ಮುಂಬೈ (ಮಹಾರಾಷ್ಟ್ರ):ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಾಳೆ ಚಾಲಕರಹಿತ ಮೆಟ್ರೋ ರೈಲು ಅನಾವರಣಗೊಳಿಸಲಿದ್ದಾರೆ ಎಂದು ಮುಂಬೈ ಮೆಟ್ರೋ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರ (ಎಂಎಂಆರ್‌ಡಿಎ) ತಿಳಿಸಿದೆ.
ನಾಳೆ ಮುಂಬೈಯಲ್ಲಿ ಚಾಲಕರಹಿತ ಮೆಟ್ರೋ ರೈಲಿಗೆ ಚಾಲನೆ - ಚಾಲಕರಹಿತ ಮೆಟ್ರೋ
ಸಂಪೂರ್ಣ ದೇಶೀಯವಾಗಿ ನಿರ್ಮಿಸಲಾದ ಮತ್ತು ಚಾಲಕರಹಿತ ಮೆಟ್ರೋ ರೈಲನ್ನು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅನಾವರಣಗೊಳಿಸಲಿದ್ದಾರೆ.
mmrda
ಸಂಪೂರ್ಣ ಸ್ಥಳೀಯವಾಗಿ ನಿರ್ಮಿಸಲಾದ ಮತ್ತು ಚಾಲಕರಹಿತ ಮೆಟ್ರೋ ರೈಲು ಜನವರಿ 23ರಂದು ಬೆಂಗಳೂರಿನಿಂದ ಹೊರಟು, ನಿನ್ನೆ ಮಧ್ಯರಾತ್ರಿ 1 ಗಂಟೆಗೆ ಮುಂಬೈ ತಲುಪಿದೆ.
ನಾಳೆ ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಉಪಮುಖ್ಯಮಂತ್ರಿ ಅಜಿತ್ ಪವಾರ್, ಕಂದಾಯ ಸಚಿವ ಬಾಲಾಸಾಹೇಬ್ ಥೋರಟ್, ನಗರಾಭಿವೃದ್ಧಿ ಸಚಿವ ಏಕನಾಥ ಶಿಂಧೆ, ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಸೇರಿದಂತೆ ಹಲವರು ಉಪಸ್ಥಿತರಿರಲಿದ್ದಾರೆ.