ಕರ್ನಾಟಕ

karnataka

ETV Bharat / bharat

Vande Bharat Train: ವಂದೇ ಭಾರತ್‌ ರೈಲು ಪ್ರಯಾಣಿಕನ ತಿಂಡಿಯಲ್ಲಿ ಜಿರಳೆ: ಪರವಾನಗಿದಾರರಿಗೆ ಎಚ್ಚರಿಕೆ ನೀಡಿದ IRCTC - ಐಆರ್‌ಸಿಟಿಸಿ ಎಚ್ಚರಿಕೆ

Cockroach found in Vande Bharat express train food: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ನೀಡಲಾದ ಲಘು ಉಪಹಾರದಲ್ಲಿ ಜಿರಳೆ ಕಾಣಿಸಿಕೊಂಡ ಬಗ್ಗೆ ವರದಿಯಾದ ಬಳಿಕ ಅಡುಗೆ ಪರವಾನಗಿದಾರರಿಗೆ ಐಆರ್‌ಸಿಟಿಸಿ ಎಚ್ಚರಿಕೆ ನೀಡಿದೆ.

Cockroach in meal
Cockroach in meal

By

Published : Jul 28, 2023, 10:54 AM IST

ಭೋಪಾಲ್ (ಮಧ್ಯಪ್ರದೇಶ) : ಭೋಪಾಲ್‌ನ ರಾಣಿ ಕಮಲಾಪತಿಯಿಂದ ದೆಹಲಿಯ ಹಜರತ್ ನಿಜಾಮುದ್ದೀನ್​ಗೆ​ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (ಐಆರ್‌ಸಿಟಿಸಿ) ನೀಡಿದ ಉಪಹಾರದಲ್ಲಿ ಜಿರಳೆ ಕಾಣಿಸಿಕೊಂಡಿದೆ ಎಂದು ದೂರು ನೀಡಿದ ಬಳಿಕ, ರೈಲ್ವೆ ಇಲಾಖೆಯು ಅಡುಗೆ ಪರವಾನಗಿದಾರರ ವಿರುದ್ಧ ಕ್ರಮ ಕೈಗೊಂಡಿದೆ.

ಜುಲೈ 24, 2023ರಂದು ಭೋಪಾಲ್‌ನಿಂದ ಗ್ವಾಲಿಯರ್‌ಗೆ ಕೋಚ್ ಸಂಖ್ಯೆ 20171 ರ ಸೀಟ್ ಸಂಖ್ಯೆ 57 ರಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಉಪಾಹಾರಕ್ಕಾಗಿ ತೆಗೆದುಕೊಂಡ ಪರಾಠದಲ್ಲಿ ಜಿರಳೆ ಪತ್ತೆಯಾಗಿತ್ತು. ಕೂಡಲೇ ರೈಲುಗಳಲ್ಲಿ ನೀಡಲಾಗುವ ಆಹಾರದ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದ ಇತರೆ ಪ್ರಯಾಣಿಕರು, ತಿಂಡಿಯಲ್ಲಿ ಜಿರಳೆ ಇರುವ ಫೋಟೋಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಈ ಮಾಹಿತಿ ಗಮನಕ್ಕೆ ಬಂದ ತಕ್ಷಣ, ರೈಲಿನಲ್ಲಿದ್ದ IRCTC ಅಧಿಕಾರಿಗಳು ತಕ್ಷಣವೇ ಪ್ರಯಾಣಿಕರನ್ನು ಸಂಪರ್ಕಿಸಿ, ತ್ವರಿತ ಕ್ರಮ ಕೈಗೊಂಡು ಪರ್ಯಾಯ ಆಹಾರದ ವ್ಯವಸ್ಥೆ ಮಾಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ IRCTC ಕ್ಷಮೆ ಯಾಚಿಸಿದೆ. ಆಹಾರ ಸೇವೆ ಒದಗಿಸುವ ಲೈಸೆನ್ಸ್‌ದಾರರಿಗೆ ದಂಡ ವಿಧಿಸಿದೆ. ಜೊತೆಗೆ, ಅಡುಗೆಮನೆಯಲ್ಲಿ ಆಹಾರ ತಯಾರಿಸುವ ಮುನ್ನ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದೆ. ಹಾಗೂ ಅಡುಗೆ ಕೋಣೆಯನ್ನು ಕಾಲಕಾಲಕ್ಕೆ ಪರಿಶೀಲಿಸಲು ನಿರ್ಧರಿಸಿದೆ.

