ನವದೆಹಲಿ:ಮಹಾರಾಷ್ಟ್ರದಲ್ಲಿ ಸಿಎನ್ಜಿ, ಪಿಎನ್ಜಿ ಗ್ಯಾಸ್ ದರ ಏರಿಕೆ ಮಾಡಲಾಗಿದೆ. ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್(ಸಿಎನ್ಜಿ) ಬೆಲೆಯನ್ನು 6 ಮತ್ತು ಪೈಪ್ಡ್ ನ್ಯಾಚುರಲ್ ಗ್ಯಾಸ್ಗೆ 4 ರೂಪಾಯಿ ಹೆಚ್ಚಳ ಮಾಡಿ ಅನಿಲ ವಿತರಕ ಮಹಾನಗರ ಗ್ಯಾಸ್ (MGL) ತಕ್ಷಣದಿಂದಲೇ ಜಾರಿಗೆ ಬರುವಂತೆ ಘೋಷಿಸಿದೆ.
ನೈಸರ್ಗಿಕ ಅನಿಲಗಳಾದ ಸಿಎನ್ಜಿ, ಪಿಎನ್ಜಿ ದರ ಏರಿಕೆ.. ಸಾರಿಗೆ ವೆಚ್ಚ ಇನ್ನಷ್ಟು ದುಬಾರಿ ಸಾಧ್ಯತೆ
ಸಿಎನ್ಜಿ, ಪಿಎನ್ಜಿ ದರವನ್ನು ಈ ವರ್ಷದಲ್ಲಿಯೇ ಆರನೇ ಬಾರಿಗೆ ಏರಿಕೆ ಮಾಡಲಾಗಿದೆ. ಇದೀಗ ಕ್ರಮವಾಗಿ 6 ಮತ್ತು 4 ರೂಪಾಯಿ ಹೆಚ್ಚಿಸಲಾಗಿದೆ.
ಸಿಎನ್ಜಿ, ಪಿಎನ್ಜಿ ದರ ಏರಿಕೆ
ಅಂತಾರಾಷ್ಟ್ರೀಯ ಮಟ್ಟದಲ್ಲಿ ನೈಸರ್ಗಿಕ ಅನಿಲ ದರ ಏರಿಕೆ ಹಿನ್ನೆಲೆಯಲ್ಲಿ ದೇಶೀಯವಾಗಿಯೂ ದರ ಪರಿಷ್ಕರಣೆ ಮಾಡಲಾಗಿದೆ. ಇದು ಈ ವರ್ಷದ ಏಪ್ರಿಲ್ ನಂತರ ಆರನೇ ಬಾರಿಗೆ ದರ ಹೆಚ್ಚಳ ಮಾಡಲಾಗಿದೆ. ಗ್ಯಾಸ್ ಆಮದು ದರದಲ್ಲಿ ಏರಿಕೆಯಾದ ಕಾರಣ ಸರಬರಾಜು ವೆಚ್ಚ ಸರಿದೂಗಿಸಲು ಪ್ರತಿ ಕೆಜಿ ಸಿಎನ್ಜಿ ಬೆಲೆ 86 ರೂ. ಸಿಎನ್ಜಿ 52.50 ರೂಪಾಯಿ ಪಾವತಿಸಬೇಕಾಗುತ್ತದೆ. ಇದರಿಂದ ಸಾರಿಗೆ ವೆಚ್ಚಗಳು ಕೂಡ ಹೆಚ್ಚಳವಾಗುವ ಸಾಧ್ಯತೆ ಇದ್ದು, ಜನ ಸಾಮಾನ್ಯರ ಮೇಲೆ ಮತ್ತಷ್ಟು ಹೊರೆ ಬೀಳಲಿದೆ.