ಕರ್ನಾಟಕ

karnataka

ETV Bharat / bharat

ರಾವಣ, ಕಂಸನಿಂದ ಸನಾತನ ಧರ್ಮ ಅಳಿಸಲು ಸಾಧ್ಯವಾಗಿಲ್ಲ, ಅಧಿಕಾರ ದಾಹದ ಪರಾವಲಂಬಿಗಳಿಂದಲೂ ಧಕ್ಕೆಯಾಗದು: ಸಿಎಂ ಯೋಗಿ - ಯೋಗಿ ಆದಿತ್ಯನಾಥ್

CM Yogi Adityanath on Sanatan Dharma: ಸನಾತನ ಧರ್ಮದ ವಿಚಾರವಾಗಿ ವಿರೋಧ ಪಕ್ಷಗಳನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

CM Yogi Adityanath
ರಾವಣ, ಕಂಸನಿಂದ ಸನಾತನ ಧರ್ಮ ಅಳಿಸಿ ಹಾಕಲು ಸಾಧ್ಯವಾಗಲಿಲ್ಲ, ಅಧಿಕಾರ ದಾಹದ ಪರಾವಲಂಬಿಗಳಿಂದಲೂ ಧಕ್ಕೆಯಾಗೋದಿಲ್ಲ: ಸಿಎಂ ಯೋಗಿ ಗರಂ

By ETV Bharat Karnataka Team

Published : Sep 8, 2023, 1:31 PM IST

ಲಕ್ನೋ (ಉತ್ತರ ಪ್ರದೇಶ):''ಸನಾತನ ಧರ್ಮದ ಮೇಲೆ ಈ ಹಿಂದೆ ನಡೆದ ಹಲವಾರು ದಾಳಿಗಳು ಯಾವುದೇ ಹಾನಿ ಮಾಡುವಲ್ಲಿ ವಿಫಲವಾಗಿವೆ. ಇಂದು ಯಾವುದೇ ಅಧಿಕಾರ ದಾಹದ 'ಪರಾವಲಂಬಿ ಜೀವಿಗಳಿಂದ' ಸನಾತನ ಧರ್ಮಕ್ಕೆ ಹಾನಿಯಾಗುವುದಿಲ್ಲ'' ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ವಿರುದ್ಧ ಹೇಳಿಕೆ ನೀಡಿದ ಬೆನ್ನಲ್ಲೇ ಯೋಗಿ ಅವರು ಗುರುವಾರ ವಾಗ್ದಾಳಿ ನಡೆಸಿದರು.

ಸನಾತನ ಧರ್ಮ ಅಳಿಸಲಾಗದು- ಯೋಗಿ:"ರಾವಣನ ದುರಹಂಕಾರದಿಂದ ಸನಾತನ ಧರ್ಮವನ್ನು ಅಳಿಸಲು ಆಗಿಲ್ಲ. ಕಂಸನ ಘರ್ಜನೆಯಿಂದಲೂ ಸನಾತನ ಧರ್ಮ ಅಲುಗಾಡಲಿಲ್ಲ. ಬಾಬರ್ ಮತ್ತು ಔರಂಗಜೇಬನ ದುಷ್ಕೃತ್ಯಗಳನ್ನು ನಾಶವಾಗದ ಸನಾತನ ಧರ್ಮವನ್ನು, ಈ ಕ್ಷುಲ್ಲಕ ಅಧಿಕಾರದಾಹಿ ಪರಾವಲಂಬಿ ಜೀವಿಗಳಿಂದ ಸನಾತನ ಧರ್ಮವು ಅಳಿಸಿಹೋಗುತ್ತದೆಯೇ" ಎಂದು ಗರಂ ಆದರು. ಸಾಮಾಜಿಕ ಜಾಲತಾಣವಾದ ಎಕ್ಸ್​ನಲ್ಲಿ ಸಿಎಂ ಯೋಗಿ ತಮ್ಮ ಹೇಳಿಕೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಸ್ಟಾಲಿನ್ ವಿರುದ್ಧ ಪರೋಕ್ಷ ವಾಗ್ದಾಳಿ: ''ಸನಾತನ ಧರ್ಮವು ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಹೇಳಿದ್ದ ಸ್ಟಾಲಿನ್, ಅದನ್ನು ಕೊರೊನಾ ವೈರಸ್ ಮತ್ತು ಮಲೇರಿಯಾಕ್ಕೆ ಹೋಲಿಕ್ಕೆ ಮಾಡಿದ್ದಾರೆ. ಅಂತಹ ವಿಷಯಗಳನ್ನು ವಿರೋಧಿಸಬಾರದು. ಆದರೆ, ನಾಶಪಡಿಸಬೇಕು'' ಎಂದು ಅವರು ಹೇಳಿದ್ದರು. ಯಾವುದೇ ಹೆಸರನ್ನು ತೆಗೆದುಕೊಳ್ಳದ ಆದಿತ್ಯನಾಥ್ ಅವರು, ''ಸನಾತನ ಧರ್ಮದತ್ತ ಬೆರಳು ತೋರಿಸುವುದು ಮಾನವೀಯತೆಯನ್ನು ತೊಂದರೆಗೆ ಸಿಲುಕಿಸುವ ದುರುದ್ದೇಶಪೂರಿತ ಪ್ರಯತ್ನಕ್ಕೆ ಸಮಾನವಾಗಿದೆ'' ಎಂದು ಸ್ಟಾಲಿನ್ ವಿರುದ್ಧ ಪರೋಕ್ಷವಾಗಿ ವಾಕ್ಸಮರ ನಡೆಸಿದರು.

