ಇಂಫಾಲ, ಮಣಿಪುರ:ವಿಧಾನಸಭೆ ಚುನಾವಣೆಯ ಫಲಿತಾಂಶ ಒಂದೊಂದಾಗಿ ಹೊರಬೀಳುತ್ತಿದೆ. ಮಣಿಪುರ ಮುಖ್ಯಮಂತ್ರಿಯಾದ ಬಿಜೆಪಿ ಪಕ್ಷದ ಎನ್ ಬಿರೇನ್ ಸಿಂಗ್ ಅವರು ಹಿಂಗಾಂಗ್ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ ಎಂದು ತಿಳಿದುಬಂದಿದೆ. ಬಿರೇನ್ ಸಿಂಗ್ ಅವರ ವಿರುದ್ಧ ಕಾಂಗ್ರೆಸ್ ಪ್ರತಿಸ್ಪರ್ಧಿ ಪಿ.ಶರತ್ಚಂದ್ರ ಅವರು ಸ್ಪರ್ಧಿಸಿದ್ದರು.
Manipur Result: 18 ಸಾವಿರ ಮತಗಳ ಅಂತರದಿಂದ ಸಿಎಂ ಬಿರೇನ್ ಸಿಂಗ್ ಗೆಲುವು - ಮಣಿಪುರ ಚುನಾವಣಾ ಫಲಿತಾಂಶ
ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಹಿಂಗಾಂಗ್ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ ಎಂದು ತಿಳಿದುಬಂದಿದ್ದು, ಅವರು ಕಾಂಗ್ರೆಸ್ನ ಪಿ.ಶರತ್ಚಂದ್ರ ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ.
Manipur Result: 18 ಸಾವಿರ ಮತಗಳ ಅಂತರದಿಂದ ಸಿಎಂ ಬಿರೇನ್ ಸಿಂಗ್ ಗೆಲುವು
ಸುಮಾರು 18,000 ಮತಗಳಿಂದ ಬಿರೇನ್ ಸಿಂಗ್ ಗೆದ್ದಿದ್ದಾರೆ. ಚುನಾವಣಾ ಆಯೋಗದ ಪ್ರಕಾರ, ಈಶಾನ್ಯ ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ 25 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ 11, ಎನ್ಪಿಪಿ 12, ಜೆಡಿಯು ಮೂರು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಇದನ್ನೂ ಓದಿ:Goa result: ಬಿಜೆಪಿಯ ದಿವ್ಯ ರಾಣೆ, ಕಾಂಗ್ರೆಸ್ನ ದಿಗಂಬರ್ ಕಾಮತ್ಗೆ ಗೆಲುವು
Last Updated : Mar 10, 2022, 12:24 PM IST