ಕರ್ನಾಟಕ

karnataka

ETV Bharat / bharat

ಅಕ್ಟೋಬರ್​ನಿಂದ ನೈಸರ್ಗಿಕ ಅನಿಲ ದರ ಶೇ.10 ರಿಂದ 11ರಷ್ಟು ಹೆಚ್ಚಳ ಸಾಧ್ಯತೆ - ಬ್ರಿಟಿಷ್ ಥರ್ಮಲ್ ಯೂನಿಟ್‌

ನೈಸರ್ಗಿಕ ಅನಿಲವು ಕಚ್ಚಾ ವಸ್ತುವಾಗಿದೆ. ಇದನ್ನು ಸಂಕುಚಿತ ನೈಸರ್ಗಿಕ ಅನಿಲವಾಗಿ (ಸಿಎನ್‌ಜಿ) ಆಟೋಮೊಬೈಲ್‌ಗಳಲ್ಲಿ ಇಂಧನವಾಗಿ ಬಳಸಲಾಗುತ್ತದೆ. ಎಪಿಎಂ ಗ್ಯಾಸ್ ಬೆಲೆಯಲ್ಲಿ ನಿರೀಕ್ಷಿತ ಏರಿಕೆಯು ಸಿಟಿ ಗ್ಯಾಸ್ ವಿತರಣೆ (ಸಿಜಿಡಿ) ಮಾಡುವವರಿಗೆ ಸವಾಲಾಗಿ ಪರಿಣಮಿಸುತ್ತದೆ..

ನೈಸರ್ಗಿಕ ಅನಿಲ
ನೈಸರ್ಗಿಕ ಅನಿಲ

By

Published : Sep 11, 2021, 2:27 PM IST

ನವದೆಹಲಿ :ದೆಹಲಿ ಮತ್ತು ಮುಂಬೈನಂತಹ ನಗರಗಳಲ್ಲಿ ಸಿಎನ್​ಜಿ ಮತ್ತು ಪೈಪ್​​ ಅಡುಗೆ ಅನಿಲದ ಬೆಲೆಯು ಅಕ್ಟೋಬರ್​ನಲ್ಲಿ ಶೇ.10 ರಿಂದ 11ರಷ್ಟು ಹೆಚ್ಚಾಗಬಹುದು ಎಂದು ಐಸಿಐಸಿಐ ಸೆಕ್ಯುರಿಟೀಸ್ ತಿಳಿಸಿದೆ. ಸರ್ಕಾರವು ಶೇ.76ರಷ್ಟು ಅನಿಲದ ಬೆಲೆ ಹೆಚ್ಚಿಸುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ದೇಶೀಯ ನೈಸರ್ಗಿಕ ಅನಿಲದ ಬೆಲೆಯನ್ನು ಪ್ರತಿ ಏಪ್ರಿಲ್ ಮತ್ತು ಅಕ್ಟೋಬರ್‌ನಲ್ಲಿ ಪರಿಷ್ಕರಿಸಲು ಸರ್ಕಾರ ಬಳಸುವ ಅಂತಾರಾಷ್ಟ್ರೀಯ ಬೆಲೆ-ಆಧಾರಿತ ಸೂತ್ರದ ಪರಿಣಾಮವಾಗಿ ಬೆಲೆ ಏರಿಕೆ ಆಗಲಿದೆ. ವರದಿಯ ಪ್ರಕಾರ, ನೈಸರ್ಗಿಕ ಅನಿಲದ ಬೆಲೆಯು ಈಗಿನ ಪ್ರತಿ ಮೆಟ್ರಿಕ್ ಮಿಲಿಯನ್ ಬ್ರಿಟಿಷ್ ಥರ್ಮಲ್ ಯೂನಿಟ್‌ (mmBtu)ಗೆ ಪ್ರತಿ 2 ಡಾಲರ್​ನಿಂದ 3.15 ಡಾಲರ್​ಗೆ ಹೆಚ್ಚಾಗುತ್ತದೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಕೆಜಿ-ಡಿ6 ಮತ್ತು ಬಿಪಿಪಿಎಲ್‌ಸಿಯಂತಹ ಡೀಪ್ ವಾಟರ್ ಕ್ಷೇತ್ರಗಳಿಂದ ಅನಿಲದ ದರವು ಮುಂದಿನ ತಿಂಗಳು ಪ್ರತಿ ಮಿಲಿಯನ್ ಬ್ರಿಟಿಷ್ ಥರ್ಮಲ್ ಯೂನಿಟ್‌ಗೆ 7.4 ಡಾಲರ್‌ಗೆ ಏರಿಕೆಯಾಗಲಿದೆ.

ನೈಸರ್ಗಿಕ ಅನಿಲವು ಕಚ್ಚಾ ವಸ್ತುವಾಗಿದೆ. ಇದನ್ನು ಸಂಕುಚಿತ ನೈಸರ್ಗಿಕ ಅನಿಲವಾಗಿ (ಸಿಎನ್‌ಜಿ) ಆಟೋಮೊಬೈಲ್‌ಗಳಲ್ಲಿ ಇಂಧನವಾಗಿ ಬಳಸಲಾಗುತ್ತದೆ. ಎಪಿಎಂ ಗ್ಯಾಸ್ ಬೆಲೆಯಲ್ಲಿ ನಿರೀಕ್ಷಿತ ಏರಿಕೆಯು ಸಿಟಿ ಗ್ಯಾಸ್ ವಿತರಣೆ (ಸಿಜಿಡಿ) ಮಾಡುವವರಿಗೆ ಸವಾಲಾಗಿ ಪರಿಣಮಿಸುತ್ತದೆ.

ಇದನ್ನೂ ಓದಿ: ಕೋವಿಡ್‌ ನಿರ್ಬಂಧ ಸಡಿಲಿಕೆ ಎಫೆಕ್ಟ್‌: ಜುಲೈನಲ್ಲಿ ಕೈಗಾರಿಕಾ ಉತ್ಪಾದನೆಯಲ್ಲಿ ಗಣನೀಯ ಪ್ರಗತಿ

APM ಗ್ಯಾಸ್ ಬೆಲೆ ಏರಿಕೆ ಎಂದರೆ ಮುಂದಿನ ಒಂದು ವರ್ಷದಲ್ಲಿ IGL (ರಾಷ್ಟ್ರೀಯ ರಾಜಧಾನಿ ಮತ್ತು ಪಕ್ಕದ ನಗರಗಳಲ್ಲಿ CNG ಚಿಲ್ಲರೆ ಮಾರಾಟ) ಮತ್ತು MGL (ಮುಂಬೈನಲ್ಲಿ CNG ಚಿಲ್ಲರೆ ಮಾರಾಟ) ಮೂಲಕ ಭಾರೀ ಬೆಲೆ ಏರಿಕೆ ಮಾಡಬೇಕಾಗುತ್ತದೆ.

ABOUT THE AUTHOR

...view details