ಕರ್ನಾಟಕ

karnataka

ETV Bharat / bharat

ದ್ರೋಹಿ ಹೇಳಿಕೆಯ ನಂತರ ಕೈಹಿಡಿದು ಒಟ್ಟಾಗಿ ಕಾಣಿಸಿಕೊಂಡ ಸಿಎಂ ಗೆಹ್ಲೋಟ್, ಪೈಲಟ್ - ಕಾಂಗ್ರೆಸ್ ಪಕ್ಷ ಒಗ್ಗಟ್ಡಾಗಿದೆ

ಸಿಎಂ ಅಶೋಕ್ ಗೆಹ್ಲೋಟ್, ಸಚಿನ ಪೈಲಟ್​ರನ್ನು ದ್ರೋಹಿ ಎಂದು ಕರೆದಿದ್ದರು. ಆದರೆ ಈಗ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಇಬ್ಬರೂ ಕೈ ಹಿಡಿದುಕೊಂಡು ಪೋಸ್ ನೀಡುವ ಮೂಲಕ ಭಿನ್ನಮತದ ಬಿಕ್ಕಟ್ಟನ್ನು ಶಮನಗೊಳಿಸಲಾಗಿದೆ ಎಂದು ಸಂದೇಶ ನೀಡಿದಂತಾಗಿದೆ.

ದ್ರೋಹಿ ಹೇಳಿಕೆಯ ನಂತರ ಕೈಹಿಡಿದು ಒಟ್ಟಾಗಿ ಕಾಣಿಸಿಕೊಂಡ ಸಿಎಂ ಗೆಹ್ಲೋಟ್, ಪೈಲಟ್
CM Gehlot the pilot together holding hands after the traitorous statement

By

Published : Nov 30, 2022, 12:45 PM IST

ಜೈಪುರ್ (ರಾಜಸ್ಥಾನ):ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಇಬ್ಬರೂ "ಪಕ್ಷದ ಆಸ್ತಿ" ಎಂದು ಬಣ್ಣಿಸಿದ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಮಂಗಳವಾರ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಪುನರುಚ್ಚರಿಸಿದರು. ಈ ಮೂಲಕ ವೇಣುಗೋಪಾಲ್ ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿನ ಸಂದೇಶ ರವಾನಿಸುವ ಪ್ರಯತ್ನ ಮಾಡಿದ್ದಾರೆ.

ಸಿಎಂ ಅಶೋಕ್ ಗೆಹ್ಲೋಟ್, ಸಚಿನ ಪೈಲಟ್​ರನ್ನು ದ್ರೋಹಿ ಎಂದು ಕರೆದಿದ್ದರು. ಆದರೆ ಈಗ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಇಬ್ಬರೂ ಕೈ ಹಿಡಿದುಕೊಂಡು ಪೋಸ್ ನೀಡುವ ಮೂಲಕ ಭಿನ್ನಮತದ ಬಿಕ್ಕಟ್ಟನ್ನು ಶಮನಗೊಳಿಸಲಾಗಿದೆ ಎಂದು ಸಂದೇಶ ನೀಡಿದಂತಾಗಿದೆ. ಮೂಲಗಳ ಪ್ರಕಾರ ವೇಣುಗೋಪಾಲ್ ಅವರು ಜೈಪುರದ ರಾಜ್ಯ ಕಾಂಗ್ರೆಸ್ ಸಮಿತಿ ವಾರ್ ರೂಂನಲ್ಲಿ ಪಕ್ಷದ ಎಲ್ಲಾ ರಾಜ್ಯ ನಾಯಕರ ಸಭೆ ನಡೆಸಿದರು.

ನಾವು ಒಗ್ಗಟ್ಟಾಗಿದ್ದೇವೆ. ಇಲ್ಲಿ ಕಾಂಗ್ರೆಸ್ ಪಕ್ಷ ಒಗ್ಗಟ್ಡಾಗಿದೆ ಎಂಬುದನ್ನು ಅಶೋಕ್ ಜಿ ಮತ್ತು ಸಚಿನ್ ಪೈಲಟ್ ಜಿ ತೋರಿಸಿದ್ದಾರೆ. ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಇಬ್ಬರೂ ಪಕ್ಷಕ್ಕೆ ಆಸ್ತಿ ಎಂದು ರಾಹುಲ್ ಗಾಂಧಿ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ವೇಣುಗೋಪಾಲ್ ಹೇಳಿದರು.

