ಚೆನ್ನೈ (ತಮಿಳುನಾಡು) :ಡಿಎಂಕೆ ಪಕ್ಷಕ್ಕೆ 75 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಅದರ ನಾಯಕ ಮತ್ತು ಸಿಎಂ ಎಂಕೆ ಸ್ಟಾಲಿನ್ ಅವರು 'ಸ್ಪೀಕಿಂಗ್ ಫಾರ್ ಇಂಡಿಯಾ' ಎಂಬ ಪಾಡ್ಕಾಸ್ಟಿಂಗ್ ಕಾರ್ಯಕ್ರಮವನ್ನು ಸೋಮವಾರ ಆರಂಭಿಸಿದ್ದು, ಮೊದಲ ಕಂತಿನ ಕಾರ್ಯಕ್ರಮವನ್ನು ಇಂದು ಬಿಡುಗಡೆ ಮಾಡಿದರು. ತಮಿಳು, ಕನ್ನಡ, ಮಲಯಾಳಂ, ಹಿಂದಿ ಸೇರಿದಂತೆ ಹಲವು ಭಾಷೆಗಳನ್ನು ಇದು ಪ್ರಸಾರ ಕಂಡಿದೆ.
ಸ್ಪೀಕಿಂಗ್ ಫಾರ್ ಇಂಡಿಯಾ ಕಾರ್ಯಕ್ರಮದಲ್ಲಿ ದೇಶದ ಹಲವು ವಿಷಯಗಳ ಮೇಲೆ ಸ್ಟಾಲಿನ್ ಅವರ ಗಮನ ಸೆಳೆದರು. ಅದರ ಆಡಿಯೋ ರೆಕಾರ್ಡ್ ಅನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಪಾಡ್ಕಾಸ್ಟಿಂಗ್ ಕಾರ್ಯಕ್ರಮವನ್ನು ಆರಂಭಿಸುವುದಾಗಿ ಡಿಎಂಕೆ ಆಗಸ್ಟ್ 31 ರಂದು ಘೋಷಣೆ ಮಾಡಿತ್ತು.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಕಳೆದ ಕೆಲವು ತಿಂಗಳುಗಳಿಂದ 'ನಿಮ್ಮಲ್ಲಿ ಒಬ್ಬರು' ಎಂಬ ವಿಷಯದ ಕುರಿತು ಪ್ರಶ್ನೋತ್ತರ ರೂಪದಲ್ಲಿ ವಿಡಿಯೋ ಮೂಲಕ ವಿವಿಧ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಈಗ ಆಡಿಯೋ ಮಾದರಿಯ ಸ್ಪೀಕಿಂಗ್ ಫಾರ್ ಇಂಡಿಯಾ ಶೀರ್ಷಿಕೆಯಡಿ ಪಾಡ್ಕಾಸ್ಟ್ ಕಾರ್ಯಕ್ರಮವನ್ನೂ ಆರಂಭಿಸಿದ್ದಾರೆ.
ಆಡಿಯೋದಲ್ಲೇನಿದೆ?;ಸ್ಟಾಲಿನ್ ಅವರು ಬಿಡುಗಡೆ ಮಾಡಿರುವ ಮೊದಲ ಕಂತಿನ ಆಡಿಯೋದಲ್ಲಿ ಗುಜರಾತ್ ಮಾದರಿಯ ಅಭಿವೃದ್ಧಿ, 2024 ರ ಚುನಾವಣೆ, ದೇಶದ ಉದ್ಯಮಿಗಳು ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಪ್ರಧಾನಿ ಮೋದಿ ಅವರ ಬಗ್ಗೆಯೂ ಆಡಿಯೋದಲ್ಲಿ ಹೇಳಲಾಗಿದೆ.