ಮುಂಬೈ:ಸಂಜೆ ಐದು ಗಂಟೆಯಿಂದಲೇ ಸುಪ್ರೀಂಕೋರ್ಟ್ನಲ್ಲಿ ವಿಶ್ವಾಸಮತ ಯಾಚನೆ ಮಾಡುವಂತೆ ರಾಜ್ಯಪಾಲರು ನೀಡಿದ್ದ ಸೂಚನೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯಿತು. ಸತತ ನಾಲ್ಕುಗಂಟೆಗಳ ಕಾಲ ನಡೆದ ವಾದ- ಪ್ರತಿವಾದದ ಬಳಿಕ ಸುಪ್ರೀಂಕೋರ್ಟ್ ರಾತ್ರಿ 9.15 ರ ಸುಮಾರಿಗೆ ತನ್ನ ತೀರ್ಪು ನೀಡಿತು.
ರಾಜ್ಯಪಾಲರ ಆದೇಶ ಎತ್ತಿಹಿಡಿದ ಸುಪ್ರೀಂಕೋರ್ಟ್, ಶಿವಸೇನಾ ಉದ್ದವ್ ಬಣ ಸಲ್ಲಿಸಿದ ಅರ್ಜಿಯನ್ನ ವಜಾ ಮಾಡಿ, ಇಂದು 11 ಗಂಟೆಗೆ ನಿಗದಿಯಂತೆ ಸಿಎಂ ಉದ್ದವ್ ಠಾಕ್ರೆ ವಿಶ್ವಾಸಮತ ಯಾಚಿಸುವಂತೆ ಸೂಚಿಸಿತು. ಈ ತೀರ್ಪು ಹೊರ ಬೀಳುತ್ತಿದ್ದಂತೆ ಸಿಎಂ ಉದ್ದವ್ ಠಾಕ್ರೆ ರಾತ್ರಿ 9:30ಕ್ಕೆ ಫೇಸ್ಬುಕ್ ಲೈವ್ಗೆ ಬಂದರು. ಸರ್ಕಾರ ರಚನೆ ಉದ್ದೇಶ, ಅನುಭವಿಸಿದ ಸವಾಲುಗಳು, ಪಕ್ಷದವರಿಂದಲೇ ಆದ ವಿಶ್ವಾಸಘಾತುಕ ತನದ ಬಗ್ಗೆ ಹೇಳಿಕೊಂಡರು. ಅಲ್ಲೇ ಸಿಎಂ ಸ್ಥಾನದ ಪದತ್ಯಾಗ ಘೋಷಿಸಿದರು. ಅದೇ ಗಳಿಗೆಯಲ್ಲಿ ಅವರ ವಿಧಾನ ಪರಿಷತ್ ಸ್ಥಾನಕ್ಕೂ ರಾಜೀನಾಮೆ ಘೋಷಣೆ ಮಾಡಿದರು.
ಅದಾರ ಮರು ಗಳಿಗೆಯಲ್ಲಿ ತಾವೇ ಕಾರು ಚಾಲನೆ ಮಾಡಿಕೊಂಡು ರಾಜಭವನಕ್ಕೆ ಬಂದ ಸಿಎಂ ಉದ್ದವ್ ಠಾಕ್ರೆ ರಾಜ್ಯಪಾಲ ಭಗತ್ಸಿಗ್ ಕೋಶಿಯಾರಿಗೆ ತಮ್ಮ ರಾಜೀನಾಮೆಪತ್ರವನ್ನು ಹಸ್ತಾಂತರಿಸಿದರು. ಈ ವೇಳೆ ಅವರ ಪತ್ನಿ ರಶ್ಮಿ ಮತ್ತು ಮಾಜಿ ಸಚಿವರು ಹಾಜರಿದ್ದರು.