ಕರ್ನಾಟಕ

karnataka

ETV Bharat / bharat

ಶಿವಾಜಿ, ಅಂಬೇಡ್ಕರ್​ ಪ್ರತಿಮೆಗೆ ಶಿಂದೆ ನಮನ.. ನಡ್ಡಾ, ಶಾ, ಮೋದಿ ಜೊತೆ ಸಚಿವ ಸಂಪುಟದ ಚರ್ಚೆ

ನೂತನ ಸಚಿವ ಸಂಪುಟ ರಚನೆ ಮಾಡುವ ಕಸರತ್ತು ನಡೆಸುತ್ತಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಹಾಗೂ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಇಂದು ದೆಹಲಿ ಪ್ರವಾಸ ಕೈಗೊಂಡಿದ್ದಾರೆ.

Maharashtra CM Eknath Shinde
Maharashtra CM Eknath Shinde

By

Published : Jul 9, 2022, 3:52 PM IST

ನವದೆಹಲಿ: ಮಹಾರಾಷ್ಟ್ರದಲ್ಲಿ ಇದೀಗ ಮುಖ್ಯಮಂತ್ರಿ ಏಕನಾಥ್ ಶಿಂದೆ ನೇತೃತ್ವದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಉಪ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್​​​ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಸರ್ಕಾರ ರಚನೆಯಾಗಿ ವಾರ ಕಳೆದರೂ ನೂತನ ಸಚಿವ ಸಂಪುಟ ಅಂತಿಮವಾಗಿಲ್ಲ. ಹೀಗಾಗಿ, ಶಿಂದೆ - ಫಡ್ನವೀಸ್​​ ಇಂದು ದೆಹಲಿ ಪ್ರವಾಸ ಕೈಗೊಂಡಿದ್ದು, ಬಿಜೆಪಿ ಹೈಕಮಾಂಡ್​ ಭೇಟಿಯಲ್ಲಿ ಬ್ಯುಸಿಯಾಗಿದ್ದಾರೆ.

ದೆಹಲಿ ಪ್ರವಾಸದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನ ಅವರನ್ನ ಭೇಟಿಯಾಗಲಿದ್ದಾರೆ. ಈಗಾಗಲೇ ಅಮಿತ್ ಶಾ, ನಡ್ಡಾ ಜೊತೆ ಸಿಎಂ ಶಿಂದೆ ಹಾಗೂ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​​ ಮಾತುಕತೆ ನಡೆಸಿದ್ದು. ಸಚಿವ ಸಂಪುಟದ ಬಗ್ಗೆ ಚರ್ಚೆ ನಡೆಸಿದ್ದಾಗಿ ತಿಳಿದು ಬಂದಿದೆ.

ಮುಖ್ಯಮಂತ್ರಿಯಾಗಿ ಏಕನಾಥ್ ಶಿಂದೆ ಹಾಗೂ ಉಪಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್​ ಜೂನ್​ 30 ರಂದು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಇದಾದ ಬಳಿಕ ಶಿವಸೇನೆ ಹಾಗೂ ಬಿಜೆಪಿ ಯಾವ ರೀತಿಯಾಗಿ ಕ್ಯಾಬಿನೆಟ್ ಹಂಚಿಕೆ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಿದೆ.

ಲಭ್ಯವಾಗಿರುವ ಮಾಹಿತಿ ಪ್ರಕಾರ ಬಿಜೆಪಿ 25 ಸಚಿವ ಸ್ಥಾನ ಪಡೆದುಕೊಳ್ಳಲಿದ್ದು, ಶಿವಸೇನೆ 13 ಹಾಗೂ ಇತರ ಮಿತ್ರ ಪಕ್ಷಗಳಿಗೆ 9 ಸ್ಥಾನ ಬಿಟ್ಟುಕೊಡಲು ಒಪ್ಪಿಕೊಂಡಿರುವುದಾಗಿ ವರದಿಯಾಗಿದೆ. ಏಕನಾಥ್​​ ಸಚಿವ ಸಂಪುಟದಲ್ಲಿ ಒಟ್ಟು 45 ಕ್ಯಾಬಿನೆಟ್​ ಮಂತ್ರಿಗಳು ಇರಲಿದ್ದಾರೆ.

ಇದನ್ನೂ ಓದಿರಿ:ಮಹಾರಾಷ್ಟ್ರ ಸಿಎಂ ಶಿಂದೆ ಸಚಿವ ಸಂಪುಟದಲ್ಲಿ 25 ಬಿಜೆಪಿ, 13 ಶಿವಸೇನೆ ಸಚಿವರು!?

ಶಿವಾಜಿ, ಅಂಬೇಡ್ಕರ್ ಪ್ರತಿಮೆಗೆ ನಮನ: ದೆಹಲಿ ಪ್ರವಾಸ ಕೈಗೊಂಡಿರುವ ಏಕನಾಥ್ ಶಿಂದೆ ಇಂದು ಬೆಳಗ್ಗೆ ದೆಹಲಿಯ ಮಹಾರಾಷ್ಟ್ರ ಸದನದಲ್ಲಿರುವ ಛತ್ರಪತಿ ಶಿವಾಜಿ ಹಾಗೂ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ ನಮನ ಸಲ್ಲಿಸಿದರು.

ABOUT THE AUTHOR

...view details