ಕರ್ನಾಟಕ

karnataka

ETV Bharat / bharat

ಮತ್ತೆ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ: ಯೋಗಿ ಆದಿತ್ಯನಾಥ್​ ವಿಶ್ವಾಸ

ಕಳೆದ ಐದು ವರ್ಷಗಳಲ್ಲಿ ಪ್ರತಿಯೊಂದು ಭರವಸೆಯನ್ನೂ ನಾವು ಈಡೇರಿಸಿದ್ದೇವೆ. ಈ ಬಾರಿಯೂ ಅಷ್ಟೇ ನಾವು ಮಾತಿನಲ್ಲಿ ಹೇಳುವುದಿಲ್ಲ. ಅಭಿವೃದ್ಧಿಯನ್ನು ಮಾಡಿ ತೋರಿಸುತ್ತೇವೆ. ಕುಟುಂಬ ರಾಜಕಾರಣ ಮತ್ತು ಜಾತಿ ರಾಜಕಾರಣವನ್ನು 2014ರಲ್ಲೇ ಜನತೆ ತಿರಸ್ಕಾರ ಮಾಡಿದ್ದಾರೆ ಎಂದು ಯೋಗಿ ಹೇಳಿದ್ದಾರೆ.

ಯೋಗಿ ಆದಿತ್ಯನಾಥ್​
ಯೋಗಿ ಆದಿತ್ಯನಾಥ್​

By

Published : Mar 7, 2022, 10:16 AM IST

ಗೋರಖ್​ಪುರ (ಉತ್ತರಪ್ರದೇಶ): ಉತ್ತರ ಪ್ರದೇಶದ ಚುನಾವಣೆ ಅಂತಿಮ ಹಂತಕ್ಕೆ ಬಂದಿರುವ ಹೊತ್ತಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. ಮೊಹಮ್ಮದ್​ ಅಲಿ ಜಿನ್ನಾ ಮತ್ತು ಪಾಕಿಸ್ತಾನವನ್ನು ಪ್ರತಿಪಕ್ಷಗಳು ಹೊಗಳುವ ಕೆಲಸವನ್ನು ಮಾತ್ರವೇ ಮಾಡಿವೆ ಎಂದು ಯೋಗಿ ಕಟುಟೀಕೆ ಮಾಡಿದ್ದಾರೆ.

ಪಂಚ ರಾಜ್ಯಗಳ ಚುನಾವಣೆ ಪೈಕಿ ಉತ್ತರ ಪ್ರದೇಶವೇ ಅತಿ ಹೆಚ್ಚು ಗಮನ ಸೆಳೆಯುವುದರೊಂದಿಗೆ ಮಹತ್ವವನ್ನೂ ಪಡೆದಿದೆ. ಏಳನೇ ಮತ್ತು ಅಂತಿಮ ಹಂತದ ಮತದಾನ ನಡೆಯುತ್ತಿರುವ ಸಮಯದಲ್ಲೇ ಯೋಗಿ ಪ್ರತಿಪಕ್ಷಗಳ ಮೇಲೆ ಮುಗಿಬಿದ್ದಿದ್ದಾರೆ. ಮೃತ ಉಗ್ರರಿಗೆ ಸಂತಾಪ ಸೂಚಿಸುವುದು ಮಾತ್ರವೇ ಪ್ರತಿಪಕ್ಷಗಳ ಕೆಲಸ ಎಂದು ಆರೋಪಿಸಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಉತ್ತರ ಪ್ರದೇಶ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದೆ. ಡಬಲ್​ ಇಂಜಿನ್​ ಸರ್ಕಾರವು ಉಗ್ರರ ಮಟ್ಟಹಾಕಿದೆ. ಮಾಫಿಯಾ ಮತ್ತು ಕ್ರಿಮಿನಲ್​ಗಳಿಗೆ ಕಡಿವಾಣ ಹಾಕಿದೆ. ಈ ಮೂಲಕ ರಾಜ್ಯದ ಭದ್ರತೆ ಮತ್ತು ಅಭಿವೃದ್ಧಿಗಾಗಿ ಕೆಲಸ ಮಾಡಿದೆ ಎಂದು ಯೋಗಿ ಹೇಳಿದ್ದಾರೆ.

ಇದನ್ನೂ ಓದಿ:ವಾರಣಾಸಿಯಲ್ಲಿ ಮೋದಿ ಪ್ರಚಾರ: ಎಲ್ಲಾ ಕ್ಷೇತ್ರಗಳಲ್ಲೂ ಕಮಲ ಅರಳುವ ವಿಶ್ವಾಸ

ರಾಜ್ಯದ ಜನತೆಯ ಮನಸ್ಥಿತಿ ಗಮನಿಸಿದರೆ ಈ ಬಾರಿಯ ಚುನಾವಣೆಯಲ್ಲೂ ಬಿಜೆಪಿ ಬಹುಮತದೊಂದಿಗೆ ಸರ್ಕಾರವನ್ನು ರಚಿಸಲಿದೆ. ಅಭಿವೃದ್ಧಿ, ಉತ್ತಮ ಆಳಿಡತ, ರಾಷ್ಟ್ರೀಯತೆಯೇ ಬಿಜೆಪಿ ಪ್ರಮುಖ ಅಜೆಂಡಾ ಆಗಿದೆ. ಕಳೆದ ಐದು ವರ್ಷಗಳಲ್ಲಿ ಪ್ರತಿಯೊಂದು ಭರವಸೆಯನ್ನೂ ನಾವು ಈಡೇರಿಸಿದ್ದೇವೆ. ಈ ಬಾರಿಯೂ ಅಷ್ಟೇ ನಾವು ಮಾತಿನಲ್ಲಿ ಹೇಳುವುದಿಲ್ಲ. ಅಭಿವೃದ್ಧಿಯನ್ನು ಮಾಡಿ ತೋರಿಸುತ್ತೇವೆ. ಕುಟುಂಬ ರಾಜಕಾರಣ ಮತ್ತು ಜಾತಿ ರಾಜಕಾರಣವನ್ನು 2014ರಲ್ಲೇ ಜನತೆ ತಿರಸ್ಕಾರ ಮಾಡಿದ್ದಾರೆ ಎಂದಿದ್ದಾರೆ.

ABOUT THE AUTHOR

...view details