ಕರ್ನಾಟಕ

karnataka

ETV Bharat / bharat

ದೀಪೋತ್ಸವ 2021: 'ರಾಮ ಲಲ್ಲಾ'ಗೆ ಪೂಜೆ ಸಲ್ಲಿಸಿದ ಸಿಎಂ ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗುರುವಾರ ಬೆಳಗ್ಗೆ ರಾಮ ಜನ್ಮಭೂಮಿ ಸಂಕೀರ್ಣಕ್ಕೆ ಆಗಮಿಸಿ 'ರಾಮ ಲಲ್ಲಾ'ಗೆ ಪೂಜೆ ಸಲ್ಲಿಸಿ ಆರತಿ ಬೆಳಗಿದರು.

ರಾಮ ಲಲ್ಲಾ'ಗೆ ಪೂಜೆ ಸಲ್ಲಿಸಿದ ಸಿಎಂ ಯೋಗಿ
ರಾಮ ಲಲ್ಲಾ'ಗೆ ಪೂಜೆ ಸಲ್ಲಿಸಿದ ಸಿಎಂ ಯೋಗಿ

By

Published : Nov 4, 2021, 11:52 AM IST

ಅಯೋಧ್ಯೆ(ಉತ್ತರ ಪ್ರದೇಶ): ದೀಪೋತ್ಸವ ಕಾರ್ಯಕ್ರಮದ ನಿಮಿತ್ತ ಅಯೋಧ್ಯೆಗೆ ಆಗಮಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬೆಳಗ್ಗೆ ರಾಮ ಜನ್ಮಭೂಮಿ ಸಂಕೀರ್ಣಕ್ಕೆ ಆಗಮಿಸಿ 'ರಾಮ ಲಲ್ಲಾ'ಗೆ ಪೂಜೆ ಸಲ್ಲಿಸಿ ಆರತಿ ಬೆಳಗಿದರು.

'ರಾಮ ಲಲ್ಲಾ'ಗೆ ಪೂಜೆ ಸಲ್ಲಿಸಿದ ಸಿಎಂ ಯೋಗಿ ಆದಿತ್ಯನಾಥ್

ವಿಶ್ವದಾಖಲೆ ಬರೆದ ದೀಪೋತ್ಸವ ಕಾರ್ಯಕ್ರಮ: ಬುಧವಾರ ಸಂಜೆ, ಸರಯೂ ತೀರದಲ್ಲಿ ಅದ್ಧೂರಿ ದೀಪೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಮನ ಪಾದದಲ್ಲಿ 9 ಲಕ್ಷ ಮಣ್ಣಿನ ದೀಪ ಹಾಗು ಅಯೋಧ್ಯೆಯ ಉಳಿದ ಭಾಗಗಳಲ್ಲಿ 3 ಲಕ್ಷ ದೀಪ ಸೇರಿ ಒಟ್ಟು 12 ಲಕ್ಷ ದೀಪಗಳನ್ನು ಬೆಳಗಿಸಲಾಯಿತು. ಈ ದೀಪೋತ್ಸವ ಕಾರ್ಯಕ್ರಮ 'ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್'ನಲ್ಲಿ ದಾಖಲಾಗಿದೆ.

'ರಾಮ ಲಲ್ಲಾ'ಗೆ ಪೂಜೆ ಸಲ್ಲಿಸಿದ ಸಿಎಂ ಯೋಗಿ

12 ಲಕ್ಷ ದೀಪಗಳನ್ನು ಬೆಳಗಿಸಲು 36 ಸಾವಿರ ಲೀಟರ್ ಎಣ್ಣೆ ಬಳಸಲಾಗಿದೆ. 32 ತಂಡಗಳು ಸೇರಿ 12 ಲಕ್ಷ ದೀಪಗಳನ್ನು ಬೆಳಗಿಸಿದರು. ಕಾರ್ಯಕ್ರಮದಲ್ಲಿ ಸುಮಾರು 12 ಸಾವಿರ ಜನ ಭಾಗಿಯಾಗಿದ್ದರು. ಈ ಬಾರಿ ದೀಪೋತ್ಸವದಲ್ಲಿ ಮೊದಲ ಬಾರಿಗೆ ಡ್ರೋನ್ ಶೋ ಕೂಡ ಆಯೋಜಿಸಲಾಗಿದೆ.

ವಿಶ್ವದ ಅತ್ಯುತ್ತಮ ಧಾರ್ಮಿಕ ನಗರವಾಗಲಿದೆ:

ದೀಪೋತ್ಸವದ ಸಂದರ್ಭದಲ್ಲಿ ಮಾತನಾಡಿದ ಸಿಎಂ ಯೋಗಿ, ನಾನು ಮೊದಲ ದೀಪೋತ್ಸವಕ್ಕೆ ಇಲ್ಲಿಗೆ ಬಂದಾಗ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲಾಗುವುದು ಎಂದು ಹೇಳಿದ್ದೆ. ನಗರದಲ್ಲಿ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣವಾದಾಗ ಅಯೋಧ್ಯೆಯು ದೇಶ ಮತ್ತು ವಿಶ್ವದ ಅತ್ಯುತ್ತಮ ಧಾರ್ಮಿಕ ಮತ್ತು ಆಧ್ಯಾತ್ಮಿಕ ನಗರವಾಗಲಿದೆ ಎಂದರು.

ಇದನ್ನೂ ಓದಿ:ಅಯೋಧ್ಯೆಯಲ್ಲಿಂದು 7.50 ಲಕ್ಷ ದೀಪೋತ್ಸವ ; ವಿಶ್ವ ದಾಖಲೆಗೆ ಸಕಲ ಸಿದ್ಧತೆ

ABOUT THE AUTHOR

...view details