ಕರ್ನಾಟಕ

karnataka

ETV Bharat / bharat

ಸಿಎನ್​​ಜಿ ದರದಲ್ಲಿ ಮತ್ತೆ 2 ರೂ ಹೆಚ್ಚಳ: 2 ತಿಂಗಳಲ್ಲಿ 19 ರೂ ಏರಿಕೆ! - ದೇಶದ ಜನರಿಗೆ ಸಿಎನ್​​ಜಿ ಬೆಲೆ ಏರಿಕೆ ಮಾಡಿ ಶಾಕ್

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ CNG ಈಗ ಪ್ರತಿ ಕೆಜಿಗೆ 2 ರೂ ಹೆಚ್ಚಿಸುವ ಮೂಲಕ 73.61 ರೂ ನಿಂದ 75.61 ರೂ.ಗೆ ಏರಿಕೆ ಮಾಡಲಾಗಿದೆ ಎಂದು ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (IGL) ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾಗಿದೆ.

CNG price hiked by Rs 2 per kg; rates up by Rs 19.60/kg in two months
ಸಿಎನ್​​ಜಿ ದರದಲ್ಲಿ ಮತ್ತೆ 2 ರೂ ಹೆಚ್ಚಳ: 2 ತಿಂಗಳಲ್ಲಿ 19 ರೂ ಏರಿಕೆ!

By

Published : May 21, 2022, 4:36 PM IST

ನವದೆಹಲಿ: ದೇಶದ ಜನರಿಗೆ ಸಿಎನ್​​ಜಿ ಬೆಲೆ ಏರಿಕೆ ಮಾಡಿ ಶಾಕ್​ ನೀಡಲಾಗಿದೆ. ಬೆಲೆ ಏರಿಕೆ ಬಿಸಿಯಿಂದ ಈಗಾಗಲೇ ಕಂಗಾಲಾಗಿರುವ ದೇಶದ ಜನರಿಗೆ ಸಿಎನ್​ಜಿ ದರ ಏರಿಕೆ ಮಾಡುವ ಮೂಲಕ ಬರೆ ಎಳೆಯಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಸಿಎನ್‌ಜಿ ಬೆಲೆಯನ್ನು ಕೆಜಿಗೆ 2 ರೂ.ಗಳಷ್ಟು ಹೆಚ್ಚಿಸಲಾಗಿದೆ. ಕೇವಲ ಎರಡು ತಿಂಗಳ ಅವಧಿಯಲ್ಲಿ ಇದು 13 ನೇ ಏರಿಕೆ ಇದಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ CNG ಈಗ ಪ್ರತಿ ಕೆಜಿಗೆ 2 ರೂ ಏರಿಕೆ ಮಾಡುವ ಮೂಲಕ 73.61 ರೂ ನಿಂದ 75.61 ರೂ.ಗೆ ಏರಿಕೆ ಮಾಡಲಾಗಿದೆ ಎಂದು ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (IGL) ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾಗಿದೆ.

ಮಾರ್ಚ್ 7ರಿಂದ ಇದು 13ನೇ ಬೆಲೆ ಏರಿಕೆಯಾಗಿದೆ. ಒಟ್ಟಾರೆ ಈ ಅವಧಿಯಲ್ಲಿ ಸಿಎನ್​​​ಜಿ ಬೆಲೆ ಪ್ರತಿ ಕೆಜಿಗೆ 19.60 ರೂ. ಏರಿಕೆ ಆದಂತಾಗಿದೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ಸಂಗ್ರಹಿಸಿದ ಅಂಕಿ - ಅಂಶಗಳಿಂದ ಗೊತ್ತಾಗಿದೆ. ಕಳೆದ ಒಂದು ವರ್ಷದಲ್ಲಿ ಶೇ 60 ರಷ್ಟು ಹೆಚ್ಚಿಸಲಾಗಿದೆ. ಕಳೆದ ವರ್ಷ ಕೆಜಿಗೆ 32.21 ಇದ್ದ ಬೆಲೆ ಈಗ 75.61 ರೂ.ಗೆ ತಲುಪಿದೆ. ಆದಾಗ್ಯೂ, ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಎಂದು ಕರೆಯಲ್ಪಡುವ ಈ ಅನಿಲದ ದರಗಳು ಪ್ರತಿ scm ಗೆ 45.86 ರೂ ಆಗಿದ್ದು, ಯಾವುದೇ ಬದಲಾವಣೆ ಆಗಿಲ್ಲ.

ಐಜಿಎಲ್ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಕುಮಾರ್ ಮಾತನಾಡಿ, ಅಂತಾರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ನೈಸರ್ಗಿಕ ಅನಿಲ ಬೆಲೆಗಳಲ್ಲಿ ಹೆಚ್ಚಳವಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಬೆಲೆಗಳು ಇನ್ನೂ ಹೆಚ್ಚುವ ಸಾಧ್ಯತೆಯಿದೆ. 2021 ರ ಕೊನೆಯ ಮೂರು ತಿಂಗಳುಗಳಲ್ಲಿ CNG ಬೆಲೆಗಳು ಪ್ರತಿ ಕೆಜಿಗೆ 8.74 ರೂ. ನಷ್ಟು ಏರಿಕೆ ಆಗಿದೆ. ಕಳೆದ ಜನವರಿಯಿಂದ ಪ್ರತಿ ವಾರ ಸುಮಾರು 50 ಪೈಸೆಯಷ್ಟು ಏರಿಕೆ ಕಂಡು ಬಂದಿದೆ.

ಇದನ್ನು ಓದಿ:ಐವರು ಜಿಎಸ್‌ಟಿ ಅಧಿಕಾರಿಗಳ ವಿರುದ್ಧ ದೂರು ದಾಖಲು

ABOUT THE AUTHOR

...view details