ಕರ್ನಾಟಕ

karnataka

ETV Bharat / bharat

ಇದು KGF ಚಾಪ್ಟರ್​ 3 ಹಗರಣ.. ಬೃಹತ್​ ಕಲ್ಲಿದ್ದಲು ಕಳ್ಳತನದ ವಿಡಿಯೋ ವೈರಲ್​! - ಕೊರ್ಬಾದಲ್ಲಿ ಕಲ್ಲಿದ್ದಲು ಕಳ್ಳತನ

ಕೊರ್ಬಾದಲ್ಲಿ ಸಾವಿರಾರು ಜನರು ಕಲ್ಲಿದ್ದಲು ಕಳ್ಳತನ ಮಾಡುತ್ತಿರುವ ವಿಡಿಯೋ ತುಣುಕವೊಂದು ವೈರಲ್​ ಆಗಿದ್ದು, ಇದನ್ನ ಕೆಜಿಎಫ್​ ಚಾಪ್ಟರ್ 3 ಹಗರಣ ಎಂದು ಕರೆಯಲಾಗಿದೆ.

COAL THEFT FROM CHHATTISGARH
COAL THEFT FROM CHHATTISGARH

By

Published : May 20, 2022, 5:22 PM IST

ಕೊರ್ಬಾ(ಛತ್ತೀಸಗಢ):ಭಾರತೀಯ ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿರುವ ಕೆಜಿಎಫ್​ ಚಾಪ್ಟರ್​ 2 ಸಿನಿಮಾದಲ್ಲಿ ಅಕ್ರಮವಾಗಿ ಮೈನಿಂಗ್​ ಮಾಡುವ ಮೂಲಕ ಚಿನ್ನ ಹೊರತೆಗೆಯುವ ಕಥೆ ಹೊಂದಿದೆ. ಇದೊಂದು ಕಾಲ್ಪನಿಕ ಸ್ಟೋರಿ. ಆದರೆ, ಛತ್ತೀಸಗಢದ ಕೊರ್ಬಾದಲ್ಲಿರುವ ಬೃಹತ್​ ಕಲ್ಲಿದ್ದಲು ಗಣಿಯಲ್ಲಿ ಸಂಚಲನ ಮೂಡಿಸುವ ವಿಡಿಯೋ ತುಣುಕವೊಂದು ಹೊರಬಿದ್ದಿದೆ. ಇದನ್ನ ಕೆಜಿಎಫ್​ ಭಾಗ 3 ಹಗರಣ ಎಂದು ಕರೆಯಲಾಗ್ತಿದೆ.

ಏಷ್ಯಾದ ಅತಿದೊಡ್ಡ ಕಲ್ಲಿದ್ದಲು ಗಣಿಯಾಗಿರುವ ಛತ್ತೀಸಗಢದ ಕೊರ್ಬಾದಲ್ಲಿರುವ ಗೆವ್ರಾ ಮೈನ್ಸ್‌ನ ದೃಶ್ಯ ಇದಾಗಿದೆ ಎಂದು ಹೇಳಲಾಗ್ತಿದೆ. ಸಾವಿರಾರು ಕಾರ್ಮಿಕರು, ನೂರಾರು ವಾಹನಗಳಲ್ಲಿ ಅಕ್ರಮವಾಗಿ ಕಲ್ಲಿದ್ದಲು ಕದಿಯುವ ಕೆಲಸ ಮಾಡ್ತಿದ್ದಾರೆ. ಈ ಕಳ್ಳತನದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಇದನ್ನ ಕೆಜಿಎಫ್​ ಭಾಗ 3 ಹಗರಣ ಎಂದು ಕರೆಯಲಾಗ್ತಿದೆ. ಆದರೆ, ವಿಡಿಯೋ ಎಲ್ಲಿಂದ ವೈರಲ್​ ಆಗಿದೆ ಎಂಬುದರ ಬಗ್ಗೆ ಸ್ಪಷ್ಟವಾದ ಯಾವುದೇ ರೀತಿಯ ಮಾಹಿತಿ ಲಭ್ಯವಾಗಿಲ್ಲ. ಇದಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಒಪಿ ಚೌಧರಿ ಟ್ವೀಟ್ ಮಾಡಿದ್ದು, ಈ ವಿಡಿಯೋ ಕೊರ್ಬಾದು ಎಂದು ತಿಳಿಸಿದ್ದಾರೆ.

ತನಿಖೆಗೆ ಆದೇಶ: ವಿಡಿಯೋ ವೈರಲ್​ ಆಗುತ್ತಿದ್ದಂತೆ ಬಿಲಾಸ್​ಪುರ ಐಜಿ ತನಿಖೆಗೆ ಆದೇಶ ಹೊರಡಿಸಿದ್ದಾರೆ. ವೈರಲ್ ಆಗಿರುವ ವಿಡಿಯೋ ಯಾವ ಗಣಿಗೆ ಸಂಬಂಧಿಸಿದ್ದು, ಇಲ್ಲಿ ಭದ್ರತೆ ನಿಯೋಜನೆ ಮಾಡಲಾಗಿದ್ರೂ, ಇಷ್ಟೊಂದು ಸಂಖ್ಯೆಯಲ್ಲಿ ಜನರು ಗಣಿಯೊಳಗೆ ನುಗ್ಗಿರುವುದು ಹೇಗೆ? ಎಂಬೆಲ್ಲ ಪ್ರಶ್ನೆ ಮುಂದಿಟ್ಟುಕೊಂಡು ತನಿಖೆ ನಡೆಸಲು ಸೂಚನೆ ನೀಡಲಾಗಿದೆ.

ವೈರಲ್​ ಆಗಿರುವ ವಿಡಿಯೋ ನೋಡಿ ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದು, ವಿಡಿಯೋ ತುಣುಕಿಗೆ ಕೆಜಿಎಫ್​​ ಚಿತ್ರದ ಹಿನ್ನೆಲೆ ಸಂಗೀತ ಅಳವಡಿಕೆ ಮಾಡಲಾಗಿದೆ. ವಿಡಿಯೋದಲ್ಲಿ ಲಕ್ಷಾಂತರ ಜನರು ಕಲ್ಲಿದ್ದಲು ಸಾಗಣೆ ಮಾಡ್ತಿದ್ದಾರೆ. ಕೊರ್ಬಾದಲ್ಲಿರುವ ಕಲ್ಲಿದ್ದಲು ಗಣಿ ಕೋಲ್ ಇಂಡಿಯಾ ಲಿಮಿಟೆಡ್​​ನ ಅತಿದೊಡ್ಡ ಕಂಪನಿಯಾಗಿದ್ದು, ದೇಶಕ್ಕೆ ಶೇ. 20ರಷ್ಟು ಕಲ್ಲಿದ್ದಲು ಇಲ್ಲಿಂದ ರವಾನೆಯಾಗುತ್ತದೆ.

ABOUT THE AUTHOR

...view details