ಮುಂಬೈ(ಮಹಾರಾಷ್ಟ್ರ): ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರ ಹುಟ್ಟೂರಿಗೆ ರಸ್ತೆ, ಸೇತುವೆ ಇಲ್ಲ. ಆದರೆ ಎರಡು ಹೆಲಿಪ್ಯಾಡ್ಗಳು ಇವೆ. ಶಾಲೆಗೆ ಹೋಗಲು ವಿದ್ಯಾರ್ಥಿಗಳು ನಿತ್ಯ ಇನ್ನಿಲ್ಲದ ರೀತಿಯ ತೊಂದರೆ ಅನುಭವಿಸಬೇಕಾಗಿದೆ. ಈ ಸ್ಥಿತಿಯ ಕುರಿತು ಬಾಂಬೆ ಹೈಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದ್ದು, ಏಕನಾಥ್ ಶಿಂದೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಹಳ್ಳಿಗಳಲ್ಲಿ ಹೆಲಿಪ್ಯಾಡ್ಗಳಿರುವ ಬಗ್ಗೆ ನಮಗೆ ಯಾವುದೇ ರೀತಿಯ ಆಕ್ಷೇಪ ಇಲ್ಲ. ಆದರೆ, ಉತ್ತಮ ರಸ್ತೆ ನಿರ್ಮಾಣ ಮಾಡಿ. ಇದರಿಂದ ಮಕ್ಕಳು ಶಾಲೆಗೆ ಹೋಗಬಹುದು ಎಂದು ನ್ಯಾಯಮೂರ್ತಿ ಪಿಬಿ ವರಾಲೆ ನೇತೃತ್ವದ ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.