ಚೆನ್ನೈ( ತಮಿಳುನಾಡು):ಇತ್ತೀಚೆಗೆ ಕೊಯಂಬತ್ತೂರಿನಲ್ಲಿ ಕಾರ್ ಸಿಲಿಂಡರ್ ಸ್ಫೋಟ ಸಂಭವಿಸಿ ಒಬ್ಬ ಮೃತಪಟ್ಟಿದ್ದ. ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ತಮಿಳುನಾಡು ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಈ ವಿಚಾರದ ಬಗ್ಗೆ ಮಾತನಾಡಿರುವ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ, ಜಮೇಶ ಮುಬಿನ್ ನಿವಾಸದಿಂದ ಪೊಲೀಸರು 50 ಕೆಜಿ ಅಮೋನಿಯಂ ನೈಟ್ರೇಟ್, ಪೊಟ್ಯಾಸಿಯಮ್, ಸೋಡಿಯಂ, ಫ್ಯೂಸ್ ವೈರ್ ಮತ್ತು 7 ವೋಲ್ಟ್ ಬ್ಯಾಟರಿಗಳನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಇದನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ ಎಂದು ಆರೋಪಿಸಿದ್ದಾರೆ.
ಅಕ್ಟೋಬರ್ 21 ರಂದು ಜಮೇಶಾ ಮುಬಿನ್ ISIS ನಂತೆಯೇ ವಾಟ್ಸ್ಆ್ಯಪ್ ಸ್ಟೇಟಸ್ ಅನ್ನು ಪೋಸ್ಟ್ ಮಾಡಿದ್ದಾರೆ. 5 ಮಂದಿಯನ್ನು ಏಕೆ ಬಂಧಿಸಿದ್ದಾರೆ ಎನ್ನುವುದನ್ನು ಪೊಲೀಸರು ಹೇಳಿಲ್ಲ. ಈ ಸ್ಫೋಟದ ಬಗ್ಗೆ ಟಿಎನ್ ಬಿಜೆಪಿ ಪರವಾಗಿ ನಾವು ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿದ್ದೇವೆ. ಇದನ್ನು ‘ಆತ್ಮಹತ್ಯಾ ದಾಳಿ’ ಎಂದು ಪೊಲೀಸರು ಒಪ್ಪಿಕೊಳ್ಳಬೇಕು ಎಂದು ಅಣ್ಣಾಮಲೈ ಆಗ್ರಹಿಸಿದ್ದಾರೆ.