ಕರ್ನಾಟಕ

karnataka

ಯೋಗಿ ಸರ್ಕಾರದಿಂದ ಇಂದು ಜನಸಂಖ್ಯಾ ನೀತಿ 2021-2030 ಬಿಡುಗಡೆ

By

Published : Jul 11, 2021, 9:59 AM IST

ಜನಸಂಖ್ಯೆ ಹೆಚ್ಚಾಗಲು ಬಡತನ ಮತ್ತು ಅನಕ್ಷರತೆ ಪ್ರಮುಖ ಅಂಶಗಳಾಗಿವೆ ಎಂದು ಈ ಹಿಂದೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದರು. ಇದೀಗ ಜನಸಂಖ್ಯೆ ನಿಯಂತ್ರಣಕ್ಕೆ ಜನಸಂಖ್ಯಾ ನೀತಿ 2021-2030 ಅನ್ನು ಬಿಡುಗಡೆ ಮಾಡಲಿದ್ದಾರೆ. ಸಿಎಂ ನಿವಾಸದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಜನಸಂಖ್ಯಾ ಸ್ಥಿರತೆ ಫೋರ್ಟ್‌ನೈಟ್ ಅನ್ನು ಉದ್ಘಾಟಿಸಲಿದ್ದಾರೆ.

uttar-pradesh
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

ಲಖನೌ: ವಿಶ್ವ ಜನಸಂಖ್ಯಾ ದಿನವಾದ ಇಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜ್ಯದ ಜನಸಂಖ್ಯಾ ನೀತಿ 2021-2030 ಅನ್ನು ಬಿಡುಗಡೆ ಮಾಡಲಿದ್ದಾರೆ. ಸಿಎಂ ನಿವಾಸದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಜನಸಂಖ್ಯಾ ಸ್ಥಿರತೆ ಫೋರ್ಟ್‌ನೈಟ್ ಅನ್ನು ಉದ್ಘಾಟಿಸಲಿದ್ದಾರೆ.

2021-2030ರ ಪ್ರಸ್ತಾವಿತ ನೀತಿಯ ಮೂಲಕ, ಕುಟುಂಬ ಯೋಜನೆ ಕಾರ್ಯಕ್ರಮದಡಿ ಹೊರಡಿಸಲಾದ ಗರ್ಭನಿರೋಧಕ ಕ್ರಮಗಳನ್ನು ಹೆಚ್ಚಿಸಲು ಮತ್ತು ಸುರಕ್ಷಿತ ಗರ್ಭಪಾತಕ್ಕೆ ಸರಿಯಾದ ವ್ಯವಸ್ಥೆಗಳನ್ನು ಒದಗಿಸಲು ಪ್ರಯತ್ನಿಸಲಾಗುವುದು. ಇದರ ಜೊತೆಗೆ ದುರ್ಬಲತೆ, ಬಂಜೆತನದ ಸಮಸ್ಯೆಗೆ ಪರಿಹಾರಗಳನ್ನು ಒದಗಿಸುವುದು, ನವಜಾತ ಶಿಶು ಮರಣ ಪ್ರಮಾಣ, ತಾಯಿಯ ಮರಣ ಪ್ರಮಾಣವನ್ನು ಕಡಿಮೆಗೊಳಿಸುವುದು, ಆರೋಗ್ಯ ಸೌಲಭ್ಯಗಳ ಮೂಲಕ ಜನಸಂಖ್ಯೆಯಲ್ಲಿ ಸ್ಥಿರತೆಯನ್ನು ತರಲು ಪ್ರಯತ್ನಿಸಲಾಗುವುದು. 11 ರಿಂದ 19 ವರ್ಷದೊಳಗಿನ ಹದಿಹರೆಯದವರ ಪೋಷಣೆ, ಶಿಕ್ಷಣ ಮತ್ತು ಆರೋಗ್ಯವನ್ನು ಉತ್ತಮವಾಗಿ ನಿರ್ವಹಿಸುವುದರ ಹೊರತಾಗಿ ವೃದ್ಧರ ಆರೈಕೆಗಾಗಿ ಸಮಗ್ರ ವ್ಯವಸ್ಥೆಗಳನ್ನು ಮಾಡುವುದು ಈ ನೀತಿಯ ಉದ್ದೇಶವಾಗಿದೆ.

ಜನಸಂಖ್ಯೆ ಹೆಚ್ಚಾಗಲು ಬಡತನ ಮತ್ತು ಅನಕ್ಷರತೆ ಪ್ರಮುಖ ಅಂಶಗಳಾಗಿವೆ ಎಂದು ಈ ಹಿಂದೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದರು. ಸಮುದಾಯದಲ್ಲಿ ಜನಸಂಖ್ಯೆಯ ಬಗ್ಗೆ ಅರಿವಿನ ಕೊರತೆಯಿದೆ. ಅಂತಹ ಪರಿಸ್ಥಿತಿಯಲ್ಲಿ, ಕೇಂದ್ರೀಕೃತ ಜಾಗೃತಿ ಪ್ರಯತ್ನದ ಅವಶ್ಯಕತೆಯಿದೆ. ಈಗ ಹೊಸ ನೀತಿಯ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ.

