ಕರ್ನಾಟಕ

karnataka

ETV Bharat / bharat

ಸರ್ಕಾರಿ ಆಸ್ಪತ್ರೆಯಲ್ಲಿ ಮುದ್ದಾದ ಮಗುವಿಗೆ ಜನ್ಮ ನೀಡಿದ ಜಿಲ್ಲಾಧಿಕಾರಿ ಪತ್ನಿ - ಭದ್ರಾಚಲಂ ಸುದ್ದಿ

ಈಗಿನ ಕಾಲದಲ್ಲಿ ಅಧಿಕಾರಿಗಳು ತಮಗೆ ಅಥವಾ ತಮ್ಮ ಕುಟುಂಬಸ್ಥರು ಅನಾರೋಗ್ಯದಿಂದ ಬಳಲುತ್ತಿದ್ರೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಕದ ತಟ್ಟುವುದು ಸಹಜ. ಆದ್ರೆ ಇಲ್ಲೋರ್ವ ಜಿಲ್ಲಾಧಿಕಾರಿ ತನ್ನ ಪತ್ನಿಯ ಹೆರಿಗೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಮಾಡಿಸಿದ್ದಾರೆ. ಈ ಅಪರೂಪದ ಘಟನೆಗೆ ತೆಲಂಗಾಣ ರಾಜ್ಯದ ಭದ್ರಾಚಲಂ ಜಿಲ್ಲೆ ಸಾಕ್ಷಿಯಾಗಿದೆ.

collector wife gives birth, collector wife gives birth to a baby boy, collector wife gives birth to a baby boy in government hospital, bhadrachalam news, ಮಗುವಿಗೆ ಜನ್ಮ ನೀಡಿದ ಜಿಲ್ಲಾಧಿಕಾರಿ ಪತ್ನಿ, ಗಂಡು ಮಗುವಿಗೆ ಜನ್ಮ ನೀಡಿದ ಜಿಲ್ಲಾಧಿಕಾರಿ ಪತ್ನಿ, ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ಜಿಲ್ಲಾಧಿಕಾರಿ ಪತ್ನಿ, ಭದ್ರಾಚಲಂ ಸುದ್ದಿ,
ಕೃಪೆ: Twitter

By

Published : Nov 10, 2021, 12:54 PM IST

ಭದ್ರಾಚಲಂ: ಭದ್ರಾಚಲಂ ಸರ್ಕಾರಿ ಪ್ರಾದೇಶಿಕ ಆಸ್ಪತ್ರೆಯಲ್ಲಿ ಭದ್ರಾದ್ರಿ ಕೊತ್ತಗುಡೆಂ ಜಿಲ್ಲಾಧಿಕಾರಿ ಅನುದೀಪ್ ಅವರ ಪತ್ನಿ ಮಾಧವಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಜಿಲ್ಲಾಧಿಕಾರಿ ತಮ್ಮ ಪತ್ನಿ ಹೆರಿಗೆಗಾಗಿ ಮಂಗಳವಾರ ಮಧ್ಯರಾತ್ರಿ ಆಸ್ಪತ್ರೆಗೆ ದಾಖಲಿಸಿದ್ದರು.

ಕೃಪೆ: Twitter

ಮಂಗಳವಾರ ರಾತ್ರಿ ತುಂಬ ಗರ್ಭಿಣಿಯಾಗಿದ್ದ ಮಾಧವಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಜಿಲ್ಲಾಧಿಕಾರಿ ಅನುದೀಪ್​ ತಮ್ಮ ಪತ್ನಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಡಿಸಿಎಚ್‌ಎಸ್ ಡಾ. ಎಂ.ಮುಕ್ಕಂಟೇಶ್ವರರಾವ್ ಮತ್ತು ಉಪ ಅಧೀಕ್ಷಕ ಡಾ.ರಾಮಕೃಷ್ಣ ಅವರ ಮೇಲ್ವಿಚಾರಣೆಯಲ್ಲಿ ವೈದ್ಯರು ಆಕೆಗೆ ಅಗತ್ಯ ಪರೀಕ್ಷೆಗಳನ್ನು ನಡೆಸಿದರು. ಬಳಿಕ ರಾತ್ರಿ ಒಂದು ಗಂಟೆಗೆ ಜಿಲ್ಲಾಧಿಕಾರಿ ಪತ್ನಿಗೆ ಸಿಸೇರಿಯನ್ ಮಾಡಿಸಿದರು.

ಸಿಸೇರಿಯನ್​ ಮೂಲಕ ಗಂಡು ಮಗು ಜನಿಸಿದ್ದಕ್ಕೆ ಜಿಲ್ಲಾಧಿಕಾರಿ ಅನುದೀಪ್ ದಂಪತಿ ಸಂತಸ ವ್ಯಕ್ತಪಡಿಸಿದರು. ಕೆಲ ದಿನಗಳಿಂದ ಜಿಲ್ಲಾಧಿಕಾರಿ ಪತ್ನಿ ಮಾಧವಿ ಸರ್ಕಾರಿ ಆಸ್ಪತ್ರೆಗೆ ಬಂದು ಸ್ತ್ರೀರೋಗ ತಜ್ಞರ ಸಲಹೆ ಪಡೆಯುತ್ತಿದ್ದರು. ಸರ್ಕಾರಿ ಆಸ್ಪತ್ರೆಗಳ ಮೇಲೆ ಹೆಚ್ಚಿನ ವಿಶ್ವಾಸ ಮೂಡಿಸುವ ಜಿಲ್ಲಾಧಿಕಾರಿಯವರ ಈ ಪ್ರಯತ್ನವನ್ನು ಹಲವರು ಶ್ಲಾಘಿಸಿದ್ದಾರೆ.

ABOUT THE AUTHOR

...view details