ಕರ್ನಾಟಕ

karnataka

ETV Bharat / bharat

ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಆರೋಪಿಗಳ ಡಿಎನ್​ಎ ಸಂಗ್ರಹಿಸಲು ಅನುಮತಿ ನೀಡಿದ ನಾಂಪಲ್ಲಿ ನ್ಯಾಯಾಲಯ

ಜುಬಿಲಿಹಿಲ್ಸ್​ನಲ್ಲಿ ನಡೆದ ಅಪ್ರಾಪ್ತೆ ಬಾಲಕಿ ಮೇಲಿನ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಆರೋಪಿಗಳ ಡಿಎನ್‌ಎ ಸಂಗ್ರಹಿಸಲು ನಾಂಪಲ್ಲಿಯ ನ್ಯಾಯಾಲಯವು ಅನುಮತಿ ನೀಡಿದೆ. ಈ ಮೂಲಕ ದೊರೆತಿರುವ ಸಾಕ್ಷ್ಯಗಳೊಂದಿಗೆ ಡಿಎನ್​ಎ ಹೋಲಿಕೆ ಮಾಡಲಾಗುತ್ತದೆ..

gang rape case
ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಆರೋಪಿಗಳ ಡಿಎನ್​ಎ ಸಂಗ್ರಹಿಸಲು ತಿಳಿಸಿದ ನಾಂಪಲ್ಲಿ ನ್ಯಾಯಾಲಯ

By

Published : Jun 27, 2022, 4:04 PM IST

ಹೈದರಬಾದ್ ​:ಮೇ 28ರಂದು ಜಿಲ್ಲೆಯ ಜುಬಿಲಿಹಿಲ್ಸ್ ನಗರದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನ ಆರೋಪಿಗಳನ್ನು ಬಂಧಿಸಲಾಗಿತ್ತು. ಇದೀಗ ನಾಂಪಲ್ಲಿ ನ್ಯಾಯಾಲಯವು ಆರೋಪಿಗಳ ಡಿಎನ್‌ಎ ಸಂಗ್ರಹಿಸಲು ಪೊಲೀಸರಿಗೆ ಅನುಮತಿ ನೀಡಿದೆ.

ಪೊಲೀಸರು ಆರೋಪಿಗಳ ಡಿಎನ್‌ಎ ಸಂಗ್ರಹಿಸಿ ಶೀಘ್ರದಲ್ಲೇ ಪ್ರಯೋಗಾಲಯಕ್ಕೆ ಕಳುಹಿಸಿ ಅತ್ಯಾಚಾರ ನಡೆದಿರುವ ಇನ್ನೋವಾ ಕಾರ್​ ವಾಹನದಲ್ಲಿ ದೊರೆತಿದ್ದ ಸಾಕ್ಷ್ಯಗಳೊಂದಿಗೆ ಹೋಲಿಕೆ ಮಾಡಲಿದ್ದಾರೆ. ಘಟನೆ ವೇಳೆ ಆರೋಪಿಗಳು ಇನ್ನೋವಾದಲ್ಲಿಯೇ ಇದ್ದರಾ ಅಥವಾ ಇಲ್ಲವಾ ಎಂಬುದನ್ನು ನಿರ್ಧರಿಸುವಲ್ಲಿ ಡಿಎನ್‌ಎ ಪರೀಕ್ಷೆಯು ನೆರವಾಗಲಿದೆ. ಅಗತ್ಯ ಬಿದ್ದರೆ ಸಂತ್ರಸ್ತೆಯ ಡಿಎನ್ಎಯನ್ನು ಸಂಗ್ರಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಪ್ರಕರಣದಲ್ಲಿ ಪ್ರಮುಖ ಆರೋಪಿ ಸಾದುದ್ದೀನ್ (18) ಚಂಚಲಗೂಡ ಜೈಲಿನಲ್ಲಿದ್ದು, ಉಳಿದ ಐವರು ಅಪ್ರಾಪ್ತರಾಗಿದ್ದಾರೆ. ಇವರನ್ನು ಸೈದರಾಬಾದ್‌ನ ಬಾಲಾಪರಾಧಿಗೃಹದಲ್ಲಿ ಇಡಲಾಗಿದೆ.

ಇದನ್ನೂ ಓದಿ:16 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ ಸರ್ಕಾರ!

ABOUT THE AUTHOR

...view details