ಕರ್ನಾಟಕ

karnataka

ETV Bharat / bharat

ಮದುವೆ ಆಮಂತ್ರಣ ನೀಡಲು ಹೋದವನ ಮೇಲೆ ಬಿದ್ದ ತೆಂಗಿನ ಮರ: ವ್ಯಕ್ತಿ ಸ್ಥಳದಲ್ಲೇ ಸಾವು - ಮದುವೆ ಆಮಂತ್ರಣ ನೀಡಲು ಹೋದವ ಸಾವು

ಅಣ್ಣನ ಮಗನ ಜೊತೆ ಲಗ್ನ ಪತ್ರಿಕೆ ಹಂಚಲು ಖುಷಿಯಿಂದ ಹೊರಗೆ ಹೋದ ವೆಂಕಟೇಶ್ವರ ರಾವ್ ಮೃತಪಟ್ಟಿದ್ದಾರೆ. ಅಣ್ಣನ ಮಗ ಬೈಕ್ ಓಡಿಸುತ್ತಿದ್ದ, ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಇವರ ಮೇಲೆ ತೆಂಗಿನ ಮರ ಬಿದ್ದು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಮದುವೆ ಆಮಂತ್ರಣ ನೀಡಲು ಹೋದವನ ಮೇಲೆ ಬಿದ್ದ ತೆಂಗಿನ ಮರ
ಮದುವೆ ಆಮಂತ್ರಣ ನೀಡಲು ಹೋದವನ ಮೇಲೆ ಬಿದ್ದ ತೆಂಗಿನ ಮರ

By

Published : Mar 27, 2022, 6:13 PM IST

ಪಶ್ಚಿಮ ಗೋದಾವರಿ(ಆಂಧ್ರ ಪ್ರದೇಶ): ಆ ಮನೆಯಲ್ಲಿ ಮಗನಿಗೆ ಮದುವೆ ನಿಶ್ಚಯವಾಗಿತ್ತು. ಆ ಸಂಭ್ರಮದಲ್ಲಿದ್ದ ತಂದೆಯು ಬಂಧು ಬಳಗದವರಿಗೆ ಮದುವೆ ಆಮಂತ್ರಣ ಪತ್ರಿಕೆ ನೀಡಿ, ಮದುವೆಗೆ ತಪ್ಪದೇ ಬನ್ನಿ ಎಂದು ಆಹ್ವಾನ ನೀಡಿ ಬರುತ್ತಿದ್ದರು. ಆದರೆ, ಈ ವಿವಾಹ ನಡೆಯುವ ಮುನ್ನವೇ ದುರಂತವೊಂದು ಜರುಗಿದೆ. ಮದುವೆಯ ಆಮಂತ್ರಣ ಪತ್ರಿಕೆಯೊಂದಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ತಂದೆ ಅನಿರೀಕ್ಷಿತವಾಗಿ ಸಾವನ್ನಪ್ಪಿದ್ದಾರೆ. ಪಶ್ಚಿಮ ಗೋದಾವರಿ ಜಿಲ್ಲೆಯ ಪಾಲಕೋಡೇರು ಮಂಡಲ ಮೊಗಲ್ಲು ಎಂಬಲ್ಲಿ ಈ ದಾರುಣ ಘಟನೆ ಸಂಭವಿಸಿದೆ.

ಇದನ್ನೂ ಓದಿ: ಮೊಬೈಲ್​ ಗೀಳು ಹೊಂದಿರುವವರೇ ಎಚ್ಚರ.. ನಿಮಗೂ ಬಂದೀತು ಈ ಹುಚ್ಚುತನ!

ಕಲ್ಲ ಮಂಡಲ ಕೊಪ್ಪಲಿನ ಪೆದ್ದಿರೆಡ್ಡಿ ವೆಂಕಟೇಶ್ವರ ರಾವ್ (53) ಮೃತರು. ಅವರ ಮಗನ ಮದುವೆಯನ್ನು ಏಪ್ರಿಲ್ 14 ರಂದು ನಿಗದಿಪಡಿಸಲಾಗಿತ್ತು. ಪರಿಣಾಮ ಅಣ್ಣನ ಮಗನ ಜೊತೆ ಲಗ್ನ ಪತ್ರಿಹೆ ಹಂಚಲು ಖುಷಿಯಿಂದ ಹೊರಗೆ ಹೋದ ವೆಂಕಟೇಶ್ವರ ರಾವ್ ಮೃತಪಟ್ಟಿದ್ದಾರೆ. ಅಣ್ಣನ ಮಗ ಬೈಕ್ ಓಡಿಸುತ್ತಿದ್ದ, ಆಗ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಇವರ ಮೇಲೆ ತೆಂಗಿನ ಮರ ಬಿದ್ದು ಸ್ಥಳದಲ್ಲೇ ಭೀಕರವಾಗಿ ಸಾವಿಗೀಡಾಗಿದ್ದಾರೆ.

ABOUT THE AUTHOR

...view details