ಸಾಮಾಜಿಕ ಮಾಧ್ಯಮದಲ್ಲಿ ಪ್ರತಿದಿನ ಅನೇಕ ಸ್ಪೂರ್ತಿದಾಯಕ ವಿಡಿಯೋಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲೂ ಪ್ರಾಣಿಗಳ ಮೇಲೆ ಮನುಷ್ಯರ ಸಹಾನುಭೂತಿ, ಪ್ರಾಣಿಗಳಿಗೆ ಮನುಷ್ಯರ ಮೇಲಿನ ಪ್ರೀತಿ ಇತ್ಯಾದಿಗಳನ್ನು ತೋರಿಸುವ ಹಲವು ವಿಡಿಯೋಗಳು ಗಮನ ಸೆಳೆಯುತ್ತವೆ. ಇದೀಗ ಹಸಿವಿನ ಮಹತ್ವ ಸಾರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚಮ್ಮಾರನೊಬ್ಬ ರಸ್ತೆಯ ಪಕ್ಕದಲ್ಲಿ ಸ್ಯಾಂಡ್ ಪೈಪರ್ ಪಕ್ಷಿಗಳ ಗುಂಪಿಗೆ ಆಹಾರ ನೀಡುತ್ತಿರುವ ವಿಡಿಯೋ ಇದು. ಆತ ಚಪ್ಪಲಿ ಹೊಲೆಯುತ್ತಾ ರಸ್ತೆಬದಿಯಲ್ಲಿ ಕುಳಿತಿರುತ್ತಾನೆ. ಆಗ ಪಕ್ಷಿಗಳ ಗುಂಪು ಬಳಿಗೆ ಬಂದಿವೆ. ಹಸಿವಿನ ಬೆಲೆ ತಿಳಿದು ಅವುಗಳಿಗೆ ಆಹಾರ ಹಾಕಿದ್ದಾನೆ. ಪಕ್ಷಿಗಳು ಕೂಡಾ ಗುಂಪುಗಳಲ್ಲಿ ಬಂದು ಧಾನ್ಯ ತಿನ್ನುವುದನ್ನು ವಿಡಿಯೋದಲ್ಲಿ ನೀವು ನೋಡುವಿರಿ.