ಇದರ ಜೊತೆಗೆ ಶಾಲೆಗಳಲ್ಲಿ ಆರೋಗ್ಯ ಕ್ಲಬ್‌ಗಳನ್ನು ಸ್ಥಾಪಿಸಲು ಸಿಎಂ ಸೂಚನೆ ನೀಡಿದ್ದಾರೆ. ಡಿಜಿಟಲ್ ಹೆಲ್ತ್ ಮಿಷನ್‌ನ ಪ್ರಕಾರ, ನವಜಾತ ಶಿಶುಗಳು, ಹದಿಹರೆಯದವರು ಮತ್ತು ವೃದ್ಧರ ಡಿಜಿಟಲ್ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಸಹ ತಿಳಿಸಲಾಗಿದೆ. ಹೊಸ ನೀತಿಯನ್ನು ಸಿದ್ಧಪಡಿಸುವಾಗ, ಎಲ್ಲಾ ಸಮುದಾಯಗಳಲ್ಲಿ ಜನಸಂಖ್ಯಾ ಸಮತೋಲನವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಬೇಕು. ಸುಧಾರಿತ ಆರೋಗ್ಯ ಸೌಲಭ್ಯಗಳ ಸುಲಭ ಲಭ್ಯತೆ, ಸರಿಯಾದ ಪೋಷಣೆಯ ಮೂಲಕ ತಾಯಿಯ ಮತ್ತು ಮಕ್ಕಳ ಮರಣ ಪ್ರಮಾಣವನ್ನು ಕನಿಷ್ಠ ಮಟ್ಟಕ್ಕೆ ತರಬೇಕು ಎಂದು ಹೇಳಲಾಗಿದೆ.

ಹೊಸ ಜನಸಂಖ್ಯಾ ನೀತಿಯನ್ನು ಬಿಡುಗಡೆ ಮಾಡುವುದರ ಜೊತೆಗೆ 11 ಜಿಲ್ಲೆಗಳಲ್ಲಿ 11 ಬಿಎಸ್‌ಎಲ್ -2 ಆರ್‌ಟಿಪಿಸಿಆರ್ ಲ್ಯಾಬ್‌ಗಳನ್ನು ಉದ್ಘಾಟಿಸಲಿದ್ದಾರೆ. ಆ ಜಿಲ್ಲೆಗಳೆಂದರೆ ಅಮೇಥಿ, ಅಮೇಠಿ, ಔರೇಯಾ, ಬುಲಂದ್‌ಶಹರ್, ಬಿಜ್ನೋರ್, ಮೌ, ಮಹೋಬಾ, ಕಾಸ್‌ಗಂಜ್, ಡಿಯೋರಿಯಾ, ಕುಶಿನಗರ, ಸೋನ್‌ಭದ್ರ ಮತ್ತು ಸಿದ್ಧಾರ್ಥನಗರ. ಇಲಾಖೆಯು ಪ್ರಸ್ತುತ ಒಟ್ಟು 22 ಆರ್‌ಟಿಪಿಸಿಆರ್ ಲ್ಯಾಬ್‌ಗಳನ್ನು ಹೊಂದಿದೆ. ಈಗ ರಾಜ್ಯದಲ್ಲಿ ಬಿಎಸ್ಎಲ್ -2 ಮಟ್ಟದ ಆರ್‌ಟಿಪಿಸಿಆರ್ ಲ್ಯಾಬ್‌ಗಳ ಸಂಖ್ಯೆ 44 ಆಗಿದೆ.

ಸಿಎಂ ಯೋಗಿ ಸಿಎಚ್‌ಸಿ, ಪಿಎಚ್‌ಸಿ ಆ್ಯಪ್ ಅನ್ನು ಸಹ ಬಿಡುಗಡೆ ಮಾಡಲಿದ್ದಾರೆ. ಈ ಸಮಯದಲ್ಲಿ, ಹೊಸದಾಗಿ ಮದುವೆಯಾದ ದಂಪತಿಯಲ್ಲಿ ಕುಟುಂಬ ಯೋಜನೆ ಸಾಧನಗಳನ್ನು ಉತ್ತೇಜಿಸಲು 'ಶಗುನ್ ಕಿಟ್' ನೀಡಲಾಗುವುದು. ಈ ಕಾರ್ಯಕ್ರಮದಲ್ಲಿ ವೈದ್ಯಕೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೈ ಪ್ರತಾಪ್ ಸಿಂಗ್, ವೈದ್ಯಕೀಯ ಶಿಕ್ಷಣ ಸಚಿವ ಸುರೇಶ್ ಖನ್ನಾ ಭಾಗವಹಿಸಲಿದ್ದಾರೆ.

ABOUT THE AUTHOR

...view details