ನವದೆಹಲಿ:ಕೊರೊನಾ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಅನೇಕರು ಡೆಡ್ಲಿ ವೈರಸ್ನಿಂದ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದು, ದೆಹಲಿಯಲ್ಲೂ ಅನೇಕರು ಸಾವಿಗೀಡಾಗಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ವೈರಸ್ಗೆ ಬಲಿಯಾಗಿರುವ 26 ವರ್ಷದ ವೈದ್ಯನೊಬ್ಬನ ಕುಟುಂಬಕ್ಕೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇದೀಗ 1 ಕೋಟಿ ರೂ. ಪರಿಹಾರ ನೀಡಿದ್ದಾರೆ.
ಕೊರೊನಾ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ಡಾ. ಅನಾಸ್ ಡೆಡ್ಲಿ ವೈರಸ್ನಿಂದಾಗಿ ತಮ್ಮ ಪ್ರಾಣ ಕಳೆದುಕೊಂಡಿದ್ದರು. ಇಂದು ಅವರ ಮನೆಗೆ ಭೇಟಿ ನೀಡಿರುವ ದೆಹಲಿ ಸಿಎಂ, ತಂದೆಗೆ ಸಾಂತ್ವನ ಹೇಳಿದ್ದು, 1 ಕೋಟಿ ರೂ. ಪರಿಹಾರ ಚೆಕ್ ನೀಡಿದ್ದಾರೆ. ನಿನ್ನೆ ಕೂಡ ಕೋವಿಡ್ನಿಂದ ಸಾವನ್ನಪ್ಪಿದ್ದ ಶಿಕ್ಷಕನ ಕುಟುಂಬಕ್ಕೆ ಭೇಟಿ ನೀಡಿದ್ದ ಕೇಜ್ರಿವಾಲ್ 1 ಕೋಟಿ ರೂ. ಪರಿಹಾರ ಚೆಕ್ ನೀಡಿದ್ದರು.