ಸನಾತನ ಧರ್ಮವು ಸೂರ್ಯನಂತೆ ಶಕ್ತಿಯ ಮೂಲವಾಗಿದೆ ಎಂದು ಯೋಗಿ ಬಣ್ಣಿಸಿದರು. "ಮೂರ್ಖನು ಮಾತ್ರ ಸೂರ್ಯನ ಮೇಲೆ ಉಗುಳುವಂತಹ ಯೋಚನೆ ಮಾಡಬಹುದು. ಏಕೆಂದರೆ, ಅದು ಸಹಜವಾಗಿಯೇ ಉಗುಳುವ ವ್ಯಕ್ತಿಯ ಮುಖಕ್ಕೆ ಹಿಂತಿರುಗುತ್ತದೆ'' ಎಂದು ವಿರೋಧ ಪಕ್ಷಗಳ ವಿರುದ್ಧ ಕಿಡಿಕಾರಿದ ಸಿಎಂ ಯೋಗಿ, ''ಅವರ ದುಷ್ಕೃತ್ಯಗಳಿಂದ ಮುಂದಿನ ಪೀಳಿಗೆ ಸಂಪೂರ್ಣ ಅವಮಾನದಿಂದ ಬದುಕಬೇಕಾಗುತ್ತದೆ. ನಾವೆಲ್ಲರೂ ಭಾರತದ ಸಂಪ್ರದಾಯದ ಬಗ್ಗೆ ಹೆಮ್ಮೆ ಪಡಬೇಕು ಎಂದು ಅವರು ಒತ್ತಿ ಹೇಳಿದರು.

''ದೇವರನ್ನು ನಾಶ ಮಾಡಲು ಯತ್ನಿಸಿದವರೆಲ್ಲ ತಾವೇ ನಾಶವಾದರು, 500 ವರ್ಷಗಳ ಹಿಂದೆ ಸನಾತನ ಸಂಸ್ಥೆಗೆ ಅವಮಾನ ಮಾಡಲಾಗಿತ್ತು. ಇಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ. ಪ್ರತಿಪಕ್ಷಗಳು ಕ್ಷುಲ್ಲಕ ರಾಜಕಾರಣ ಮಾಡಲು ಯತ್ನಿಸುತ್ತಿವ. ಭಾರತದ ಪ್ರಗತಿಗೆ ಅಡ್ಡಿಪಡಿಸಲು ಯತ್ನಿಸುತ್ತಿವೆ. ಈ ಕಾರ್ಯ ಯಾವತ್ತೂ ಫಲಿಸುವುದಿಲ್ಲ'' ಎಂದು ಯೋಗಿ ಗುಡುಗಿದರು.

ಸನಾತನ ಧರ್ಮಕ್ಕೆ ಧಕ್ಕೆ ತರಲು ಸಾಧ್ಯವಿಲ್ಲ- ಯೋಗಿ:''ಪ್ರತಿಯೊಂದು ಯುಗದಲ್ಲೂ ಸತ್ಯವನ್ನು ಸುಳ್ಳಾಗಿಸುವ ಪ್ರಯತ್ನಗಳು ನಡೆದಿವೆ. ರಾವಣ ಸುಳ್ಳು ಹೇಳಲು ಪ್ರಯತ್ನಿಸಲಿಲ್ಲವೇ? ಅದಕ್ಕೂ ಮೊದಲು, ಹಿರಣ್ಯಕಶ್ಯಪನು ದೇವರನ್ನು ಮತ್ತು ಸನಾತನ ಧರ್ಮವನ್ನು ಅವಮಾನಿಸಲು ಪ್ರಯತ್ನಿಸಲಿಲ್ಲವೇ? ಕಂಸನು ದೈವಿಕ ಅಧಿಕಾರಕ್ಕೆ ಸವಾಲು ಹಾಕಲಿಲ್ಲವೇ? ಅವರ ದುರುದ್ದೇಶಪೂರಿತ ಯತ್ನದಲ್ಲಿ ಎಲ್ಲವೂ ನಾಶವಾಗಿದೆ. ಸನಾತನ ಧರ್ಮವು ಶಾಶ್ವತ ಸತ್ಯ ಎಂಬುದನ್ನು ಮರೆಯಬಾರದು. ಅದಕ್ಕೆ ಧಕ್ಕೆ ತರಲು ಸಾಧ್ಯವಿಲ್ಲ ಎಂದು ಸಿಎಂ ಯೋಗಿ ಹೇಳಿದರು. ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಜನರಿಗೆ ಶುಭ ಹಾರೈಸಿದ ಅವರು, ಧರ್ಮ, ಸತ್ಯ ಮತ್ತು ನ್ಯಾಯವನ್ನು ಸ್ಥಾಪಿಸಲು ಶ್ರೀಕೃಷ್ಣನು ಭಗವಾನ್ ವಿಷ್ಣುವಿನ ಅವತಾರವಾಗಿ ಜನಿಸಿದನು ಎಂದರು. (ಪಿಟಿಐ)

ಇದನ್ನೂ ಓದಿ:ಸನಾತನ ಧರ್ಮದ ವಿಚಾರವಾಗಿ ನಾನು ಮಾತನಾಡಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್​

ABOUT THE AUTHOR

...view details