ಅಯೋಧ್ಯೆ: ರಾಮನಗರಿ ಅಯೋಧ್ಯೆಯಲ್ಲಿ ರಾಮನ ಮಂದಿರಕ್ಕಿಂತ ಮೊದಲು ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಅವರ ಬೆಂಬಲಿಗನೋರ್ವ ಭಗವಾನ್ ಶ್ರೀರಾಮನ ಮುಂದೆಯೇ ಮಂದಿರವನ್ನು ನಿರ್ಮಿಸಿದ್ದಾರೆ. ಸಿಎಂ ಯೋಗಿ ಮಂದಿರ ಇದೀಗ ಪೂರ್ಣಗೊಂಡು, ಬೆಂಬಲಿಗ ಪ್ರತಿದಿನ ಪೂಜೆ ಮಾಡುತ್ತಿದ್ದಾರೆ.
ತಮ್ಮನ್ನು ಸಿಎಂ ಯೋಗಿ ಪ್ರಚಾರಕ ಎಂದು ಬಣ್ಣಿಸಿಕೊಂಡ ಪ್ರಭಾಕರ್ ಮೌರ್ಯನ್ ಎಂಬ ವ್ಯಕ್ತಿ ಅವರಿಗಾಗಿ ಹಾಡುಗಳನ್ನು ಬರೆದು ಹಾಡುತ್ತಾರೆ. ಅಯೋಧ್ಯೆಯಲ್ಲಿ ರಾಮನ ಮಂದಿರ ನಿರ್ಮಾಣ ಪೂರ್ಣಗೊಳ್ಳುವ ಮುನ್ನವೇ ಯೋಗಿ ಮಂದಿರ ನಿರ್ಮಾಣವಾಗಿದೆ. ಈ ದೇವಾಲಯವು ಜಿಲ್ಲೆಯ ಮಸೌಧ ಬ್ಲಾಕ್‌ನಲ್ಲಿದೆ.