ನವದೆಹಲಿ: ಕಲ್ಲಿದ್ದಲು ಕೊರತೆ ದೇಶದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಕಲ್ಲಿದ್ದಲು ಆಧರಿಸಿ ವಿದ್ಯುತ್ ಉತ್ಪಾದನೆ ಮಾಡುವ ಕೇವಲ 64 ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕೇವಲ ನಾಲ್ಕು ದಿನಗಳಿಗೆ ಸಾಕಾಗುವಷ್ಟು ಕಲ್ಲಿದ್ದಲು ಮಾತ್ರ ದಾಸ್ತಾನಿದೆ.
ಇತ್ತೀಚೆಗೆ ಕೇಂದ್ರ ವಿದ್ಯುತ್ ಪ್ರಾಧಿಕಾರ (CEA) ಈ ಕುರಿತು ವರದಿ ನೀಡಿದೆ. ಈ ವರದಿಯಲ್ಲಿ ಅಕ್ಟೋಬರ್ 3ರ ವೇಳೆಗೆ ದೇಶದ 25 ವಿದ್ಯುತ್ ಸ್ಥಾವರಗಳು ಕೇವಲ 7 ದಿನ ಅಥವಾ 7 ದಿನಕ್ಕಿಂತ ಕಡಿಮೆ ಅವಧಿಗೆ ಆಗುವಷ್ಟು ಕಲ್ಲಿದ್ದಲನ್ನು ಹೊಂದಿವೆ ಎಂದು ಎಚ್ಚರಿಸಿದೆ.
ಈಗ ಕೇಂದ್ರ ವಿದ್ಯುತ್ ಪ್ರಾಧಿಕಾರ ಹೇಳುವಂತೆ 135 ವಿದ್ಯುತ್ ಸ್ಥಾವರಗಳಲ್ಲಿ ದಾಸ್ತಾನಾಗಿರುವ ಕಲ್ಲಿದ್ದಲು ಮೂಲಕ ದಿನಕ್ಕೆ 165 ಗಿಗಾ ವ್ಯಾಟ್ನಷ್ಟು ವಿದ್ಯುತ್ ಉತ್ಪಾದನೆಯಾಗುತ್ತಿದೆ. ಅಕ್ಟೋಬರ್ 3ರ ವೇಳೆಗೆ 135 ಸ್ಥಾವರಗಳಲ್ಲಿ 78,09,200 ಟನ್‌ಗಳ ಒಟ್ಟು ಕಲ್ಲಿದ್ದಲು ದಾಸ್ತಾನು ಲಭ್ಯವಿತ್ತು. ಇದರಲ್ಲಿನ ಕಲ್ಲಿದ್ದಲು ಕೇವಲ ಮೂರು ದಿನಗಳಿಗೆ ಮಾತ್ರ ಸಾಕಾಗುತ್ತದೆ. ಒಟ್ಟು 135 ವಿದ್ಯುತ್ ಸ್ಥಾವರಗಳ ಪೈಕಿ ಯಾವುದೇ ಒಂದು ಸ್ಥಾವರದಲ್ಲಿ 8 ಮತ್ತು ಅದಕ್ಕಿಂತ ಒಂದು ದಿನ ಹೆಚ್ಚಿಗೆ ಬಳಸಲು ಕಲ್ಲಿದ್ದಲು ಲಭ್ಯವಿಲ್ಲ ಎಂದು ವಿದ್ಯುತ್ ಇಲಾಖೆ ತಿಳಿಸಿದೆ.
ಭಾರತೀಯ ಕಲ್ಲಿದ್ದಲು ನಿಯಮಿತ (Coal India Limited) ದೇಶದ ಕಲ್ಲಿದ್ದಲಿನ ಶೇ 80ರಷ್ಟನ್ನು ಪೂರೈಸುತ್ತದೆ. ಕಳೆದ ಅಕ್ಟೋಬರ್ ತಿಂಗಳಿನಿಂದ ಇಲ್ಲಿಯವರೆಗೆ ದಾಸ್ತಾನು ಮಾಡಲಾಗಿದ್ದ ಕಲ್ಲಿದ್ದಲನ್ನೇ ಈಗ ಬಳಕೆ ಮಾಡಲಾಗುತ್ತಿತ್ತು.
ಕಲ್ಲಿದ್ದಲು ಕೊರತೆಗೆ ಕಾರಣವೇನು?