ಹೈದರಾಬಾದ್:ಜಿಲ್ಲಾಧಿಕಾರಿ ಒಂದು ಜಿಲ್ಲೆಯ ಬಾಸ್. ಐಎಎಸ್ ಕೇಡರ್ನ ಅಧಿಕಾರಿಗೆ ಬಿಡುವಿಲ್ಲದ ಕೆಲಸ, ಒತ್ತಡ ಸಹಜವೇ. ತಮ್ಮ ಒತ್ತಡವನ್ನು ನೀಗಿಸಿಕೊಳ್ಳಲು ಸಿನಿಮಾ, ಸುತ್ತಾಟ, ಟ್ರಿಪ್ ಹೋಗ್ತಾರೆ. ಆದರೆ, ಆಂಧ್ರಪದೇಶದ ಈ ಜಿಲ್ಲಾಧಿಕಾರಿಗಳು ಮಾತ್ರ ಡಿಫರೆಂಟ್. ಹೇಗಂತೀರಾ?. ಇವರು ಬಿಡುವು ಸಿಕ್ಕರೆ ರೈತರ ಜಮೀನುಗಳಿಗೆ ಹೋಗಿ ಕೆಲಸ ಮಾಡ್ತಾರೆ.
ಆಂಧ್ರಪ್ರದೇಶದ ಪ್ರಕಾಶಂ ಮತ್ತು ಬಾಪಟ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಾದ ದಿನೇಶ್ ಕುಮಾರ್ ಮತ್ತು ವಿಜಯ ಕೃಷ್ಣನ್ ದಂಪತಿಗಳಾಗಿದ್ದಾರೆ. ಇವರು ರೈತಪರ ಕಾರ್ಯಗಳಿಗೆ ಹೆಚ್ಚಿನ ಮನ್ನಣೆ ಪಡೆದಿದ್ದಾರೆ. ಅನ್ನದಾತನ ಕಷ್ಟಗಳನ್ನು ಕಣ್ಣಾರೆ ಕಾಣಲು ಅವರೇ ಜಮೀನುಗಳಿಗೆ ತೆರಳಿ ಕುಯ್ಲು, ನಾಟಿ ಕೆಲಸಗಳನ್ನು ಮಾಡುತ್ತಾರೆ.