ನವದೆಹಲಿ:ರಾಜಧಾನಿ ದೆಹಲಿಯಲ್ಲಿ ಆಮ್ಲಜನಕದ ಬಿಕ್ಕಟ್ಟಿನ ಕುರಿತ ವರದಿಯ ಬಗ್ಗೆ ವಿವಾದ ಹೆಚ್ಚುತ್ತಿದೆ. ಈ ಎಲ್ಲ ಗೊಂದಲಗಳ ನಡುವೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಟ್ವೀಟ್ ಮೂಲಕ ನೀಡಿದ್ದು, ಅದು ಈಗ ಮುನ್ನೆಲೆಗೆ ಬಂದಿದೆ.
ದೆಹಲಿ ಆಕ್ಸಿಜನ್ ವರದಿ ವಿವಾದ: ಸಿಎಂ ಕೇಜ್ರಿವಾಲ್ ಹೊಸ Tweet! - ದೆಹಲಿ ಆಕ್ಸಿಜನ್ ವರದಿ ವಿವಾದ
ಸುಪ್ರೀಂಕೋರ್ಟ್ ರಚಿಸಿದ ಆಕ್ಸಿಜನ್ ಸಮಿತಿ ವರದಿಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದ್ದು, ಎಲ್ಲಾ ವಿರೋಧ ಪಕ್ಷಗಳು ದೆಹಲಿ ಸರ್ಕಾರದ ಆಮ್ಲಜನಕ ನಿರ್ವಹಣೆ ಕುರಿತು ಪ್ರಶ್ನೆಗಳನ್ನು ಎತ್ತುತ್ತಿವೆ.
"ಆಮ್ಲಜನಕದ ಬಗ್ಗೆ ನಿಮ್ಮ ಹೋರಾಟವು ಮುಗಿದಿದ್ದರೆ, ಸ್ವಲ್ಪ ಕೆಲಸ ಮಾಡೋಣ? ಮೂರನೆಯ ತರಂಗದಲ್ಲಿ ಯಾರಿಗೂ ಆಮ್ಲಜನಕದ ಕೊರತೆ ಇಲ್ಲದಂತಹ ವ್ಯವಸ್ಥೆಯನ್ನು ಒಟ್ಟಿಗೆ ನಿರ್ಮಿಸೋಣ. ಎರಡನೇ ತರಂಗದಲ್ಲಿ ಜನರು ಆಮ್ಲಜನಕದ ತೀವ್ರ ಕೊರತೆ ಅನುಭವಿಸಿದರು. ಈಗ ಮೂರನೇ ತರಂಗದಲ್ಲಿ ಹೀಗಾಗಬಾರದು. ನಾವು ನಮ್ಮ ನಡುವೆ ಹೋರಾಡಿದರೆ ಕೊರೊನಾ ಗೆಲ್ಲುತ್ತದೆ. ನಾವು ಒಟ್ಟಾಗಿ ಹೋರಾಡಿದರೆ ದೇಶ ಗೆಲ್ಲುತ್ತದೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.
ಸುಪ್ರೀಂಕೋರ್ಟ್ ರಚಿಸಿದ ಆಕ್ಸಿಜನ್ ಸಮಿತಿ ವರದಿಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ. ಎಲ್ಲ ವಿರೋಧ ಪಕ್ಷಗಳು ದೆಹಲಿ ಸರ್ಕಾರದ ಆಮ್ಲಜನಕ ನಿರ್ವಹಣೆ ಕುರಿತು ಪ್ರಶ್ನೆಗಳನ್ನು ಎತ್ತುತ್ತಿವೆ. ಈ ಕುರಿತು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಡಿಜಿಟಲ್ ಪತ್ರಿಕಾಗೋಷ್ಠಿ ನಡೆಸಿ, ಅಂತಹ ಯಾವುದೇ ವರದಿ ಇಲ್ಲ ಎಂದು ಸ್ಪಷ್ಟನೆ ಕೂಡಾ ನೀಡಿದ್ದರು.