗಢ ಜಿಲ್ಲೆಯ ಭಲುದುಂಗುರಿ ಗ್ರಾಮದ ನಿವಾಸಿ ಸ್ವಪ್ನೇಶ್ವರಿ ಮುಂಡಾ ಎಂದು ಗುರುತಿಸಲಾಗಿದೆ. ಈಕೆ ಪದವಿ ಕಾಲೇಜಿನಲ್ಲಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಆಕೆಗೆ ಬೆಂಕಿ ತಗುಲುತ್ತಿದ್ದಂತೆಯೇ ಕುಟುಂಬ ಸದಸ್ಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಸಂಪೂರ್ಣ ದೇಹ ಸುಟ್ಟಿದ್ದರಿಂದ ಅಷ್ಟರಲ್ಲಾಗಲೇ ಕೊನೆಯುಸಿರೆಳೆದಿದ್ದಳು.