ಬಂಡಾಯವೇ ರಾಜ್ಯ ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟನ್ನು ಉಂಟುಮಾಡಿದೆ ಎಂದು ಆರೋಪಿಸಿರುವ ಸಚಿನ್ ಪೈಲಟ್, ಡಿಸೆಂಬರ್ 5 ರಂದು ರಾಜ್ಯವನ್ನು ಪ್ರವೇಶಿಸುವ ಭಾರತ್ ಜೋಡೋ ಯಾತ್ರೆಯನ್ನು ಸ್ವಾಗತಿಸಲು ರಾಜ್ಯವು ಸಜ್ಜಾಗಿದೆ ಎಂದು ಹೇಳಿದರು.

ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯನ್ನು ರಾಜಸ್ಥಾನದಲ್ಲಿ ಗರಿಷ್ಠ ಉತ್ಸಾಹದಿಂದ ಸ್ವಾಗತಿಸಲಾಗುವುದು. ಯಾತ್ರೆಯು ರಾಜ್ಯದಲ್ಲಿ 12 ದಿನ ನಡೆಯಲಿದೆ. ಎಲ್ಲಾ ವರ್ಗಗಳ ಜನರ ಭಾಗವಹಿಸುವಿಕೆಯೊಂದಿಗೆ ಇದೊಂದು ಐತಿಹಾಸಿಕ ಯಾತ್ರೆಯಾಗಲಿದೆ ಎಂದು ಪೈಲಟ್ ಈ ಸಂದರ್ಭದಲ್ಲಿ ಹೇಳಿದರು.

ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಪಕ್ಷಕ್ಕೆ ಆಸ್ತಿ ಎಂದು ರಾಹುಲ್ ಗಾಂಧಿ ನಿನ್ನೆ ಹೇಳಿದ್ದರು. ನಾಯಕರಿಂದ ಸಂದೇಶವೊಂದು ಬಂದಾಗ ಅದು ಕೆಳಮಟ್ಟದವರೆಗೂ ತಲುಪುತ್ತದೆ ಮತ್ತು ಪಕ್ಷದ ಉನ್ನತಿಗಾಗಿ ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂಬುದು ನಮ್ಮ ಪಕ್ಷದ ವಿಶೇಷತೆಯಾಗಿದೆ ಎಂದು ಗೆಹ್ಲೋಟ್ ತಿಳಿಸಿದರು.

ರಾಜಸ್ಥಾನದಲ್ಲಿ 2023ರ ವಿಧಾನಸಭಾ ಚುನಾವಣೆಯ ಸವಾಲು ನಮ್ಮ ಮುಂದಿದೆ. ದೇಶದ ಹಿತಕ್ಕಾಗಿ ಚುನಾವಣೆಯಲ್ಲಿ ಗೆಲ್ಲುವುದು ನಮಗೆ ಅತ್ಯಗತ್ಯ. ಕಾಂಗ್ರೆಸ್ ಬಲಿಷ್ಠವಾಗಿದ್ದರೆ ಮಾತ್ರ ದೇಶದ ಭವಿಷ್ಯ ಸದೃಢವಾಗಿರುತ್ತದೆ. ಇದೇ ಸವಾಲು ಎದುರಿಸಿದ್ದ ಇಂದಿರಾಗಾಂಧಿಯವರು ದೇಶಕ್ಕಾಗಿ ತಮ್ಮ ಪ್ರಾಣ ತ್ಯಜಿಸಿದರು ಮತ್ತು ರಾಜೀವ್ ಗಾಂಧಿ ಶಾಂತಿ ಸ್ಥಾಪಿಸುವ ಪ್ರಯತ್ನದಲ್ಲಿ ಪ್ರಾಣ ಬಿಟ್ಟರು. ಕಾಂಗ್ರೆಸ್ ಮತ್ತು ಭಾರತ ದೇಶ ಒಂದೇ ಡಿಎನ್‌ಎಯನ್ನು ಹೊಂದಿದೆ ಎಂದು ಗೆಹ್ಲೋಟ್ ಹೇಳಿದರು.

ಇದನ್ನೂ ಓದಿ: ಸಚಿನ್ ಪೈಲಟ್ ದ್ರೋಹಿ- ಸಿಎಂ ಗೆಹ್ಲೋಟ್: ಇಬ್ಬರೂ ಪಕ್ಷದ ಆಸ್ತಿ- ರಾಹುಲ್!

ABOUT THE AUTHOR

...view details