ಹೈದರಾಬಾದ್: ಮನುಷ್ಯ ಏನಾದರೂ ಯಶಸ್ಸು ಸಾಧಿಸಿದರೆ ಅದನ್ನು ತನ್ನ ಪ್ರತಿಭೆ ಎಂದು ಹೇಳಿಕೊಳ್ಳುತ್ತಾನೆ. ಆದರೆ ಯಾವುದೇ ವಿಪತ್ತು ಬಂದಾಗ ಅದು ದೇವರ ತಪ್ಪು ಎಂದು ಮನುಷ್ಯ ಬಿಂಬಿಸಿಕೊಳ್ಳುತ್ತಾನೆ ಎಂದು ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಹೇಳಿದ್ದಾರೆ.
ಧರ್ಮಭ್ರಷ್ಟತೆ ಮನುಷ್ಯನನ್ನು ಬೆದರಿಸುತ್ತದೆ ಮತ್ತು ಕೆಲವರು ಧಾರ್ಮಿಕ ಅಜ್ಞಾನದಿಂದ ಸಮಾಜದಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತಿದ್ದಾರೆ ಎಂದು ಹೇಳಿದರು. ಹೈದರಾಬಾದ್ ನಗರದ ಹೊರವಲಯದ ನರಸಿಂಗಿಯಲ್ಲಿ ಹರೇ ಕೃಷ್ಣ ಮೂವ್ ಮೆಂಟ್ ಸಂಸ್ಥೆಯ ಆಶ್ರಯದಲ್ಲಿ 400 ಅಡಿ ಎತ್ತರದ ಹರೇಕೃಷ್ಣ ಹೆರಿಟೇಜ್ ಟವರ್ (ದೇವಾಲಯ) ನಿರ್ಮಾಣಕ್ಕೆ ಸಿಎಂ ಕೆಸಿಆರ್ ಶಂಕುಸ್ಥಾಪನೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, "ಹರೇಕೃಷ್ಣ ಫೌಂಡೇಶನ್ ಉತ್ತಮ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಹರೇಕೃಷ್ಣ ಫೌಂಡೇಶನ್ ನಡೆಸುತ್ತಿರುವ ಅಕ್ಷಯಪಾತ್ರ ಕಾರ್ಯಕ್ರಮ ತುಂಬಾ ಚೆನ್ನಾಗಿದೆ. ಹೈದರಾಬಾದ್ನಲ್ಲಿ ಶ್ರೀಮಂತರು ಸಹ 5 ರೂಪಾಯಿ ಊಟ ಮಾಡುತ್ತಿದ್ದಾರೆ. ಪ್ರಾಮಾಣಿಕತೆ ಇದ್ದರೆ ಮಾತ್ರ ಅಕ್ಷಯಪಾತ್ರದಂತಹ ಕಾರ್ಯಕ್ರಮಗಳು ನಡೆಯಲು ಸಾಧ್ಯ" ಎಂದು ಸಿಎಂ ಕೆಸಿಆರ್ ಹೇಳಿದ್ದಾರೆ.
ರಾಧಾಕೃಷ್ಣರ ಜೊತೆಗೆ 8 ಪ್ರಮುಖ ಗೋಪಿಕೆಯರ ವಿಗ್ರಹ:ಶ್ರೀಕೃಷ್ಣ ಗೋ ಸೇವಾ ಮಂಡಳಿಯು ನೀಡಿದ ಎರಡು ಎಕರೆ ಜಾಗದಲ್ಲಿ ರೂ 200 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಗೋಪುರ ನಗರದ ಸಾಂಸ್ಕೃತಿಕ ಹೆಗ್ಗುರುತಾಗಿ ನಿಲ್ಲಲಿದೆ. ದೇವಸ್ಥಾನದ ಮಂಟಪದಲ್ಲಿ ರಾಧಾಕೃಷ್ಣರ ಜೊತೆಗೆ 8 ಪ್ರಮುಖ ಗೋಪಿಕೆಯರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗುವುದು. ತಿರುಮಲ ಶೈಲಿಯಲ್ಲಿ ಅತಿ ದೊಡ್ಡ ಪ್ರಾಕಾರವಿರುವ ವೆಂಕಟೇಶ್ವರ ಸ್ವಾಮಿಯ ದೇವಾಲಯವೂ ಇರಲಿದೆ ಎಂದು ವಿವರಿಸಲಾಗಿದೆ.