ಹಲ್ದ್ವಾನಿ(ಉತ್ತರಾಖಂಡ):ದೇಶಾದ್ಯಂತ ಮಳೆಗಾಲ ಆರಂಭಗೊಂಡಿದೆ. ಹೀಗಾಗಿ ಕೆಲವೆಡೆ ಹಾವುಗಳ ಕಾಟ ಹೆಚ್ಚಾಗುತ್ತಿದೆ. ಈ ವೇಳೆ ಪಾರ್ಕ್ ಮಾಡಿರುವ ವಾಹನಗಳ ಒಳಗೆ ಹಾವು ಸೇರಿಕೊಳ್ಳುವ ಸಾಧ್ಯತೆ ದಟ್ಟವಾಗಿದ್ದು, ಅವುಗಳನ್ನ ಹತ್ತುವ, ಹೊರತೆಗೆಯುವ ಮೊದಲು ಒಂದು ಸಲ ಪರಿಶೀಲನೆ ನಡೆಸುವುದು ಸೂಕ್ತ. ಸದ್ಯ ಅಂತಹದೊಂದು ಘಟನೆ ಉತ್ತರಾಖಂಡ್ನಲ್ಲಿ ನಡೆದಿದೆ.
ಉತ್ತರಾಖಂಡನ ಹಲ್ದ್ವಾನಿಯಲ್ಲಿ ಪಾರ್ಕ್ ಮಾಡಿದ್ದ ಬೈಕ್ ಸೀಟಿನ ಕೆಳಗೆ ದೈತ್ಯ ಗಾತ್ರದ ನಾಗರಹಾವು ಕಾಣಿಸಿಕೊಂಡಿದೆ. ಅದೃಷ್ಟವಶಾತ್ ಬೈಕ್ ಸವಾರ ಅದನ್ನ ನೋಡಿರುವ ಕಾರಣ ಯಾವುದೇ ರೀತಿಯ ಅಪಾಯ ನಡೆದಿಲ್ಲ. ರಾಂಪುರ ರಸ್ತೆಯ ಪಂಚಾಯತ್ ಬಳಿ ಪಾರ್ಕ್ ಮಾಡಿದ್ದ ಬೈಕ್ನಲ್ಲಿ ಈ ನಾಗರಹಾವು ಪತ್ತೆಯಾಗಿದೆ. ಸ್ಥಳದಲ್ಲಿ ಸೇರಿರುವ ಕೆಲ ಯುವಕರು ಅದರ ರಕ್ಷಣೆ ಮಾಡಿ ಕಾಡಿನೊಳಗೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.