ಕರ್ನಾಟಕ

karnataka

ETV Bharat / bharat

ಕೊಯಂಬತ್ತೂರು ಸ್ಫೋಟ ಪ್ರಕರಣ: ಕೇರಳ, ಮಂಗಳೂರಿನಲ್ಲೂ ಎನ್‌ಐಎ ತನಿಖೆ - 75 ಕೆಜಿ ಸ್ಫೋಟಕ ವಶ

ಕೊಯಂಬತ್ತೂರಿನ ಉಕ್ಕಡಂ ಪೋರ್ಟ್​ನ ಬಳಿ ಈಶ್ವರ ದೇವಾಲಯದ ಎದುರು ಅ.23ರಂದು ನಡೆದ ಮಾರುತಿ ಕಾರು ಸ್ಪೋಟ ಪ್ರಕರಣವನ್ನು ತೀವ್ರವಾಗಿ ಪರಿಗಣಿಸಿದ ಎನ್ಐಎ ಅಧಿಕಾರಿಗಳು, ಇದು ಯೋಜಿತ ಆತ್ಮಹತ್ಯಾ ದಾಳಿ ಎಂದು ತನಿಖೆಯುಲ್ಲಿ ತಿಳಿಸಿದೆ.

coimbatore car blast incident
ಕೊಯಂಬತ್ತೂರಿನ ಉಕ್ಕಡಂ ಪೋರ್ಟ್​ನ ಬಳಿ ಕಾರು ಸ್ಪೋಟ ಚಿತ್ರ

By

Published : Nov 3, 2022, 11:45 AM IST

ಕೊಯಮತ್ತೂರು: ಕೊಯಂಬತ್ತೂರಿನ ಉಕ್ಕಡಂ ಪೋರ್ಟ್​ನ ಈಶ್ವರ ದೇವಾಲಯದ ಎದುರು ಅ.23ರಂದು ಮಾರುತಿ ಕಾರೊಂದು ಸ್ಫೋಟಗೊಂಡು ಅದರಲ್ಲಿದ್ದ ಜೇಮ್ಸ್ ಮುಬಿನ್ ಸ್ಥಳದಲ್ಲಿ ಮೃತಪಟ್ಟಿದ್ದ. ಪ್ರಕರಣ ತನಿಖೆ ಕೈಗೆತ್ತಿಕೊಂಡಿರುವ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಕೇರಳ ಮತ್ತು ಮಂಗಳೂರಿನಲ್ಲಿಯೂ ಶೋಧ ಆರೋಪಿಗಳಿಗೆ ಶೋಧ ನಡೆಸುತ್ತಿದೆ.

ಈ ಘಟನೆ ನಡೆದನಂತರ ಜೇಮ್ಸಾ ಮುಬಿನ್ ಎಂಬಾತ ಮನೆಯ ಮೇಲೆ ದಾಳಿ ನಡೆಸಿದ ತನಿಖಾ ದಳ, 75 ಕೆಜಿ ಸ್ಫೋಟಕ ವಶಕ್ಕೆ ಪಡೆದಿತ್ತು. ಅಷ್ಟೇ ಅಲ್ಲ, 6 ಶಂಕಿತರನ್ನು ಬಂಧಿಸಿದ್ದತ್ತು. ಬಳಿಕ ಉಕ್ಕಡಂ ಪ್ರದೇಶದ ಮೊಹಮ್ಮದ್ ತಳಕಾ, ಮೊಹಮ್ಮದ್ ಅಜರುದ್ದೀನ್, ಮೊಹಮ್ಮದ್ ರಿಯಾಜ್, ಪೆರೋಜ್ ಇಸ್ಮಾಯಿಲ್, ಮೊಹಮ್ಮದ್ ನವಾಜ್ ಇಸ್ಮಾಯಿಲ್ ಮತ್ತು ಅಪ್ಸರ್ ಖಾನ್ ಎಂಬವರನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ:ಕೇವಲ 950 ರೂಪಾಯಿ ಸಾಲ ಮರುಪಾವತಿಸದ್ದಕ್ಕೆ ಯುವಕನ ಮೇಲೆ ಆ್ಯಸಿಡ್​ ದಾಳಿ

ABOUT THE AUTHOR

...view details