ಕೋಲ್ಕತ್ತಾ(ಪಶ್ಚಿಮ ಬಂಗಾಳ):ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕಾವು ರಂಗೇರಿದ್ದು, 30 ಕ್ಷೇತ್ರಗಳಿಗೆ ನಿನ್ನೆ ಮೊದಲ ಹಂತದಲ್ಲಿ ಮತದಾನ ನಡೆದಿದೆ. ಇದರ ಮಧ್ಯೆ ಮಮತಾ ಬ್ಯಾನರ್ಜಿ ತಮಗೆ ಫೋನ್ ಕರೆ ಮಾಡಿ ಸಹಾಯ ಕೇಳಿದ್ದಾರೆ ಎಂದು ಬಿಜೆಪಿ ಮುಖಂಡ ಪ್ರಲೋಯ್ ಪಾಲ್ ಹೇಳಿಕೊಂಡಿದ್ದಾರೆ.
ನಿನ್ನೆ ಬೆಳಗ್ಗೆ 9 ಗಂಟೆಗೆ ನಾನು ಮಮತಾ ಅವರಿಂದ ಫೋನ್ ಕರೆ ಸ್ವೀಕಾರ ಮಾಡಿದ್ದು, ಈ ವೇಳೆ ಅವರು ನೀವು ಹೋರಾಟಗಾರರು ನಮ್ಮೊಂದಿಗೆ ಬರಬೇಕು. ಮರಳಿ ಟಿಎಂಸಿಗೆ ಬಂದು ಬಿಜೆಪಿ ನಾಯಕ ಸುವೇಂದು ವಿರುದ್ಧ ಗೆಲುವು ಸಾಧಿಸಲು ಸಹಾಯ ಮಾಡುವಂತೆ ತಿಳಿಸಿದ್ದಾಗಿ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಲೋಯ್ ಇದು ಪ್ರತಿಷ್ಠೆಯ ವಿಷಯ. ಸುವೇಂದು ಅವರ ಹೋರಾಟಕ್ಕೆ ನಾನು ಬೆಂಬಲ ಸೂಚಿಸಿದ್ದು, ಇದೀಗ ಬಿಜೆಪಿ ಪರ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆ. ಇದೇ ವಿಷಯ ಇದೀಗ ಆಡಳಿತ ಪಕ್ಷ ಟಿಎಂಸಿ ಹಾಗೂ ಬಿಜೆಪಿ ನಡುವೆ ವಾಗ್ವಾದಕ್ಕೆ ಕಾರಣವಾಗಿದ್ದು, ಒಬ್ಬರ ಮೇಲೆ ಇನ್ನೊಬ್ಬರ ಆರೋಪ ಮುಂದುವರೆದಿದೆ.