ಕರ್ನಾಟಕ

karnataka

ETV Bharat / bharat

ಗುಜರಾತ್​​ನಲ್ಲಿ ಕೊರೊನಾ ಲಸಿಕೆ ಪಡೆದ ಡಿಸಿ, ಪೊಲೀಸ್​ ಅಧಿಕಾರಿಗಳು - ಮುಂಚೂಣಿ ಕಾರ್ಮಿಕರಿಗೆ ಗುಜರಾತ್​ನಲ್ಲಿ ಲಸಿ

ಜಿಲ್ಲಾಧಿಕಾರಿಗಳು, ಹಿರಿಯ ಪೊಲೀಸ್​ ಅಧಿಕಾರಿಗಳು ಸೇರಿ ನಿನ್ನೆ ಒಂದೇ ದಿನದಲ್ಲಿ 70 ಸಾವಿರಕ್ಕೂ ಅಧಿಕ ಮುಂಚೂಣಿ ಕಾರ್ಮಿಕರಿಗೆ ಗುಜರಾತ್​ನಲ್ಲಿ ಲಸಿಕೆ ನೀಡಲಾಗಿದೆ.

Collectors, senior cops take COVID-19 vaccine shots in Gujarat
ಗುಜರಾತ್​​ನಲ್ಲಿ ಕೊರೊನಾ ಲಸಿಕೆ ಪಡೆದ ಡಿಸಿ, ಪೊಲೀಸ್​ ಅಧಿಕಾರಿಗಳು

By

Published : Feb 1, 2021, 11:22 AM IST

ಅಹಮದಾಬಾದ್​:ಆರೋಗ್ಯ ಕಾರ್ಯಕರ್ತರ ಬಳಿಕ ಇದೀಗ ಕೋವಿಡ್​ ವಿರುದ್ಧದ ಹೋರಾಟದಲ್ಲಿರುವ ಮುಂಚೂಣಿ ಕಾರ್ಮಿಕರಿಗಾಗಿ ಗುಜರಾತ್​ ನಿನ್ನೆ ವ್ಯಾಕ್ಸಿನೇಷನ್ ಡ್ರೈವ್ ಪ್ರಾರಂಭಿಸಿದೆ.

ಜಿಲ್ಲಾಧಿಕಾರಿಗಳು, ಗ್ರಾಮೀಣಾಭಿವೃದ್ಧಿ, ಜಿಲ್ಲಾಭಿವೃದ್ಧಿ ಹಾಗೂ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಪೊಲೀಸ್ ಆಯುಕ್ತರು ಸೇರಿ ನಿನ್ನೆ ಒಂದೇ ದಿನದಲ್ಲಿ ಒಟ್ಟು 71,534 ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ.

ಇದನ್ನೂ ಓದಿ: ದೇಶದಲ್ಲಿ 1.68 ಲಕ್ಷ ಕೋವಿಡ್​ ಕೇಸ್​ಗಳು ಮಾತ್ರ ಸಕ್ರಿಯ

ವ್ಯಾಕ್ಸಿನ್​ ತೆಗೆದುಕೊಂಡ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅಹಮದಾಬಾದ್ ನಗರ ಪೊಲೀಸ್ ಆಯುಕ್ತ ಸಂಜಯ್ ಶ್ರೀವಾಸ್ತವ್​, ಕೊರೊನಾ ವಿರುದ್ಧದ ಯುದ್ಧವನ್ನು ಗೆಲ್ಲಲು ಎಲ್ಲರೂ ಲಸಿಕೆ ಪಡೆಯಬೇಕಾಗಿದೆ. ಸದಾ ಕಾರ್ಯನಿರತರಾಗಿರುವ ಪೊಲೀಸರು ಸೋಂಕಿನಿಂದ ರಕ್ಷಿಸಿಕೊಳ್ಳಲು ಲಸಿಕೆ ಹಾಕಿಸಿಕೊಳ್ಳಬೇಕು ಎಂದರು.

ರಾಜ್ಯದಲ್ಲಿ 2,45,930 ಅಥವಾ ಶೇ.50ರಷ್ಟು ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದ್ದು, ಈವರೆಗೆ ಲಸಿಕೆ ಪಡೆದ ಯಾರೊಬ್ಬರ ಮೇಲೂ ಗಂಭೀರವಾದ ಅಡ್ಡಪರಿಣಾಮಗಳು ಬೀರಿಲ್ಲ. ಇದೀಗ ನಾವು 3.3 ಲಕ್ಷ ಮುಂಚೂಣಿ ಕಾರ್ಮಿಕರಿಗೆ ಲಸಿಕೆ ವಿತರಿಸುವ ಗುರಿ ಹೊಂದಿದ್ದೇವೆ ಎಂದು ಗುಜರಾತ್​ ಆರೋಗ್ಯ ಇಲಾಖೆ ತಿಳಿಸಿದೆ.

ABOUT THE AUTHOR

...view details