ಭಾರತೀಯ ರೈಲ್ವೆ ಕೂಡ ಆರೋಪಿಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ ಮತ್ತು ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಕ್ರಮ ಕೈಗೊಳ್ಳಲು ತಿಳಿಸಿದೆ. ಭವಿಷ್ಯದಲ್ಲಿ ಇಂತಹ ದೂರುಗಳು ಕಂಡು ಬಂದರೆ IRCTC ಮತ್ತು ಪರವಾನಗಿದಾರರಿಬ್ಬರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ :ನೈರುತ್ಯ ರೈಲ್ವೆ ಮತ್ತೊಂದು ಮಹತ್ವದ ಹೆಜ್ಜೆ.. ರೈಲ್ವೆ ನಿಲ್ದಾಣದಲ್ಲಿ ಕಡಿಮೆ ದರದಲ್ಲಿ ಪ್ರಯಾಣಿಕರಿಗೆ ಆಹಾರ ಪದಾರ್ಥ ವಿತರಣೆ

ಕಡಿಮೆ ದರದಲ್ಲಿ ಪ್ರಯಾಣಿಕರಿಗೆ ಆಹಾರ : ವಿಶ್ವದ ಅತಿದೊಡ್ಡ ರೈಲ್ವೆ ಫ್ಲಾಟ್ ಫಾರಂ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಜೊತೆಗೆ ಸಾಕಷ್ಟು ಜನಪರ ಕಾರ್ಯ ಮಾಡಿರುವ ನೈಋತ್ಯ ರೈಲ್ವೆ ವಲಯವು ಇದೀಗ ಪ್ರಯಾಣಿಕರಿಗೆ ಕಡಿಮೆ ದರದಲ್ಲಿಯೇ ಗುಣಮಟ್ಟದ ಆಹಾರ ಪದಾರ್ಥಗಳನ್ನು ನೀಡುತ್ತಿದೆ.‌ ಐ.ಆರ್.ಸಿ.ಟಿ.ಸಿ ಹಾಗೂ ಎಸ್ಡ ಬ್ಲ್ಯೂಆರ್ ಸಹಯೋಗದೊಂದಿಗೆ ರೈಲ್ವೆ ಫ್ಲಾಟ್ ಫಾರಂ ಮೇಲೆ ಜನತಾ ಖಾನಾ ಹಾಗೂ ಸ್ನ್ಯಾಕ್ ಮೀಲ್ಸ್ ಹೆಸರಲ್ಲಿ ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಆಹಾರ ಒದಗಿಸುತ್ತಿದೆ. ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣ ಹಾಗೂ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲಿ ವಿದ್ಯುಕ್ತವಾಗಿ ಈಗಾಗಲೇ ಚಾಲನೆ ನೀಡಲಾಗಿದೆ.

ರೈಲ್ವೆ ಪ್ರಯಾಣಿಕರಿಗೆ ಆರೋಗ್ಯಯುತ ಆಹಾರ ನೀಡುವ ನಿಟ್ಟಿನಲ್ಲಿ 20 ರೂಪಾಯಿಯಲ್ಲಿ ಜನತಾ ಖಾನಾ, 50 ರೂಪಾಯಿಯಲ್ಲಿ ಸ್ಕ್ಯಾಕ್ ಮೀಲ್ಸ್‌ ನೀಡುವುದರ ಮೂಲಕ ಪ್ರಯಾಣಿಕರ ಹಸಿವನ್ನು ನೀಗಿಸುವ ಕಾರ್ಯ ಮಾಡುತ್ತಿದೆ. ಎಸ್.ಡಬ್ಲೂ.ಆರ್ ವಲಯದ 51 ರೈಲ್ವೆ ನಿಲ್ದಾಣದಲ್ಲಿರುವ ಸ್ಟಾಲ್ ಮೂಲಕ ವಿತರಣೆ ಮಾಡಲಾಗುತ್ತಿದೆ.

ABOUT THE AUTHOR

...view details