ಲಖನೌ(ಉತ್ತರಪ್ರದೇಶ): ಸಿಎಂ ಯೋಗಿ ಆದಿತ್ಯನಾಥ್ ಸೂಚನೆ ಮೇರೆಗೆ ರಾಜ್ಯದ 30 ಜೈಲುಗಳಲ್ಲಿ ಸಿಸಿಟಿವಿಗಳ ಸಂಖ್ಯೆ ಹೆಚ್ಚಿಸುವ ಹಾಗೂ ಈಗಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯ ಈಗಾಗಲೇ ಆರಂಭವಾಗಿದೆ. ಇದಾದ ಬಳಿಕ ರಾಜ್ಯದ ಜೈಲುಗಳಲ್ಲಿ ಬಂಧಿಯಾಗಿರುವ ಟಾಪ್ 10 ಕ್ರಿಮಿನಲ್‌ಗಳ ಕುರಿತು ಕೇಂದ್ರ ಕಚೇರಿಯಿಂದಲೇ 24 ಗಂಟೆಗಳ ಕಾಲ ನಿಗಾ ಕಾರ್ಯವೂ ಆರಂಭವಾಗಲಿದೆ.
ಯುಪಿಯ ಜೈಲುಗಳಲ್ಲಿ ಬಂಧಿತರಾಗಿರುವ ಭಯಾನಕ ಕ್ರಿಮಿನಲ್‌ಗಳು, ಮಾಫಿಯಾ ಮತ್ತು ಅವರ ಹಿಂಬಾಲಕರ ಮೇಲೆ ಯೋಗಿ ಆದಿತ್ಯನಾಥ ಸರ್ಕಾರ ತನ್ನ ಕುಣಿಕೆಯನ್ನು ಬಿಗಿಗೊಳಿಸಲು ಭರ್ಜರಿ ಯೋಜನೆ ರೂಪಿಸಿದೆ. ರಾಜ್ಯದ ಎಲ್ಲ ಜೈಲುಗಳಲ್ಲಿ ಬಂಧಿಯಾಗಿರುವ ಟಾಪ್ 10 ಕ್ರಿಮಿನಲ್‌ಗಳ ಪಟ್ಟಿಯನ್ನು ಕೇಂದ್ರ ಕಚೇರಿ ಮಟ್ಟದಲ್ಲಿ ರಚನೆ ಮಾಡಲು ನಿರ್ಧರಿಸಲಾಗಿದೆ. ಮತ್ತೊಂದೆಡೆ, ಯಾರಾದರೂ ಜೈಲು ಸಿಬ್ಬಂದಿಗೆ ಬೆದರಿಕೆ ಹಾಕಿದರೆ, ತಕ್ಷಣ ಆ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಯೋಗಿ ಖಡಕ್ ಸೂಚನೆ ನೀಡಿದ್ದಾರೆ.
ಉತ್ತರ ಪ್ರದೇಶದ ಜೈಲುಗಳಲ್ಲಿ ಬಂಧಿಯಾಗಿರುವ ಮಾಫಿಯಾ ಮತ್ತು ಅವರ ಹಿಂಬಾಲಕರ ಮೇಲೆ ಸರ್ಕಾರ ಈಗ ತೀವ್ರ ನಿಗಾ ಇಡಲು ಮುಂದಾಗಿದೆ. ಸಿಎಂ ಯೋಗಿ ಆದಿತ್ಯನಾಥ್ ಸೂಚನೆ ಮೇರೆಗೆ ರಾಜ್ಯದ 30 ಜೈಲುಗಳಲ್ಲಿ ಸಿಸಿಟಿವಿಗಳ ಸಂಖ್ಯೆ ಹೆಚ್ಚಿಸುವ ಹಾಗೂ ಈಗಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯ ಈಗಾಗಲೇ ಆರಂಭವಾಗಿದೆ. ಇದಾದ ಬಳಿಕ ರಾಜ್ಯದ ಜೈಲುಗಳಲ್ಲಿ ಬಂಧಿಯಾಗಿರುವ ಟಾಪ್ 10 ಕ್ರಿಮಿನಲ್‌ಗಳ ಕುರಿತು ಕೇಂದ್ರ ಕಚೇರಿಯಿಂದಲೇ 24 ಗಂಟೆಗಳ ಕಾಲ ನಿಗಾ ಕಾರ್ಯ ಆರಂಭವಾಗಲಿದೆ.